ಸಿರಿಧಾನ್ಯದ ಸವಿ
ಲೇಖಕರು: ಸವಿತಾ ಎಸ್. ಭಟ್, ಅಡ್ವಾಯಿ
₹60.00
ಲಭ್ಯವಿದೆ
ಪುಸ್ತಕದ ಬಗ್ಗೆ
ಇತ್ತಿಚೇಗೆ ನಮ್ಮ ದೇಶದಲ್ಲಿ, ಮುಖ್ಯವಾಗಿ ನಗರಗಳಲ್ಲಿ, ಆರೋಗ್ಯ ಸಂಬಂಧಿ ಸಮಸ್ಯೆಗಳು ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಜನರ ನೆಮ್ಮದಿಯನ್ನೂ, ಕ್ಷಮತೆಯನ್ನೂ ಕಸಿಯುತ್ತಿರುವ ಈ ಬೆಳವಣಿಗೆಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಮುಖ್ಯವಾಗಿ ಕಾಣುವುದು ಎರಡು ಪರಿಸರ ಮಾಲಿನ್ಯ ಹಾಗೂ ಜೀವನಶೈಲಿ ಬದಲಾವಣೆ.
ಈಗ ಆರೋಗ್ಯದ ಕುರಿತು ಅರಿವು ಮತ್ತೆ ಹೆಚ್ಚಿದೆ. ಆಹಾರದ ಪ್ರಾಮುಖ್ಯತೆ ನಿಧಾನವಾಗಿ ಯಾದರೂ ಜನರ ಮನದಲ್ಲಿಳಿಯುತ್ತಿದೆ. 'ಔಷಧಿಯೇ ಆಹಾರವಾಗಬಾರದು', 'ಸೂಕ್ತ ಆಹಾರ ಸೇವಿಸಿ ಔಷಧಿಯ ಅಗತ್ಯವಿಲ್ಲದಂತೆ ಮಾಡಬೇಕು' ಎಂಬ ಮನೋಭಾವ ಬೆಳೆಯುತ್ತಿದೆ.
ಇಂತಹ ಸಂದರ್ಭದಲ್ಲಿ ಈ 'ಸಿರಿಧಾನ್ಯದ ಸವಿ' ಪುಸ್ತಕ ಉಪಯುಕ್ತ ಕೈಪಿಡಿಯಾಗಬಲ್ಲುದು. ವಿವಿಧ ರೀತಿಯ ಅಡುಗೆಯಲ್ಲಿ ಪರಿಣತಿ ಸಾಧಿಸಿ, ಅದನ್ನು ಇತರರಿಗೂ ತಿಳಿಸುವ ಆಸಕ್ತಿ, ಉತ್ಸಾಹ, ಸದಾಶಯವಿರುವ ಶ್ರೀಮತಿ ಸವಿತಾ ಎಸ್. ಭಟ್ ಅಡ್ವಾಯಿ ಅವರು ಸಿರಿಧಾನ್ಯದ ಬಳಕೆಯನ್ನು ದಶಕದ ಹಿಂದೆಯೇ ಪ್ರಯತ್ನಿಸಿದವರು. ಮಕ್ಕಳ ಆಹಾರದಿಂದ ಹಿಡಿದು, ತಿಂಡಿ-ತಿನಿಸು, ಅನ್ನ-ಆಹಾರ, ಪಾನೀಯ ಹೀಗೆ ಎಲ್ಲರಿಗೂ ಸಲ್ಲುವ, ಪ್ರತಿಯೊಬ್ಬರ ರುಚಿ, ಆಯ್ಕೆ ಗಳಿಗೆ ಸೂಕ್ತವಾದ ಅಡುಗೆ ವೈವಿಧ್ಯ ಈ ಪುಸ್ತಕದಲ್ಲಿದೆ. ಸುಲಭ-ಸರಳ ರೀತಿಯಲ್ಲಿ ಪಾಕವಿಧಾನ ವನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹60.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.