ಮುಖಪುಟ / ಪುಸ್ತಕ ಸಂಪದ / ಸುಭಾಷಿತಗಳು ಮತ್ತು ಇತರ ಹಿತನುಡಿಗಳು
ಸುಭಾಷಿತಗಳು ಮತ್ತು ಇತರ ಹಿತನುಡಿಗಳು

ಸುಭಾಷಿತಗಳು ಮತ್ತು ಇತರ ಹಿತನುಡಿಗಳು

ಲೇಖಕರು: ಡಾ. ಎಚ್.ಎ. ರಾಮ ಅಯ್ಯರ್ ಮತ್ತಿತರರು

₹575.00 ಲಭ್ಯವಿದೆ

ಪುಸ್ತಕದ ಬಗ್ಗೆ

ಸುಭಾಷಿತಗಳು ಎಲ್ಲ ಭಾಷೆಗಳಲ್ಲಿ ಇರಬಹುದಾದರೂ ಮೂಲತಃ ಅದು ಸಂಸ್ಕೃತದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರ, ಲೋಕಜ್ಞಾನವನ್ನು ವಿಸ್ತರಿಸುವ, ಮನಕ್ಕೆ ತಂಪೆರೆಯುವ, ವಿವೇಕವನ್ನು ಎಚ್ಚರಿಸಿ ಬದುಕಿಗೆ ಮಾರ್ಗದರ್ಶನ ನೀಡುವ ಸುಭಾಷಿತಗಳನ್ನು ಮೆಚ್ಚದವರಾರು? ಸುಭಾಷಿತವೆಂದರೆ ಚೆನ್ನಾಗಿ ಹೇಳಿದ್ದು, ಒಳ್ಳೆಯ ಮಾತು ಎಂದರ್ಥ. ಮಹಾಭಾರತ, ರಾಮಾಯಣ, ಭಗವದ್ಗೀತೆ, ಭಾಗವತಾದಿ ಪುರಾಣಗಳು ಹಾಗೂ ಸಂಸ್ಕೃತ ಕಾವ್ಯಗಳು ಸುಭಾಷಿತಗಳ ಮುಖ್ಯ ಆಕರಗಳು. ನಾರಾಯಣ ಪಂಡಿತನ ಹಿತೋಪದೇಶ, ಭರ್ತೃಹರಿಯ ತ್ರಿಶತಕಗಳಲ್ಲಿರುವ ಬಹುತೇಕ ಎಲ್ಲ ಪದ್ಯಗಳೂ ಸುಭಾಷಿತಗಳೇ. ಕೃಷ್ಣಶರ್ಮನ 'ಸುಭಾಷಿತ ರತ್ನ ಭಾಂಡಾಗಾರ' ಹತ್ತು ಸಾವಿರಕ್ಕೂ ಹೆಚ್ಚು ಸುಭಾಷಿತಗಳ ಬೃಹತ್ ಸಂಗ್ರಹ. ಸುಭಾಷಿತಗಳನ್ನು ಜಾಣತನದಿಂದ, ವಿನೋದದಿಂದ ಕೂಡಿದ ಸಂಕ್ಷಿಪ್ತ ಪದ್ಯಗಳೆನ್ನಬಹುದು. ಕೆಲವು ಸುಭಾಷಿತಗಳು ಬದುಕಿನ ವಾಸ್ತವವನ್ನು, ಸತ್ಯವನ್ನು ಬೋಧಿಸಿದರೆ ಕೆಲವು ಒಗಟುಗಳಾಗಿ ತೋರುತ್ತವೆ; ಕೆಲವು ಬದುಕಿನ ಸೂತ್ರಗಳು ಮತ್ತೆ ಕೆಲವು ಪೌರುಷವನ್ನು ಉದ್ದೀಪಿಸುವಂಥವು.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹575.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?