ಕಸ್ತೂರಿಯ ಮೊದಲ ಸಂಚಿಕೆ ಇದಾಗಿದ್ದು archive. org ತಾಣದಲ್ಲಿ ಇದು ನಿಮಗೆ ಸಿಗುತ್ತದೆ.  ಕಸ್ತೂರಿಯ ಧ್ಯೇಯೋದ್ದೇಶಗಳ ಬಗ್ಗೆ ಪ್ರಾರಂಭದ ಒಂದು ಲೇಖನದಲ್ಲಿ ಹೀಗೆ ಹೇಳುತ್ತಾರೆ:-


"ಕಸ್ತೂರಿ” ಇಂದಿನ ಕಾಲದ ಜನತೆಗಾಗಿ ಇರುವುದು.  ಅದು ಭಾರತದ ಭವ್ಯ ಪ್ರಾಚೀನ ಸಂಸ್ಕೃತಿ  ಮತ್ತು ಸಾಹಿತ್ಯ ಗಳ ಪರಂಪರೆಯ  ಪರಿಚಯ ಮಾಡಿಕೊಡಲು ಯತ್ನಿಸುವುದು. ಆದರೆ ಗತವೈಭವವನ್ನು ನೆನೆಯುವಾಗ ಗತ ಕಾಲಕ್ಕೆ ಮರಳುವ ಹವ್ಯಾಸ ಅದಕ್ಕಿಲ್ಲ. ನಾವು ಇಂದಿನ ಕಾಲದಲ್ಲಿ ಬಾಳಬೇಕಾಗಿದೆ ಮತ್ತು ಇಂದಿನ ಸಮಸ್ಯೆಗಳನ್ನು ಬಿಡಿಸಬೇಕಾಗಿದೆಯೆಂದು  ಅದು ಮರೆಯವುದಿಲ್ಲ.

ಸಂತೋಷಂ ಜನಯೆತ್‌ ಪ್ರಾಜ್ಞಃ ತದೇವೇಶ್ವರಪೂಜನಂ - ಕಸ್ತೂರಿಯ ನೀತಿ ಇದು. ಜೀವನದ ಆಶಾದಾಯಕ ಅಂಶಗಳ ಕಡೆ ದೃಷ್ಟಿ ತಿರುಗಿಸಿ ಮನುಷ್ಯನನ್ನು ಪೌರುಷದ ಕಡೆ ಹೊರಳಿಸುವುದು ನಮ್ಮ ನಾಡಿನಲ್ಲಿ ಅವಶ್ಯ ಮಾಡಬೇಕಾದ ಕಾರ್ಯ. ಜೀವನದಲ್ಲಿ ನಿಜವಾಗಿ ಸುಂದರವಾದದ್ದು, ರುಚಿಕರವಾದದ್ದು, ಸ್ವೃಹಣೀಯವಾದದ್ದ ಧಾರಾಳವಾಗಿದೆ. ಮೊಳಕೆಯಿಂದಲೆ ಬೆಳಕಿನ ಕಡೆ ಮುಖ ಮಾಡಿ ಸಸ್ಯ ಬೆಳೆಯುತ್ತದೆ. ಜೀವನವೆಲ್ಲವೂ ಆನಂದದ ಹಂಬಲದಲ್ಲಿ ಮೊಳೆಯುತ್ತದೆ. ಮರಳುಗಾಡಿನಲ್ಲಿಯೂ ಓಯಸಿಸ್ಸುಗಳಿರುವಂತೆ ಆತಿ ಶುಷ್ಕ ಜೀವನದಲ್ಲಿಯೂ ರಸದ ಬುಗ್ಗೆಗಳಿರುತ್ತವೆ. ಆ ಧಾರೆಗಳನ್ನು ಗುರುತಿಸಿ  ತೋರಿಸುವ ಅಪೇಕ್ಷೆ ಕಸ್ತೂರಿಯದು.

ಒಂದು ಮಾತಿನಲ್ಲಿ, “ ಕಸ್ತೂರಿ” ಜೀವನದ ಕಂಪಿನ ಸೆ ಸೇವನೆಯ ಪಕ್ಷಪಾತಿ. ಆ ಕಂಪು ಎಲ್ಲೆಲ್ಲಿ ಪ್ರತೀತಿಗೆ ಬರುತ್ತದೋ ಅಲ್ಲಲ್ಲಿಂದ ಅದನ್ನು ಹೊತ್ತು ತರುವ ಗಾಳಿಯ ಕೆಲಸವನ್ನು ಅದು ಮಾಡಬೇಕೆನ್ನುತ್ತದೆ.


ಆಧುನಿಕ ಕಾಲಕ್ಕೆ ಬೇಕಾದ ಜ್ಞಾನವನ್ನು ಸುಲಭ ರೂಪದಲ್ಲಿ ಜನತೆಗೆ ಒದಗಿಸುವ ಗುರಿಯಿಟ್ಟುಕೊಂಡ "ಲೋಕ ಶಿಕ್ಷಣ ಟ್ರಿಸ್ಟಿನ ಹೊಸ ಉದ್ಯಮವಿದಾಗಿದೆ.


ಮುಂದೆ ಒಂದು ಲೇಖನದ ತಲೆಬರಹ ಈ ಮುಂದಿನಂತೆ ಇದೆ. 'ಜೀವನ ನೌಕಾಯಾನ - ಅದರಲ್ಲಿರುವ ಅಪಾಯಗಳೇ ಅದರಲ್ಲಿರುವ ಆನಂದ'


ಕಸ್ತೂರಿಯ ಮಹತ್ವವನ್ನು, ಕಸ್ತೂರಿ ಮೃಗದ ಕುರಿತು ಮಾಹಿತಿಯನ್ನು ಮತ್ತು ಕನ್ನಡಕ್ಕೂ ಕಸ್ತೂರಿಗೂ ಇರುವ ಸಂಬಂಧವನ್ನು "ಕನ್ನಡಿಗರ ನೆಚ್ಚಿನ ಕಸ್ತೂರಿ" ಎಂಬ ಲೇಖನದಲ್ಲಿ ಹೇಳಿದ್ದಾರೆ.


"ನಿಮ್ಮ ವ್ಯಕ್ತಿತ್ವ ಆಕರ್ಷಕವಾಗಿದೆಯೇ " ಈ ಲೇಖನ ಓದಿ ಇದರಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ ನಿಮ್ಮ ವ್ಯಕ್ತಿತ್ವ ಆಕರ್ಷಕವಾಗಿದೆಯೇ  ಎಂದು ತಿಳಿದುಕೊಳ್ಳಿ. ಹಾಗೂ ಆಕರ್ಷಕ ವ್ಯಕ್ತಿತ್ವಕ್ಕೆ ಏನು ಬೇಕೆಂದು ತಿಳಿದುಕೊಳ್ಳಿ.


"ರಾಮಾಯಣದ ವಿವಿಧ ಅವತಾರಗಳು"  ಲೇಖನವು ಕುತೂಹಲಕರವಿದೆ. 


ಒಬ್ಬನಿಗೆ ಯಾರೋ , " ನಶೀಬ ಎಂಬುದರಲ್ಲಿ ನಿಮಗೆ ವಿಶ್ವಾಸವಿದೆಯೆ? "ಎಂದು ಕೇಳಿದರು.

ಅದಕ್ಕಾತ, “ ಇಲ್ಲದೆ ಏನು? ಹಾಗಿಲ್ಲದಿದ್ದರೆ ನಮ್ಮ ಪ್ರತಿಸ್ಪರ್ಧಿಯ ಯಶಸ್ಸಿಗೆ ನಾವು ಯಾವ ಕಾರಣವನ್ನು ಹೇಳಬಲ್ಲೆವು? '' ಎಂದುತ್ತರವಿತ್ತ,