ಇದು ಕೇವಲ 38 ಪುಟದ ಪುಸ್ತಕ . archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ.
ವಾಲಿಯು ಸಮುದ್ರ ಮಥನದಲ್ಲಿ ಭಾಗವಹಿಸಿದನಂತೆ. ಆಗ ಈ ತಾರೆ ಉತ್ಪತ್ತಿ ಆದಳಂತೆ. ಇದು ನನಗೆ ಗೊತ್ತಿರಲಿಲ್ಲ.
ಪ್ರಾರಂಭದಲ್ಲಿ ರಾಕ್ಷಸರು ದೇವತೆಗಳ ಮೇಲೆ ಜಯಶಾಲಿಯಾಗಿತ್ತಾರೆ. ಆಗ ರಾಕ್ಷಸರ ರಾಜ ಬಲಿಯನ್ನು ಭೇಟಿ ಮಾಡಲು ದೇವತೆಗಳು ದೇವೆಂದ್ರನ ನೇತೃತ್ವದಲ್ಲಿ ಬಂದಿರುತ್ತಾರೆ. ಬಲಿಯು ಅಣ್ಣನಂತೆ. ದೇವೇಂದ್ರನು ತಮ್ಮನಂತೆ. ತಮ್ಮನನ್ನು ಬಲಿಯು ಚೆನ್ನಾಗಿ ನಡೆಸಿಕೊಂಡು ಚೆನ್ನಾಗಿ ಮಾತನಾಡುತ್ತಾನೆ. ಸಮುದ್ರಮಥನ ಮಾಡಲು ನಾರಾಯಣನು ಕೊಟ್ಟ ಸೂಚನೆಯನ್ನು ದೇವತೆಗಳು ಮತ್ತು ರಾಕ್ಷಸರು ಒಪ್ಪಿಕೊಳ್ಳುತ್ತಾರೆ.
ಅವರು ಒಪ್ಪಿಕೊಂಡಂತೆ ಎರಡು ಪಾಲು ರಾಕ್ಷಸರಿಗೂ ಒಂದು ಪಾಲು ದೇವತೆಗಳಿಗೂ ಸಿಗಲಿದೆ.
ಸಮುದ್ರ ಮಟ್ಟದಲ್ಲಿ ಮಂದರ ಪರ್ವತವು ಸಮುದ್ರದ ಕೆಳಗೆ ಇಳಿಯದಂತೆ ವಿಷ್ಣು ಕೂರ್ಮ ಅವತಾರವನ್ನು ಪಡೆದು ಸಮುದ್ರದಲ್ಲಿ ಆ ಮಂದರ ಪರ್ವತದ ಕೆಳಗೆಇರುತ್ತಾನೆ. ರಾಕ್ಷಸರು ವಾಸುಕಿಯ ತಲೆಯನ್ನು ಹಿಡಿಯುತ್ತಾರೆ. ದೇವತೆಗಳು ವಾಸುಕಿಯ ಬಾಲವನ್ನು ಹಿಡಿಯುತ್ತಾರೆ. ವಾಸುಕಿಯ ಬಾಯಿಂದ ಹೊರಟ ವಿಷವನ್ನು ಈಶ್ವರನು ಕುಡಿದು ನೀಲಕಂಠನಾಗುತ್ತಾನೆ. ವಾನರ ವಾಲಿಯು ಅತಿ ಬಲಶಾಲಿಯಾಗಿದ್ದು ತಾನೊಬ್ಬನೇ ಸಮುದ್ರಮಥನ ಮಾಡುತ್ತಾನೆ.ಆಗ ತಾರೆಯು ಸಮುದ್ರಮಟ್ಟದಿಂದ ಉದ್ಭವವಾಗುತ್ತಾಳೆ. ಅವಳು ಉದ್ಭವಕ್ಕೆ ಕಾರಣನಾದ ವಾಲಿಯೇ ಅವಳನ್ನು ಸ್ವೀಕರಿಸಬೇಕಾಗುತ್ತದೆ. ಅವನು ಅವಳನ್ನು ಹೆಂಡತಿಯನ್ನಾಗಿ ಸ್ವೀಕರಿಸುತ್ತಾನೆ.
ವಾಲಿಯ ತಂದೆ ಇಂದ್ರ ಎಂದು ಕಾಣುತ್ತದೆ.
.
ಪ್ರತಿಕ್ರಿಯೆ (1)
ಈ ಕಥೆ ತಿಳಿದಿರಲಿಲ್ಲ. archive.org ತಾಣದ ಕೊಂಡಿ ಸಿಗಬಲ್ಲದೇ?
archive.org ತಾಣದಲ್ಲಿ ಬರುವ ಪುಸ್ತಕದ ಐಕಾನ್ ಗೆ ಕ್ಲಿಕ್ ಮಾಡಿ ನಂತರ ಕನ್ನಡದಲ್ಲಿ ಹುಡುಕಬಹುದು.