ಅಡ್ಡೂರು ಕೃಷ್ಣ ರಾವ್
addoor
೨೪ ಪೋಸ್ಟ್ಗಳು
೧೧ ಅನುಯಾಯಿಗಳು
ಸೇರಿದ ದಿನಾಂಕ: ಶನಿವಾರ, ಫೆಬ್ರವರಿ ೨೮, ೨೦೦೯
ಕನ್ನಡ ರಾಜ್ಯೋತ್ಸವ ಸಂಭ್ರಮದ 7ನೇ ದಿನದ ಐಡಿಯಾ: ಪತ್ರ ಬರೆಯುವುದು. ಯಾರಿಗೆ? ನಿಮ್ಮ ಅಮ್ಮನಿಗೆ. ಯಾಕೆ? ಅಮ್ಮನ ಪ್ರೀತಿ, ಕಾಳಜಿ, ಸೇವೆ, ಪ್ರೋತ್ಸಾಹ, ಬೆಂಬಲಕ್ಕೆ ಕೃತಜ್ಞತೆ ಸೂಚಿಸಲು. ಆ ಪತ್ರ ಹೇಗಿರಬೇಕು? ಅದನ್ನು ಓದಿ ನಿಮ್ಮ ಅಮ್ಮನ ಕಣ್ಣುಗಳಿಂದ ಸಂತೋಷದ ಕಣ್ಣೀರು ಸುರಿಯಬೇಕು. ಅಂತಹ ಭಾವಪೂರ್ಣ ಪತ್ರ ಬರೆಯಿರಿ ನೋಡೋಣ. ಗಮನಿಸಿ: ಅಮ್ಮನಿಲ್ಲದಾಗ ನಿಮ್ಮ ಕೃತಜ್ಞತೆ ಇತರರಿಗೆ ತಿಳಿಸುವ ಬದಲಾಗಿ, ಅವರು ಇರುವಾಗಲೇ ಬರೆದು ತಿಳಿಸಿ - ಅದನ್ನೋದುವ ಆನಂದ ಅವರದಾಗಲಿ. ಜೊತೆಗೆ, ನಿಮ್ಮ ಭಾವನೆಗಳನ್ನು ಬರಹದಲ್ಲಿ ತಿಳಿಸಿಬೇಕಾದರೆ, ನಿಮ್ಮ ಕನ್ನಡದ ಹಿಡಿತ ಇನ್ನೆಷ್ಟು ಸಶಕ್ತವಾಗಬೇಕು ಎಂಬು ಅರಿವು ನಿಮ್ಮಲ್ಲಿ ಮೂಡಲಿ.
ಇಂದಿನ ಕನ್ನಡ ರಾಜ್ಯೋತ್ಸವ ಸಂಭ್ರಮದ ಐಡಿಯಾ: ನಮ್ಮ ಮಾತು ಮತ್ತು ಬರಹದಲ್ಲಿ ಅನುಕರಣ ಪದಗಳ ಬಳಕೆ. ಹಾವು ಸರಸರನೆ ಹರಿದು ಹೋಯಿತು ಎನ್ನುತ್ತೇವೆ. ಹಾಗೆಯೇ, ಗಾಳಿಪಟ ಗಿರಗಿರನೆ ಗಿರಕಿ ಹೊಡೆದು ಬಿತ್ತು. ತೊರೆಯ ನೀರು ಜುಳಜುಳನೆ ಹರಿಯುತ್ತಿದೆ. ಹಕ್ಕಿ ರಪರಪನೆ ರೆಕ್ಕೆ ಬಡಿದು ಹಾರಿಹೋಯಿತು. ಆತ ಗಟಗಟನೆ ನೀರು ಕುಡಿದ. ಸರಸರನೆ, ಗಿರಗಿರನೆ, ರಪರಪನೆ - ಇಂತಹ ಅನುಕರಣ ಪದಗಳು ನಮ್ಮ ಮಾತಿಗೊಂದು ಸೊಗಸು ನೀಡುತ್ತವೆ. ಕೇಳುವವರಿಗೆ ಮಾತಿನ ಅರ್ಥ ಗ್ರಹಿಸಲು ಸಹಕರಿಸುತ್ತವೆ. ಇಂತಹ ಪದಗಳನ್ನು ಆಯಾ ಸಂದರ್ಭಕ್ಕೆ ಹೊಂದುವಂತೆ ಯಾರೂ ಸೃಷ್ಟಿಸಬಹುದು. ಉದಾ: ಮೊಬೈಲಿನಲ್ಲಿ ಚಕಚಕನೆ ಮೆಸೇಜ್ ಟೈಪಿಸುವುದು.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಅನುಕರಣ ಪದಗಳನ್ನು ಬಳಸುತ್ತಲೇ ಇರುತ್ತೇನೆ. ಆದರೆ ಅದರ ಬಗ್ಗೆ ಯೋಚನೆ ಮಾಡಿರಲೇ ಇಲ್ಲ.
ಪ್ರತಿಕ್ರಿಯೆ ನೋಡಿ →
ಐದನೇ ದಿನದ ಐಡಿಯಾ - ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ: ಕನ್ನಡ ಭಾಷೆಯ ವಿಶೇಷತೆಗಳನ್ನು ತಿಳಿಯೋದು. ಕೆಲವರು ಮಾತಿನಲ್ಲಿ "ಕೋಟೆ-ಗೀಟೆ", "ಬದನೆ-ಗಿದನೆ" ಎಂಬ ಪದಗಳನ್ನು ಬಳಸುವುದನ್ನು ಗಮನಿಸಿದ್ದೀರಾ? ಅವರ ಮಾತಿನ "ಗೀಟೆ", "ಗಿದನೆ" ಇಂತಹ ಪದಗಳ ಅರ್ಥವೇನು? "ಗಿದನೆ" ಎಂಬುದರ ಅರ್ಥ ಬದನೆಯ ಹಾಗಿರುವ ಇತರ ಎಲ್ಲಾ ತರಕಾರಿಗಳು. ಬಹುಶಃ ಬೇರೆ ಯಾವ ಭಾಷೆಯಲ್ಲಿಯೂ ಇಂತಹ ಪದ ಬಳಕೆ ಇಲ್ಲ. ಆದ್ದರಿಂದ ಇದು ನಮ್ಮ ಕನ್ನಡದ ಒಂದು ವಿಶೇಷತೆ. ಇದನ್ನು ಮಾನ್ಯ ಎಲ್. ಎಸ್. ಶೇಷಗಿರಿರಾಯರು ಬರೆದ "ಸುಲಭ ಇಂಗ್ಲಿಷ್" ಪುಸ್ತಕದಲ್ಲಿ ಓದಿದ ನೆನಪು. ಇಂತಹ ಬೇರೆ ವಿಶೇಷತೆಗಳನ್ನೂ ತಿಳಿಯೋಣ.
ಇವತ್ತಿನ ಐಡಿಯಾ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ: ಕನ್ನಡದ ಒಂದು ಶಬ್ದಕ್ಕೆ ಎಷ್ಟು ಅರ್ಥಗಳಿವೆ? ನಿಮಗೆಷ್ಟು ತಿಳಿದಿದೆ? ಎಂಬುದನ್ನು ಗಮನಿಸುವುದು. ಬಹುಪಾಲು ಪದಗಳಿಗೆ ಒಂದೇ ಅರ್ಥ. ಆದರೆ ಹಲವು ಶಬ್ದಗಳಿಗೆ ಅನೇಕ ಅರ್ಥಗಳಿವೆ. ಉದಾಹರಣೆಗೆ, "ಕ" ಅಕ್ಷರದಿಂದ ಶುರುವಾಗುವ ಈ ಪದಗಳಿಗೆ ೫ ಅಥವಾ ೫ಕ್ಕಿಂತ ಜಾಸ್ತಿ ಅರ್ಥಗಳಿವೆ: ಕರಿ, ಕೆಡು, ಕೊನೆ, ಕೊಬ್ಬು, ಕ್ರಮ. ಹಾಗೆಯೇ "ಬೆಳಗು" ಪದಕ್ಕೆ ೭ ಮತ್ತು "ಲಕ್ಷಣ" ಪದಕ್ಕೆ ೯ ಅರ್ಥಗಳಿವೆ. "ನಡೆ" ಶಬ್ದದ ಅರ್ಥಗಳ ಸಂಖ್ಯೆ ೧೧. ನೀವು ಬಳಸುವ ಶಬ್ದಗಳ ಹೆಚ್ಚೆಚ್ಚು ಅರ್ಥಗಳನ್ನು ಶಬ್ದಕೋಶದಿಂದ ಕಲಿಯಲು ಶುರು ಮಾಡುವಿರಾ?
ಕನ್ನಡ ರಾಜ್ಯೋತ್ಸವ ಸಂಭ್ರಮಿಸಲು ಮತ್ತೊಂದು ಐಡಿಯಾ: ನಿಮ್ಮ ಶಬ್ದಭಂಡಾರ ಎಷ್ಟು ದೊಡ್ಡದಿದೆ? ಎಂದು ಅಂದಾಜಿಸುವುದು. ಇದಕ್ಕೆ ಸುಲಭದ ವಿಧಾನ: ಒಂದು ಶಬ್ದಕೋಶದ ಯಾವುದೇ ಪುಟದಲ್ಲಿರುವ ಶಬ್ದಗಳಲ್ಲಿ ನಿಮಗೆ ಎಷ್ಟು ಶಬ್ದಗಳ ಅರ್ಥ ಸ್ಪಷ್ಟವಾಗಿ ತಿಳಿದಿದೆ ಎಂಬುದನ್ನು ಗಮನಿಸಿ. ಹೀಗೆ ೫ ಪುಟಗಳಲ್ಲಿ ನಿಮಗೆ ಗೊತ್ತಿರುವ ಪದಗಳ ಸಂಖ್ಯೆ ಎಷ್ಟೆಂದು ಅಂದಾಜಿಸಿ. ಪ್ರತಿಯೊಂದು ಪುಟದಲ್ಲಿರುವ ಒಟ್ಟು ಪದಗಳಲ್ಲಿ ನಿಮಗೆ ಅರೆವಾಸಿ ಅಥವಾ ಅದಕ್ಕಿಂತ ಜಾಸ್ತಿ ಶಬ್ದಗಳ ಅರ್ಥ ತಿಳಿದಿದ್ದರೆ ಪರವಾಗಿಲ್ಲ. ಇಲ್ಲವಾದರೆ ನಿಮ್ಮ ಶಬ್ದಭಂಡಾರ ಹೆಚ್ಚಿಸಿಕೊಳ್ಳಲು ಇಂದಿನಿಂದಲೇ ಶುರು ಮಾಡಿ.ಅದಕ್ಕಾಗಿ ಹೆಚ್ಚು ಓದಿ, ಹೆಚ್ಚು ಬರೆಯಿರಿ.
ಕನ್ನಡದ ವಿವಿಧ ನಿಘಂಟುಗಳ ಬಗ್ಗೆ ತಿಳಿದುಕೊಳ್ಳುವುದು ಕನ್ನಡ ರಾಜ್ಯೋತ್ಸವ ಸಂಭ್ರಮಿಸುವ ಇನ್ನೊಂದು ಐಡಿಯಾ. ಕಿಟೆಲ್ಲರ ಶಬ್ದಕೋಶದಿಂದ ಡಾ. ಶಿವರಾಮ ಕಾರಂತರ ಸಿರಿಗನ್ನಡ ಅರ್ಥಕೋಶದ ವರೆಗೆ ಹಲವಾರು ನಿಘಂಟುಗಳಿವೆ. ಕೆಲವಾದರೂ ನಮ್ಮ ಮನೆಯಲ್ಲಿದ್ದರೆ ಎಲ್ಲರಿಗೂ ಬಳಕೆಗೆ ಲಭ್ಯ. ಸುಭಾಷ್ ನಿಘಂಟು ನೋಡಿದ್ದೀರಾ? ಇದೊಂದು ವಿಶಿಷ್ಟ ಕೃತಿ. ಯಾಕೆಂದರೆ ಇದರಲ್ಲಿ ಎರಡು ನಿಘಂಟುಗಳಿವೆ. ಮೊದಲ ಭಾಗ ಕನ್ನಡ - ಕನ್ನಡ - ಇಂಗ್ಲಿಷ್ ಶಬ್ದಕೋಶ (508 ಪುಟ) 2ನೇ ಭಾಗ ಇಂಗ್ಲಿಷ್ - ಕನ್ನಡ ನಿಘಂಟು (186 ಪುಟ) ಪ್ರಕಾಶಕರು ಸುಭಾಷ್ ಸ್ಟೋರ್ಸ್, ಅವೆನ್ಯೂ ರಸ್ತೆ, ಬೆಂಗಳೂರು. ಸಂಪಾದಕರು ಪ್ರೊ. ಎಲ್.ಎಸ್. ಶೇಷಗಿರಿರಾವ್.
ಕನ್ನಡ ರಾಜ್ಯೋತ್ಸವ ಸಂಭ್ರಮಿಸಲು ನಿಮಗೊಂದು ಐಡಿಯಾ: ಓದುವಾಗ ಬರೆಯುವಾಗ ಯಾವುದೇ ಪದದ ಅರ್ಥದ ಬಗ್ಗೆ ಗೊಂದಲವಾದರೆ ಶಬ್ದಕೋಶದಲ್ಲಿ ಅದರ ಅರ್ಥ ಹುಡುಕುವ ಅಭ್ಯಾಸ ಶುರು ಮಾಡಿ. (ಮನೆಯಲ್ಲಿ ಶಬ್ದಕೋಶ ಇಲ್ಲವೆಂದಾದರೆ ಇವತ್ತೇ ಒಂದನ್ನು ತಂದಿಟ್ಟುಕೊಳ್ಳಿ. ಸಂಪದದ ಶಬ್ದಕೋಶವನ್ನೂ ಬಳಸಬಹುದು.) ರಾಜ್ಯೋತ್ಸವ ಆಚರಿಸಲು ಇದು ಒಳ್ಳೆಯ ದಾರಿ. ನಮ್ಮ ಕನ್ನಡ ಭಾಷಾ ಶುದ್ಧತೆ ಹೆಚ್ಚಿಸಿಕೊಳ್ಳೋಣ.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ರಾಜ್ಯೋತ್ಸವದ ಶುಭಾಶಯಗಳು. 'ಸಂಪದ' ಕ್ಕೆ ಬರೆಯುವಾಗ ನಿಘಂಟು ಹುಡುಕಾಡಬೇಕಿಲ್ಲ. ಸಂಪದ ಲೇಖನ ಬರೆಯುವ ಪುಟದಲ್ಲೇ ನಿಘಂಟು ಇದೆ. ಅರ್ಥಕ್ಕಾಗಿ ಹುಡುಕಾಡಬೇಕಿಲ್ಲ. ಕೂಡಲೇ ಸಂದೇಹವಿರುವ ಪದದ ಅರ್ಥವನ್...
ಪ್ರತಿಕ್ರಿಯೆ ನೋಡಿ →
ನಾಳೆ 1 ನವಂಬರ್ 2026 ಕನ್ನಡ ರಾಜ್ಯೋತ್ಸವ. ಕನ್ನಡ ನಾಡಿನಲ್ಲೆಲ್ಲ ಕನ್ನಡದ ಹಬ್ಬ. ನಾವು ಇದನ್ನು ಹೇಗೆ ಆಚರಿಸಬಹುದು, ಸಂಭ್ರಮಿಸಬಹುದು? ನಿಮ್ಮ ಐಡಿಯಾಗಳಿದ್ದರೆ ಹಂಚಿಕೊಳ್ಳಿ. ಮುಖ್ಯವಾಗಿ, ಕನ್ನಡ ಭಾಷೆ ಉಳಿಸುವ ಬಗ್ಗೆ, ಕನ್ನಡ ಭಾಷೆಯಲ್ಲಿ ನಮ್ಮ ಪ್ರೌಢಿಮೆ ಹೆಚ್ಚಿಸುವ ಬಗ್ಗೆ, ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ಕನ್ನಡದ ಪ್ರೀತಿ, ಅಭಿಮಾನ ಹೆಚ್ಚಿಸುವ ಹೆಚ್ಚೆಚ್ಚು ಐಡಿಯಾಗಳಿಗೆ ಸ್ವಾಗತ.
Krishnamurthy Hutturmut
ಪ್ರತಿಕ್ರಿಯಿಸಿದ್ದಾರೆ
ನವಂಬರ್ ತಿಂಗಳಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸಿದರೆ ಸಾಲದು . ಸಾಮಾನ್ಯ ಜನರು ವ್ಯವಹರಿಸುವ ಸರ್ಕಾರದ ಇಲಾಖೆಗಳಲ್ಲಿ ,ಪ್ರತಿ ನಿತ್ಯ ಪ್ರಯಾಣಿಸುವ ಸಾರ್ವಜನಿಕ ವಾಹನಗಳಲ್ಲಿ...
ಪ್ರತಿಕ್ರಿಯೆ ನೋಡಿ →
ಮೊನ್ನೆ "ಚಿಮ್ಮಿದ ಚಿಂತನೆ" ಅಂಕಣದಲ್ಲಿ ಬರೆದದ್ದು: "ಇತರರಿಗೆ ತನ್ನಿಂದಾಗುವ ತೊಂದರೆಗೆ ಅಸಡ್ಡೆ". ಇದರಿಂದಾಗುವ ಅನಾಹುತದ ಬಗ್ಗೆ ಇಂದಿನ ಒಂದು ಪತ್ರಿಕಾ ವರದಿ: ಗುಜರಾತಿನ ಮೊರ್ಬಿ ನಗರದಲ್ಲಿ ಶೇಖರ್ ಗೋಯಲ್ ನೆರೆಮನೆಯ ವಕೀಲೆ ಪುಷ್ಪಾ ಭಟ್ ಎಂಬಾಕೆಯ ಮಾರುತಿ ಸ್ವಿಫ್ಟ್ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟು ಸುಟ್ಟು ಹಾಕಿದ! ಕಾರಣ: ಯಾರಾದರೂ ಹತ್ತಿರ ಬಂದಾಗೆಲ್ಲ ಆ ಕಾರಿನ ಸೆನ್ಸರಿನಿಂದಾಗಿ ಅಲಾರಂ ಚಾಲೂ ಆಗಿ ಜೋರಾಗಿ ಸದ್ದು ಮಾಡುತ್ತಿತ್ತು. ಇದರಿಂದಾಗಿ ಆಗುತ್ತಿದ್ದ ಕಿರಿಕಿರಿ ಸಹಿಸಲಾಗದೆ ಶೇಖರ್ ಗೋಯಲ್ ಆ ಕಾರನ್ನೇ ಸುಟ್ಟ.
ಅಬ್ಬಾ, ತೈವಾನಿಗೆ ಅಪ್ಪಳಿಸಿದ ಮಹಾ ಬಿರುಗಾಳಿಯ ರೌದ್ರ ನರ್ತನದ ವಿಡಿಯೋ ನೋಡುತ್ತಿದ್ದೆ. ಹಲವರು ರಸ್ತೆಗಳ ಪಕ್ಕದ ಮರಗಳನ್ನು, ವಿದ್ಯುತ್ ಕಂಬಗಳನ್ನು ಬಿಗಿಯಾಗಿ ಅಪ್ಪಿಕೊಂಡಿದ್ದರು; ಇಲ್ಲವಾದರೆ ಬಿರುಗಾಳಿ ಅವರನ್ನೇ ಎತ್ತಿ ಬೀಳಿಸೀತು. ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್-ಬೈಕುಗಳೆಲ್ಲ ಅಡ್ಡ ಬಿದ್ದಿದ್ದವು. ಕೆಲವು ಬಹುಮಹಡಿ ಕಟ್ಟಡಗಳ ಕಾರಿಡಾರಿನ ಬಾಗಿಲುಗಳು ಕಿತ್ತು ಹಾರಿದವು! ಇವನ್ನೆಲ್ಲ ಕಂಡರೂ ಪ್ರಕೃತಿಯ ರೌದ್ರದ ಎದುರು ತಾನು ಧೂಳಿಗೆ ಸಮಾನ ಎಂಬ ಅರಿವು ಮನುಷ್ಯರಲ್ಲಿ ಮೂಡುವುದಿಲ್ಲ. ಭೂಮಿಯನ್ನು ಸಿಕ್ಕಸಿಕ್ಕಂತೆ ಅಗೆದು, ಕೊರೆದು ಮಾಡುವ ಅನಾಹುತಗಳನ್ನು ಇನ್ನಾದರೂ ನಿಲ್ಲಿಸಲಿ.
ಎಲ್ಲ ಮೋಡಗಳೂ ಮಳೆ ಸುರಿಸುವುದಿಲ್ಲ. ಕೆಲವು ಮಾತ್ರ ಮಳೆ ಸುರಿಸುತ್ತವೆ. ಉಳಿದ ಬಹುಪಾಲು ಮೋಡಗಳು ಬರೇ ಗುಡುಗುತ್ತವೆ. ಮನುಷ್ಯರೂ ಹಾಗೆಯೇ. ಕೆಲವೇ ಕೆಲವರು ನಿಯತ್ತಿನಿಂದ ಬಾಳುತ್ತಾರೆ. ತಾವು ಕೊಟ್ಟ ಭರವಸೆ ನೆರವೇರಿಸುತ್ತಾರೆ. ನುಡಿದಂತೆ ನಡೆಯುತ್ತಾರೆ. ಉಳಿದ ಬಹುಪಾಲು ಜನರು ನಿಮ್ಮಿಂದ ಏನು ಲಾಭವಾದೀತೆಂಬ ಲೆಕ್ಕಾಚಾರದವರು. ಸುಳ್ಳಿನ ಮೇಲೆ ಸುಳ್ಳು ಹೇಳುವವರು. ನುಡಿದಂತೆ ನಡೆಯದವರು. ಆದ್ದರಿಂದ ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಕೇವಲ ಬಡಬಡಿಸುವವರೇ? ಪರೀಕ್ಷಿಸಿ. ಅಂಥವರ ಬಗ್ಗೆ 'ಚಿಮ್ಮಿದ ಚಿಂತನೆ' ಅಂಕಣದಲ್ಲಿ ಬರೆಯುತ್ತಾ ಇದ್ದೇನೆ. ಗಮನಿಸಿ.
ಮನೆಗಳು, ಮಳಿಗೆಗಳು, ಉಗ್ರಾಣಗಳು ಅಥವಾ ಫ್ಲಾಟುಗಳಲ್ಲಿ ಬೆಂಕಿ ಹತ್ತಿಕೊಂಡು ಭಾರೀ ಹಾನಿಯಾದ ವರದಿಗಳನ್ನು ಓದುತ್ತೇವೆ/ ಕೇಳುತ್ತೇವೆ. ಹಲವು ಪ್ರಕರಣಗಳಲ್ಲಿ ಅದಕ್ಕೆ ಕಾರಣ ವಿದ್ಯುತ್ ಷಾರ್ಟ್ ಸರ್ಕ್ಯೂಟ್. ಇದರಲ್ಲಿದೆ ನಮಗೊಂದು ಎಚ್ಚರಿಕೆ. ಅದೇನೆಂದರೆ ಪ್ರತಿ ಐದು ವರುಷಗಳಿಗೆ ಒಮ್ಮೆಯಾದರೂ ಪರಿಣತರಿಂದ ವಿದ್ಯುತ್ ವಯರುಗಳ ಪರಿಶೀಲನೆ ನಡೆಸಬೇಕು. ಆಗ ವಿದ್ಯುತ್ ವಯರುಗಳು ದುರ್ಬಲವಾಗಿದ್ದರೆ ಅಥವಾ ಅವಕ್ಕೆ ಹಾನಿಯಾಗಿದ್ದರೆ ಪತ್ತೆಯಾಗಿ, ಅವನ್ನು ರಿಪೇರಿ ಮಾಡಿಸಬಹುದು. ಆದರೆ ವಿದ್ಯುತ್ ವಯರುಗಳ ಪರಿಶೀಲನೆ ಮಾಡಿಸುವವರು ವಿರಳಾತಿ ವಿರಳ, ಅಲ್ಲವೇ?
ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ 60 ಲಕ್ಷ ಯೆಹೂದಿಗಳನ್ನು ಬರ್ಬರವಾಗಿ ಜನಾಂಗೀಯ ಹತ್ಯ ಮಾಡುತ್ತಿದ್ದಾಗ ಇಡೀ ಜಗತ್ತು ನೋಡುತ್ತಿತ್ತು. ನಿನ್ನೆ 30 ಸಪ್ಟಂಬರ್ 2026ರ ರಾತ್ರಿ ಫ್ಲೈ ದುಬೈ ಎಫ್ ಝಡ್ 1073 ವಿಮಾನದ ಭಾರತೀಯ ಕ್ಯಾಪ್ಟನ್ (ಪೈಲಟ್) ಸ್ಮಿತ್ ಮಚ್ಚಾರ್ ತನ್ನ ಪ್ರಾಣವನ್ನೇ ಪಣಕ್ಕಿಟ್ಟು, ಉಗ್ರ ಸಹ-ಪೈಲಟನ ಚಾಕು ಇರಿತ ಎದುರಿಸಿ, ಆ ವಿಮಾನದಲ್ಲಿದ್ದ ಯೆಹೂದಿ ಪ್ರಯಾಣಿಕರ ಸಹಿತ 174 ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ! ಇದು ಭಾರತದ ಸನಾತನ ಪರಂಪರೆಯ ಹೆಗ್ಗಳಿಕೆ. ಇದು ಭಾರತೀಯರ ಮನೋಧರ್ಮದ ಪುರಾವೆ.
ಗೇರುಹಣ್ಣನ್ನು ಗಮನಿಸಿದ್ದೀರಾ? ನಾವು "ಹಣ್ಣು" ಎಂದು ಭಾವಿಸಿದ್ದು ನಿಜವಾಗಿ "ಹುಸಿಹಣ್ಣು". ಅದು ಹಣ್ಣಿನ ಪುಷ್ಪಕಾಂಡ ಅಥವಾ ಹೂದಂಟು! ಅದರ ತುದಿಯಲ್ಲಿರುವುದೇ ನಿಜವಾದ ಗೇರುಹಣ್ಣು. ಅದರ ಗಟ್ಟಿ ಸಿಪ್ಪೆ ಒಡೆದರೆ ಒಳಗಿರುವುದೇ ಗೇರುಬೀಜ. ಹಾಗೆಯೇ ಅನಾನಸ್ ಒಂದೇ ಹಣ್ಣಲ್ಲ. ಅದು ನೂರಾರು ಹಣ್ಣುಗಳಿಂದಾದ ಸಂಯುಕ್ತ ಫಲ! ಅನಾನಸಿನ ಹೂಗುಚ್ಛ ಬೆಳೆದು ಪ್ರತಿಯೊಂದು ಹೂ ಬೀಜವಿಲ್ಲದ ಹಣ್ಣಾಗುತ್ತದೆ. ಇವೆಲ್ಲವೂ ಹೂಗುಚ್ಛದ ಅಕ್ಷ ಮತ್ತು ಹೂಗಳ ಪುಷ್ಪಪಾತ್ರದ ಜೊತೆ ಸೇರಿಕೊಂಡು ಸಂಯುಕ್ತ ಫಲ ರೂಪುಗೊಳ್ಳುತ್ತದೆ. ಇದರಲ್ಲಿ ಬೀಜಗಳಿರುವುದು ತೀರಾ ಅಪರೂಪ. ಪ್ರಕೃತಿಯ ವಿಸ್ಮಯಗಳು ಒಂದೆರಡಲ್ಲ.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ನಿಮ್ಮ ಮಾತು ನಿಜ ಸರ್, ಪ್ರಕೃತಿಯಲ್ಲಿರುವ ನೂರಾರು ವಿಸ್ಮಯಗಳಲ್ಲಿ ಇವೂ ಒಂದು. ವಿಜ್ಞಾನದ ವಿದ್ಯಾರ್ಥಿಯಾದುದರಿಂದ ಇದನ್ನು ಹಿಂದೆಯೇ ಓದಿಕೊಂಡಿದ್ದೆ. ನಿಮ್ಮ ಬರಹದಿಂದ ಮತ್ತೆ ನೆನಪಾಯಿತು. ಉತ್ತರ...
ಪ್ರತಿಕ್ರಿಯೆ ನೋಡಿ →
ಚಕ್ರದ ಐಡಿಯಾ ಯಾರಿಗೆ ಮೊದಲು ಹೊಳೆಯಿತೋ? ಮಾನವನ ಪ್ರಗತಿಗೆ, ನಾಗರಿಕತೆಯ ಬೆಳವಣಿಗೆಗೆ ಅದೊಂದು ಮಹಾನ್ ಕೊಡುಗೆ. ಆ ಚಕ್ರಕ್ಕೆ ರಬ್ಬರಿನ ಟಯರ್ ಹೊಂದಿಸಿ, ಅದರೊಳಗೆ ಗಾಳಿ ತುಂಬಿದ್ದು ಇನ್ನೊಂದು ಪ್ರಚಂಡ ಐಡಿಯಾ. ಮನುಷ್ಯರ ಬದುಕಿಗೆ ವೇಗ ಬಂದದ್ದೇ ಈ ಆವಿಷ್ಕಾರದಿಂದ. ಆದರೆ ಇವುಗಳ ಜನಕರು ಯಾರೆಂದು ನಮಗಾರಿಗೂ ಗೊತ್ತಿಲ್ಲ. ಈಗ ನಮ್ಮ ಬದುಕು ಚಂದವಾಗಲು ಇಂತಹ ಅನಾಮಿಕ ಆವಿಷ್ಕಾರಗಳ ಜನಕರೇ ಕಾರಣ. ಅವರೆಲ್ಲರ ಬಗ್ಗೆ ಕೃತಜ್ಜತಾ ಭಾವ ಬೆಳೆಸಿಕೊಳ್ಳೋಣ.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ನಿಜ ಸರ್, ವೃತ್ತಾಕಾರದ ಚಕ್ರದ ಅನ್ವೇಷಣೆಗೆ ಮೊದಲು ಚೌಕಾಕಾರದ, ಆಯತಾಕಾರದ ವಸ್ತುಗಳನ್ನು ಪರಿಶೀಲಿಸಲಾಗಿತ್ತು ಎಂದು ಎಲ್ಲೋ ಓದಿದ ನೆನಪು. ಅವೆಲ್ಲಾ ಸರಾಗವಾಗಿ ಚಲಿಸದ ಕಾರಣ ವೃತ್ತಾಕಾರದ ಚಕ್ರ ಬಳ...
ಪ್ರತಿಕ್ರಿಯೆ ನೋಡಿ →
ಪ್ರಕೃತಿಯ ಅದ್ಭುತಗಳು ಒಂದೆರಡಲ್ಲ. ಸಮಪ್ರಮಾಣದಲ್ಲಿ ಮಣ್ಣು - ಮರಳು - ಕೋಕೋಪೀಟ್ ಮಿಶ್ರ ಮಾಡಿ ಒಂದು ಮಣ್ಣಿನ ಕುಂಡದಲ್ಲಿ ತುಂಬಿ. ಅದರಲ್ಲೊಂದು ಬೀಜ ಬಿತ್ತಿ. ಅದಕ್ಕೆ ದಿನವೂ ಸ್ವಲ್ಪ ನೀರು ಹಾಕುತ್ತಾ ಗಮನಿಸಿ. 10-15 ದಿನಗಳಲ್ಲಿ ಆ ಬೀಜದಿಂದ ಚಿಮ್ಮುತ್ತದೆ ಮೊಳಕೆ. ನಂತರ ದಿನದಿನವೂ ಆ ಮೊಳಕೆ ಸಸಿಯಾಗಿ ಬೆಳೆಯುತ್ತಾ ಎಲೆಗಳ ತೋರಣ. ಒಂದೆರಡು ತಿಂಗಳುಗಳಲ್ಲಿ ಆ ಸಸಿ ನಿಮ್ಮೆತ್ತರದ ಗಿಡವಾಗಿ ಬೆಳೆದೀತು. ಆಗ ಅದರಲ್ಲಿ ಅರಳುವ ಹೂಗಳು. ನೋಡನೋಡುತ್ತಲೇ ಹೂಗಳಿದ್ದಲ್ಲಿ ಕೋಡುಗಳು ಅಥವಾ ಹಣ್ಣುಗಳು ಪ್ರತ್ಯಕ್ಷ. ಅದರೊಳಗೆ ಇನ್ನಷ್ಟು ಬೀಜಗಳು! ಅಂದರೆ ದೈತ್ಯ ಮರವೂ ಪುಟ್ಟ ಬೀಜದೊಳಗೆ ಅಡಗಿರುತ್ತದೆ.
ನಿಮಗೆ ಗೊತ್ತಿರುವ ಗಾದೆಗಳನ್ನು ಬರೆಯಲು ಶುರು ಮಾಡಿ. ಅವುಗಳ ಸಂಖ್ಯೆ ಒಂದು ನೂರು ದಾಟಿದರೆ ಅವನ್ನು ನೆನಪಿಟ್ಟುಕೊಳ್ಳಲು ನೀವು ಆಸಕ್ತಿ ವಹಿಸಿದ್ದೀರಿ ಎಂದರ್ಥ. ಗಾದೆಗಳು ನಿಮ್ಮ ಮಾತಿಗೊಂದು ತೂಕ ನೀಡುತ್ತವೆ. ಕೆಲವು ಸಂದರ್ಭಗಳಲ್ಲಿ ಹತ್ತಾರು ವಾಕ್ಯಗಳಲ್ಲಿ ಹೇಳಲಾಗದ್ದನ್ನು ಒಂದೇ ಗಾದೆಯ ಮೂಲಕ ಹೇಳಬಹುದು. ಒಂದು ಎಚ್ಚರಿಕೆ: ನಿಮ್ಮ ಸಂಭಾಷಣೆಯಲ್ಲಿ ಗಾದೆಗಳನ್ನು ಬಳಸುವ ಮುನ್ನ ಅವುಗಳ ಅರ್ಥ ತಿಳಿದುಕೊಳ್ಳಿ. ಇಲ್ಲದಿದ್ದರೆ ಆಭಾಸವಾದೀತು. ಗಾದೆಗಳ ಪುಟ್ಟ ಪುಸ್ತಕ ನಿಮ್ಮ ಮನೆಯಲ್ಲಿರಲಿ. ಲಹರಿ ಬಂದಾಗ ಅದನ್ನು ಓದುತ್ತಿದ್ದರೆ ಬಳಕೆಗೆ ಸಹಾಯ.
ಅನಂತ ಆಕಾಶ, ಅಸಂಖ್ಯ ನಕ್ಷತ್ರಗಳ ಮುಖಾಮುಖಿ... ರಾತ್ರಿ ಆಕಾಶ ನೋಡ್ತಾ ಕೂತಿದ್ದೀರಾ? ಅದೊಂದು ಅದ್ಭುತ ಅನುಭವ. ಎಲ್ಲೆಯಿಲ್ಲದ ಆಕಾಶ. ಅದರ ಅಗಾಧತೆಗೆ ಹೋಲಿಸಿದಾಗ ನಾನೆಷ್ಟು ಕ್ಷುಲ್ಲಕ ಅನಿಸಿ ಬಿಡ್ತದೆ. ಆದಿಅಂತ್ಯವಿಲ್ಲದ ಆಕಾಶದಲ್ಲಿ ಹರಡಿರುವ ಎಣಿಕೆಯಿಲ್ಲದ ನಕ್ಷತ್ರಗಳು. ಕಲ್ಪಿಸಲಾಗದ ಸಂಖ್ಯೆಯ ನಕ್ಷತ್ರಗಳಿಗೆ ಹೋಲಿಸಿದಾಗ ಈ ಭೂಮಿಯ ಎಲ್ಲವೂ ಏನೂ ಅಲ್ಲ ಅನಿಸುತ್ತದೆ. ಈ ಎಲ್ಲ ಭಾವ ನಮ್ಮ ಪ್ರಜ್ಞೆಯ ಆಳಕ್ಕೆ ಇಳಿಯುತ್ತಿದ್ದಂತೆ, ನಮ್ಮ ಅಹಂಕಾರವೆಲ್ಲ ಜರ್ರನೆ ಇಳಿಯುತ್ತದೆ. ಅನಂತ ಆಕಾಶ, ಅಸಂಖ್ಯ ನಕ್ಷತ್ರಗಳ ಎದುರು ನಾನು ಯಾವ ಲೆಕ್ಕಕ್ಕೂ ಇಲ್ಲ ಎಂಬ ಅರಿವು ನಮ್ಮನ್ನು ಬಡಿದೆಬ್ಬಿಸಲಿ.
ನೀವು ಎಲ್ಲೇ ವಾಸವಿದ್ದರೂ ಸರಿ. ನಿಮ್ಮ ಮನೆಯ ಹತ್ತಿರದ ಯಾವುದೇ ಮನೆಯಲ್ಲಿ 70 ವರುಷ ವಯಸ್ಸು ದಾಟಿದವರು ಇದ್ದರೆ ಅವರನ್ನೊಮ್ಮೆ ಮಾತನಾಡಿಸಿ. ಯಾಕೆಂದರೆ ಅವರು ನಡೆದಾಡುವ ವಿಶ್ವಕೋಶ ಇದ್ದಂತೆ. ಅವರ ಜೀವನಾನುಭವ ಕಥನದ ಒಂದೊಂದು ಪುಟವೂ ಬೆಲೆ ಕಟ್ಟಲಾಗದ್ದು. ಅವರು ತಿಳಿಸಿದ್ದನ್ನು ಅವರ ಮಾತುಗಳಲ್ಲೇ ದಾಖಲಿಸಿ. ಹೀಗೆ ನೂರು ಹಿರಿಯರ ಬದುಕಿನ ಪಾಠವನ್ನು ಒಂದೊಂದು ಪುಟದಲ್ಲಿ ಬರೆದರೆ, ಅದುವೇ ಅಮೂಲ್ಯ ಪುಸ್ತಕವಾದೀತು, ಅಲ್ಲವೇ?
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ನಿಮ್ಮ ಮಾತು ನೂರು ಶೇಕಡಾ ಸತ್ಯ ಸರ್, ಇದಕ್ಕೆ ಸಾಕ್ಷಿ ನೀವು ಪ್ರಕಟಿಸುತ್ತಿರುವ ನಿಮ್ಮ ತಂದೆಯವರ ಜೀವನಗಾಥೆಯ ಪುಟಗಳು. ಓದುತ್ತಾ ಓದುತ್ತಾ ಅವರ ಜ್ಞಾನ, ಕೃಷಿಯಲ್ಲಿಯ ಸಾಹಸಗಳು, ಗ್ರಂಥಾಲಯದ ಕಲ್ಪ...
ಪ್ರತಿಕ್ರಿಯೆ ನೋಡಿ →
ಈಗಿಗ ವಾರ್ತಾಪತ್ರಿಕೆಗಳನ್ನು ಓದಬೇಕೆಂದೇ ಅನಿಸೋದಿಲ್ಲ. ಯಾಕೆಂದರೆ ಅದರಲ್ಲಿರುವ ಬಹುಪಾಲು ಸುದ್ದಿಗಳು ನಮಗೆ ಈಗಾಗಲೇ ತಿಳಿದಿರುತ್ತವೆ. ಅವನ್ನು ಟಿವಿ-ಚಾನೆಲುಗಳಲ್ಲಿ ಮುಂಚಿನ ದಿನವೇ ನೋಡಿರುತ್ತೇವೆ. ಇಮತಹ ಪರಿಸ್ಥಿತಿಯಲ್ಲಿ ಈಗಿರುವ ಓದುಗರನ್ನು ಉಳಿಸಿಕೊಳ್ಳಲು ವಾರ್ತಾಪತ್ರಿಕೆಗಳು ಬದಲಾವಣೆಗಳನ್ನು ಮಾಡಿಕೊಳ್ಳಲೇ ಬೇಕಾಗಿದೆ. ಸುದ್ದಿಗಳನ್ನು ನೇರಾನೇರವಾಗಿ, ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಪ್ರಕಟಿಸಬಹುದಲ್ಲವೇ?
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ನಿಮ್ಮ ಅನಿಸಿಕೆ ಸತ್ಯ ಸರ್, ಪತ್ರಿಕೆಯಲ್ಲಿ ಹಿಂದಿನ ಹಳೆಯ ಪತ್ರಕರ್ತರ ಸಂಖ್ಯೆಯೇ ಅಧಿಕವಾಗಿರುವುದರಿಂದ ಹೀಗಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ಹೊಸ ಯುವ ಪತ್ರಕರ್ತರು ದೃಶ್ಯ ಮಾಧ್ಯಮಕ್ಕೆ ಹೋ...
ಪ್ರತಿಕ್ರಿಯೆ ನೋಡಿ →