ಮುಖಪುಟ / ಪುಸ್ತಕ ಸಂಪದ / ಸವಿಯೂಟ
ಸವಿಯೂಟ

ಸವಿಯೂಟ

ಲೇಖಕರು: ಸವಿತಾ ಎಸ್. ಭಟ್, ಅಡ್ವಾಯಿ

₹135.00 ₹150.00 10% ರಿಯಾಯಿತಿ ಲಭ್ಯವಿದೆ
₹೧೫ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

ನಮ್ಮ ಭಾರತೀಯ ಅಡುಗೆಗಳ ವೈವಿಧ್ಯದಲ್ಲಿ ದಕ್ಷಿಣ ಭಾರತದ ಅಡುಗೆಗೆ ಬಹಳ ಪ್ರಾಶಸ್ತ್ರವಿದೆ. ನಾವು ಕನ್ನಡಿಗರು "ಶುಚಿಯಾಗಿ” ತಯಾರಿಸಿಕೊಂಡು “ರುಚಿಯಾಗಿ” ಉಣ್ಣುವವರು. ಆದರೆ ರುಚಿಕಟ್ಟಾದ ಅಡುಗೆಯನ್ನು ತಯಾರಿಸುವುದು ಹೇಗೆ ? ಹಿಂದೆ ನಾವೆಲ್ಲರೂ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದೆವು. ಅಂಥಾ ಕುಟುಂಬಗಳಲ್ಲಿ ವಾಸಿಸುತ್ತಿದ್ದ ಎಳೆಯರಿಗೆ ಶಾಖ ಪಾಕಗಳ ಕುರಿತು ಪ್ರತ್ಯೇಕ ಪಾಠ ಬೇಕಾಗಿರಲಿಲ್ಲ. ಆದರೆ ಈಗ ಹಾಗಲ್ಲ ತಮ್ಮ ವಿದ್ಯಾಭ್ಯಾಸ ಮುಗಿದೊಡನೆಯೆ ಎಳೆಯರು ಸ್ವತಂತ್ರ ರಾಗುತ್ತಾರೆ. ಹೆತ್ತವರನ್ನು ಬಿಟ್ಟು ದೂರ ವಾಸಿಸುವ ಪ್ರಸಂಗ ಬರುತ್ತಿದೆ. ಆದರೂ ತಮ್ಮ ತಾಯಿ ತಯಾರಿಸುತ್ತಿದ್ದ ಊಟದ ನೆನಪು ಎಳೆಯರನ್ನೂ ಕಾಡುತ್ತಿದೆಯಲ್ಲ... ಅಂಥಾ ಯುವ ಜನಾಂಗಗಳಿಗೆ ಮನೆಯ ಊಟವನ್ನು ತಾವೇ ತಯಾರಿಸಿಕೊಳ್ಳಲು ಸವಿತಾರವರ ಅಡುಗೆ ಪುಸ್ತಕ 'ಸವಿಯೂಟ' ತುಂಬಾ ಸಹಾಯವಾದೀತು ಎಂದು ನಾನು ಹೇಳಬಯಸುತ್ತಿದ್ದೇನೆ. ಇದೊಂದು ಪಾಕಶಾಸ್ತ್ರಕ್ಕೆ ಮಾರ್ಗದರ್ಶಿಯಾಗಬಲ್ಲ ಆಕರ ಗ್ರಂಥ. ಏಕೆಂದರೆ ಸವಿತಾರವರ ಪುಸ್ತಕದಲ್ಲಿ ಅಡುಗೆ ವಸ್ತುಗಳಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳಿವೆ. ವಸ್ತುಗಳನ್ನು ಜಾಣತನದಿಂದ ಸಂಗ್ರಹಿಸಿ ಇಟ್ಟುಕೊಳ್ಳುವ ಸಲಹೆಗಳಿವೆ. ಈ ಪುಸ್ತಕವು ವಿದೇಶಿ ಕನ್ನಡಿಗರ ಮನವನ್ನೂ ಸೆಳೆದದ್ದು ನಿಜವಾಗಲೂ ಸಂತೋಷವೇ ಸರಿ. ಸೌಗಂಧಿಕಾ, ಉರ್ವಸ್ಟೋರ್ಸ್ ಮಂಗಳೂರು (ಬೆನ್ನುಡಿಯಲ್ಲಿ)
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹135.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?