ಏನಿದೇನಿದೀ ಮಾಯೆ ಏನಿದೇನಿದೀ ಚೋದ್ಯ
ಇರುವುದೇ ಮೂರು ದಿನ ಜಗವನೆ ಬಯಸಿಹರು |
ಚಿರಕಾಲ ಬದುಕೆಂದು ಭ್ರಮೆಯ ತಳೆದಿಹರು
ಈ ಜಗವ ನಡೆಸಿಹುದು ಮಾಯೆ ಮೂಢ || ..277
ನೂರು ಜನ್ಮವು ಅಲ್ಪ ತಿಳಿಯಲೀ ಜಗವ
ಅಲ್ಪಜ್ಞ ಕುಣಿವ ತೋರಿ ಪಂಡಿತನ ಭಾವ |
ಪರರ ಹೀಗಳೆದು ತಾನೆ ಸರಿಯೆನುವವನು
ಮಾಯೆಯ ಬಲೆಯಲಿಹ ಕೀಟ ಮೂಢ || ..278
**********************
-ಕ.ವೆಂ.ನಾಗರಾಜ್.
ಪ್ರಾಸಂಗಿಕವಾಗಿ ಮನ ಕಲಕಿದ ಈ ಸುದ್ದಿ ತಮ್ಮ ಗಮನಕ್ಕಾಗಿ:
___LINK_OPEN_imageanchor="1" href="http://4.bp.blogspot.com/-47IHus4P7sU/TrpLiwkfA_I/AAAAAAAAA4k/XMB_PcJpRms/s1600/IMG.jpg"___
****************************
ಆತ್ಮೀಯರೇ,
ಇದು 'ಸಂಪದ'ದಲ್ಲಿ ನನ್ನ 250ನೆಯ ಬರಹ. ಸಂಪದದ ನಿರ್ವಹಣಾ ತಂಡದವರಿಗೆ, ಓದಿದ, ಪ್ರತಿಕ್ರಿಯಿಸಿದ, ಪ್ರೋತ್ಸಾಹಿಸಿದ ಎಲ್ಲಾ ಸಂಪದಿಗರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
-ಕ.ವೆಂ.ನಾಗರಾಜ್.
:
ಪ್ರತಿಕ್ರಿಯೆ (5)