ಒಂಟಿಯೆಂದೆನುತ ಕೊರಗದಿರು ಮರುಳೆ
ಕೊರಗಿ ಮುದುಡಿದರೆ ಜೊತೆಗಾರು ಸಿಗರು |
ಮೈಕೊಡವಿ ಮೇಲೆದ್ದು ಮುಂದಡಿಯನಿಡಲು
ಎಲ್ಲರೂ ನಿನ್ನವರೆ ತಿಳಿಯೊ ಮೂಢ || ..291
ಕಾಣದ್ದು ಕಾಣುವುದು ಕೇಳದ್ದು ಕೇಳುವುದು
ಕಂಡಿರದ ಕೇಳಿರದ ಸತ್ಯದರಿವಾಗುವುದು |
ಮುಚ್ಚಿದ್ದ ದಾರಿಗಳು ನಿಚ್ಚಳದಿ ತೆರೆಯುವುವು
ಏಕಾಂತದಲಿಹುದು ನಿನ್ನತನ ಮೂಢ || ..292
*************
-ಕ.ವೆಂ.ನಾಗರಾಜ್.
ಪ್ರತಿಕ್ರಿಯೆ (4)