Sampada Logo

ಅಡ್ಡೂರು ಕೃಷ್ಣ ರಾವ್

೨೪ ಅರಳಿಕಟ್ಟೆಯ ಮಾತುಗಳು

ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೨೪ ಪೋಸ್ಟ್‌ಗಳು ೧೧ ಅನುಯಾಯಿಗಳು
ಸೇರಿದ ದಿನಾಂಕ: ಶನಿವಾರ, ಫೆಬ್ರವರಿ ೨೮, ೨೦೦೯
ಅಡ್ಡೂರು ಕೃಷ್ಣ ರಾವ್
ಅರಳಿಕಟ್ಟೆಯಲ್ಲಿ ಒಬ್ಬರ ಪ್ರಶ್ನೆ: ಏನು ಚರ್ಚೆ ಮಾಡಬಹುದು, ಏನಾದರೂ ಬರೆದರೆ ಹೇಗೆ ಬರೆಯುವುದು? ಡಿ.ವಿ.ಜಿ.ಯವರ "ಮಂಕುತಿಮ್ಮನ ಕಗ್ಗ"ದಲ್ಲಿ ಈ ಪ್ರಶ್ನೆಗಳಿಗೆ ಉತ್ತರವಿದೆ. ಅದರ ೯೪೫ ಮುಕ್ತಕಗಳಲ್ಲಿ ಪ್ರತಿಯೊಂದೂ ಬೆಲೆಬಾಳುವ ರತ್ನ. ಒಂದೊಂದು ಮುಕ್ತಕದಲ್ಲಿಯೂ ಹೊಸ ವಿಚಾರ. ಹೇಳಿರುವ ರೀತಿಯಂತೂ ಅದ್ಭುತ. ಹೇಳಬೇಕಾದ್ದನ್ನು ಚುಟುಕಾಗಿ, ಮನಮುಟ್ಟುವಂತೆ, ನೆನಪಿಡಲು ಸುಲಭವಾಗುವಂತೆ ಹೇಗೆ ಬರೆಯಬಹುದು ಎಂಬುದಕ್ಕೆ ಅಲ್ಲಿವೆ ೯೪೫ ಮಾದರಿಗಳು!
೨೮೫
ಅಡ್ಡೂರು ಕೃಷ್ಣ ರಾವ್
ಕರಾವಳಿ ಕರ್ನಾಟಕಕ್ಕೆ ಪ್ರತಿ ವರುಷ ಜೂನ್ ತಿಂಗಳ ಮಾಡಲ್ ವಾರದಲ್ಲಿ ಮಳೆ ಮಾರುತಗಳು ನುಗ್ಗಿ ಬರುತ್ತಿದ್ದವು. ನಂತರ ಜೂನ್ ತಿಂಗಳಿಡೀ ಮಳೆ ಹೊಯ್ಯುತ್ತಿತ್ತು. ಆದರೆ ಈ ವರುಷ ಹಾಗಾಗಲಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆಯ ಶೇಕಡಾ ೬೦ರಷ್ಟು ಮಳೆ ಸುರಿಯಿತು. ಇದೀಗ ಆಗಸ್ಟ್ ತಿಂಗಳಿಡೀ ಜೋರಾಗಿ ಮಳೆ ಬೀಳುತ್ತಿದೆ. ಈ ಬದಲಾವಣೆಯಿಂದ ಕೃಷಿಯ ಮೇಲಾಗುವ ಪರಿಣಾಮಗಳೇನು? ಅವನ್ನು ಹೇಗೆ ಎದುರಿಸಬಹುದು?
೨೦೯
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ಜೂನ್‌ನಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದಿದ್ದರೆ ಗದ್ದೆ ಸಿದ್ಧಪಡಿಸುವುದು, ಬಿತ್ತನೆ ಮತ್ತು ನಾಟಿ ವಿಳಂಬವಾಗುತ್ತದೆ. ನಂತರ ಆಗಸ್ಟ್‌ನಲ್ಲಿ ಒಂದೇ ಸಮನೆ ಭಾರೀ ಮಳೆ ಬಂದರೆ ಹೊಸದಾಗಿ ನಾಟಿ ಮಾಡಿದ...
ಪ್ರತಿಕ್ರಿಯೆ ನೋಡಿ →
ಅಡ್ಡೂರು ಕೃಷ್ಣ ರಾವ್
ಮಂಗಳೂರಿನ ಸಂಘನಿಕೇತನದಲ್ಲಿ ಸಾಹಿತ್ಯ ಕೇಂದ್ರ ಆಯೋಜಿಸಿರುವ ಮೂರು ದಿನಗಳ ಪುಸ್ತಕ ಹಬ್ಬ ನಿನ್ನೆ ಶುರುವಾಗಿದೆ. ಸಂಜೆ ಹೋದಾಗ ಅಲ್ಲಿ ಜೋಡಿಸಿಟ್ಟ ಸಾವಿರಾರು ಪುಸ್ತಕಗಳು ಗಮನ ಸೆಳೆದವು. ಯಾಕೆಂದರೆ ಬಹುಪಾಲು ಪುಸ್ತಕಗಳು ಇಲ್ಲಿನ ಪುಸ್ತಕದ ಮಳಿಗೆಗಳಲ್ಲಿ ಲಭ್ಯವಿಲ್ಲದ ಅಪರೂಪದ ಪುಸ್ತಕಗಳು. ಅಲ್ಲಿ ಹಲವರು ಪುಸ್ತಕಗಳನ್ನು ಪರಿಶೀಲಿಸುತ್ತಿದ್ದ ಮತ್ತು ಕೆಲವರು ತಾವು ಆಯ್ದ ಪುಸ್ತಕಗಳ ಖರೀದಿಗೆ ಬಿಲ್ ಮಾಡಿಸುತ್ತಿದ್ದ ನೋಟಗಳು ಜನಸಾಮಾನ್ಯರ ಪುಸ್ತಕ ಪ್ರೀತಿಯ ಬಗ್ಗೆ ಭರವಸೆ ಮೂಡಿಸಿದವು.
೧೬೩
ಕೆ.ಪಿ.ಅಶ್ವಿನ್ ರಾವ್ ಕೆ.ಪಿ.ಅಶ್ವಿನ್ ರಾವ್ ಪ್ರತಿಕ್ರಿಯಿಸಿದ್ದಾರೆ
ಹೌದು ಸರ್, ನಾನೂ ನಿನ್ನೆ ಹೋಗಿದ್ದೆ. ಬಹಳಷ್ಟು ಶಾಲಾ ಮಕ್ಕಳು ಬಂದು ಕುತೂಹಲದಿಂದ ಪುಸ್ತಕಗಳನ್ನು ವೀಕ್ಷಿಸಿ, ಕನಿಷ್ಟ ಒಂದಾದರೂ ಪುಸ್ತಕ ಖರೀದಿಸಿ ಬಿಲ್ ನ ಸಾಲಿನಲ್ಲಿ ನಿಂತಿರುವುದು ನೋಡಿದಾಗ ಇನ...
ಪ್ರತಿಕ್ರಿಯೆ ನೋಡಿ →
ಅಡ್ಡೂರು ಕೃಷ್ಣ ರಾವ್
ಇವತ್ತಿನ ೮೦ನೇ ಸ್ವಾತಂತ್ರ್ಯ ದಿನದಂದು ಬೆಳಗಾಗುತ್ತಿದ್ದಂತೆ ನನಗೆ ಕಾಡಿದ್ದು "ನಮ್ಮ ಹೆಮ್ಮೆಯ ಭಾರತ" ಎಂಬ ನನ್ನ ಪುಸ್ತಕ ರೂಪುಗೊಂಡ ಬಗೆ. ೨೦೨೦ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದಂದು ಬಾಲ್ಯದ ದಿನಗಳಲ್ಲಿ ಆ ದಿನಾಚರಣೆಯ ಸಂಭ್ರಮ ಹೇಗಿತ್ತು ಎಂಬ ನೆನಪುಗಳು ನುಗ್ಗಿ ಬಂದಿದ್ದವು. ಆಗ, ನಮ್ಮ ದೇಶದ ಸಾಧನೆಗಳ ಚಿತ್ರಗಳು ಮನಃಪಟಲದಲ್ಲಿ ಪುಟಿದೆದ್ದವು. ಅವನ್ನು ಪಟ್ಟಿ ಮಾಡಲು ಶುರು ಮಾಡಿದಾಗ, ೨೫ ಸಾಧನೆಗಳ ನಂತರ ಮುಂದುವರಿಸಲು ನೆನಪು ಸಹಕರಿಸಲಿಲ್ಲ. ಆಗ ಒಂದು ನೂರು ಸಾಧನೆಗಳ ಬಗ್ಗೆ ಬರೆಯುವ ಸಂಕಲ್ಪ ಮಾಡಿದೆ. ಅದರ ಫಲವೇ ಆ ಪುಸ್ತಕ. ನೀವೂ ಇಂತಹ ಸಂಕಲ್ಪ ಮಾಡಿ ಸಾಕಾರಗೊಳಿಸಿದ್ದರೆ ಹಂಚಿಕೊಳ್ಳಿ.
೨೩೮
ಕೆ.ಪಿ.ಅಶ್ವಿನ್ ರಾವ್ ಕೆ.ಪಿ.ಅಶ್ವಿನ್ ರಾವ್ ಪ್ರತಿಕ್ರಿಯಿಸಿದ್ದಾರೆ
ಅಡ್ಡೂರ್ ಸರ್, ನೀವು ಬರೆಯುತ್ತಿದ್ದ ನಮ್ಮ ಹೆಮ್ಮೆಯ ಭಾರತದ ಬರಹಗಳನ್ನು 'ಸಂಪದ' ದಲ್ಲಿ ಇಷ್ಟ ಪಟ್ಟು ಓದುತ್ತಿದ್ದವನು ನಾನು. ಬರಹ ಕೆಲವೇ ಸಾಲಿನದ್ದಾಗಿದ್ದರೂ ಅಗಾಢ ಮಾಹಿತಿಯನ್ನು ಒಳಗೊಂಡಿತ್ತು....
ಪ್ರತಿಕ್ರಿಯೆ ನೋಡಿ →