ಮನದೇಲಿನಿದು ಮುದವಾವರಿಸೋಸರಿಸುತಿಹುದೆನ್ನ ಮನದಾಸೆಯೈಸಿರಿಯಾಗ
ಮನದನುಕೂಲ ಶಕುನವಿದಿರಬಹುದೆಂದವಸರಸಿ ಸಿಂಗಾರದಲಿ ತೊಡಗಿ ಮನದ ಗ
ಮನವನಿರಿಸಿ ಚೆಲುವಿನುಬ್ಬುಗಳ ತೀಡುತ ಕಾಡಿಗೆಯಲಕ್ಷದಂದವನೇರಿಸುತ ಪ್ರಿಯತ
ಮನ ನೆನಪೆ ಮನವಾವರಿಸಿರಲು ಘಮಘಮಿಪ ಘನ ಮಲ್ಲೆಯ ಸಿರಿಮುಡಿಯಲೇರಿಸಿ
ಹೊಳೆವ ಸಿಂಧೂರವಂ ಭ್ರೂಮಧ್ಯದಲಿರಿಸಿ ದಿವ್ಯಾಂಬರದ ದಿರಿಸಿನಲಿ ಹೊನ್ನ ಮುತ್ತಿನ
ಬಳೆಗಳ ಧರಿಸಿದಳರಸಿ ವಿದ್ಯಾಧರೆ ಪತಿಯನಿರವ ಶೋಧಿಸುವ ತವಕದಲಿ ಕೂಗಿಕರೆ
ದಳು ಮದನಮಂಜರಿಯೋಗೊಡುತ ಧಾವಿಸಿ ನಿಂತಳಚ್ಚರಿಯಲರಸಿಯಂದದಪ್ರಭಾ
ವಳಿಯಲಿ ಮಾರುಹೋಗರೆ ನಿಜರಸಿಕರಿವಳ ಚೆಲುವಿಗೆ ಕವಿಗಳಿಗಿವಳೆ ಸರಿಯೆಂದುಸಿರಿ
ದಳು ರಾಜನೊಡ್ಡೋಲಗದ ಕವಿಮಣಿಮುಕುಟ ಕಾಳಿದಾಸರಿಹರಿಲ್ಲಿ ಪರಿಚಯಿಪೆನೆಂದೋ
ಲೈಸಿದಳು ಸಂಭ್ರಮದಿ ಶುಭಾರಂಭವೀದಿನ ನಿನ್ನಿನಿಯನಿರವನರಿಯುವ ಕೆಲಸದಾರಂಭದ
ಲೆ ರಾಜಪ್ರಭಾವದಪ್ರಸ್ತಾವನೆಯನಿಡುತ ವರಕವಿಯನೊಪ್ಪಿಸೆ ಸೇರುವೆ ಪತಿಯನತಿ ಶೀಘ್ರದ
ಲಿ ತಡವೇಕಿನ್ನೆಂದವಸರಿಸಿನಿತು ಸುಲಭದಲೆನ್ನಯ ಭಾರವಿಳಿದುದೆನುತ ಸಂತಸಂಬಟ್ಟಳು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!