ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ (ಗದ್ಯಾನುವಾದ)
ಲೇಖಕರು: ಶ್ರೀಯುತ ನಿ. ರಾಜಶೇಖರ್
₹450.00
ಲಭ್ಯವಿದೆ
ಪುಸ್ತಕದ ಬಗ್ಗೆ
ಶ್ರೀಯುತ ನಿ. ರಾಜಶೇಖರ್ ಅವರು ಸಿದ್ಧಪಡಿಸಿರುವ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯದ ಗದ್ಯಾನುವಾದದ ಹಸ್ತಪ್ರತಿಯ ಪುಟಗಳ ಮೇಲೆ ನಾನು ಕಣ್ಣಾಡಿಸಿದ್ದೇನೆ. ವಿನೂತನ ಛಂದಸ್ಸಿನ, ವಿಶಿಷ್ಟ ಶೈಲಿಯ, ನವೀನವೂ ಗಹನವೂ ಆದ ದರ್ಶನತತ್ವಾಲೋಚನೆಗಳ, ವರ್ಣನಾವೈವಿಧ್ಯದ ಈ ಮಹಾಕೃತಿಯನ್ನು ಸಮಗ್ರವಾಗಿ, ಅದರ ಮೆಯ್ ಕೆಡದಂತೆ, ಮೂಲಾಶಯಕ್ಕೆ ಭಂಗಬರದಂತೆ ಗದ್ಯಾನುವಾದ ಮಾಡುವುದು ಕಷ್ಟವಾದದ್ದೇ. ಶ್ರದ್ದಾನಿಷ್ಠೆಗಳಿಂದ ಕೂಡಿದ ನಿರಂತರಾಭ್ಯಾಸದಿಂದ ಮಾತ್ರ ಅಂಥ ಪ್ರಯತ್ನ ಯಶಸ್ವಿಯಾಗಬಲ್ಲದು.
ರಾಜಶೇಖರ್ ಅವರು ಈ ಕೃತಿಯನ್ನು ಮೊದಲಿಂದ ಕೊನೆಯತನಕ ಶ್ರದ್ದಾ ಗೌರವಗಳಿಂದ ಆಳವಾಗಿ ಅಭ್ಯಾಸಮಾಡಿದ್ದಾರೆ. ಅಲ್ಲಿಯ ಭಾಷೆಯನ್ನು ಉಪಮಾ ರೂಪಕಾಲಂಕಾರಗಳನ್ನು ತತ್ವಾದರ್ಶಗಳನ್ನು ಕೂಲಂಕಷವಾಗಿ ಅರ್ಥಮಾಡಿ ಕೊಂಡಿದ್ದಾರೆ, ಪದ್ಯಕಥನವನ್ನು ಆಧುನಿಕ ಗದ್ಯಕ್ಕೆ ಅಳವಡಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆನ್ನುವುದಕ್ಕೆ ಅವರ ಈ ಕೃತಿ ಸಾಕ್ಷಿಯಾಗಿದೆ. ಅನುವಾದಕರು ಮೂಲದ ನುಡಿ ಮತ್ತು ನುಡಿಗಟ್ಟುಗಳನ್ನು ಧಾರಾಳವಾಗಿ ಬಳಸಿಕೊಂಡಿರು ವುದರಿಂದ, ಹೆಜ್ಜೆಹೆಜ್ಜೆಗೂ ಮೂಲವನ್ನು ಶರಣಾಗತಿಭಾವದಿಂದ ಅನುಸರಿಸುವುದರಿಂದ ಮೂಲಕೃತಿ ಛಾಯೆಯನ್ನಲ್ಲಿ ನಿಚ್ಚಳವಾಗಿ ಕಾಣಬಹುದಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹450.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.