ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ ಎಂಬ ಒಂದು ಪುಸ್ತಕವನ್ನು archive.org ತಾಣದಿಂದ ಇಳಿಸಿಕೊಂಡು ಓದುತ್ತಿದ್ದೇನೆ. ನಿಜಕ್ಕೂ ಚೆನ್ನಾಗಿದೆ.
ಇದರಲ್ಲಿ ರಾಜನು ಧರ್ಮವನ್ನು ಆಚರಿಸುತ್ತಿದ್ದಾನೆ. ರಾಜ್ಯದಲ್ಲಿ ಕಳ್ಳರು ಹೆಚ್ಚಾದರೆ ರಾಜನು ಏನು ಮಾಡಬೇಕು? ರಾಜನು ಪರಸ್ತ್ರೀಯನ್ನು ಮುಟ್ಟಬಹುದೇ? ಮನಸ್ಸಿನ ವಿರುದ್ಧವಾಗಿ ಬೇರೆಯವರ ಜತೆಗೆ ಮದುವೆ ಮಾಡಿದರೆ ಏನು ಮಾಡಬೇಕು ? ಎಂಬೆಲ್ಲ ವಿಚಾರಗಳು ನಾವು ಓದಿರುವ ಪುಸ್ತಕಗಳಿಂದ ಬೇರೆಯಾಗಿವೆ.
ದೇವ ಇಂದ್ರನು ದೇವತೆಗಳ ರಾಜ ಪಟ್ಟವನ್ನು ತ್ಯಜಿಸುವನೆ? ಧರ್ಮವನ್ನು ಆಚರಿಸಿ ಜೀವತೆತ್ತ ರಾಜನ ಹಾಗೂ ನಾಯಕಿಯ ಗತಿ ಏನಾಯಿತು ? ಎಂದು ತಿಳಿಯಲು ಈ ಕಾದಂಬರಿಯನ್ನು ನಾನು ಓದಿ ಮುಗಿಸಲೇಬೇಕಿದೆ.
ಹೋ ಇದು ಬುದ್ಧನ ಪೂರ್ವ ಜನ್ಮದ ಕತೆಯೋ !
ವೈಯಕ್ತಿಕವಾಗಿ ತಾನೊಬ್ಬನೇ ಸುಖ ಹೊಂದಬಾರದೋ ?
ನರಕದ ಶಿಕ್ಷೆಗಳು ತಪ್ಪೋ?
ಮರ್ತ್ಯರು ಇಲ್ಲದ ಗುಣಗಳನ್ನು ದೇವತೆಗಳಲ್ಲಿ ಆರೋಪಿಸುವರೋ ? ಜನರು ಅಜ್ಞಾನವಶರಾಗಿ ಪಾಪವನ್ನು ಆಚರಿಸುವರೋ ?
ಈ ಕಾದಂಬರಿಯಲ್ಲಿ ಕೊನೆಗೆ ಹೇಳುವ ಧರ್ಮಸೂಕ್ಷ್ಮವು ಯಾವುದು ?
ಪಾಪಿಗಳೆಲ್ಲ ಪುಣ್ಯವಂತರಾಗುವುದು ಹೇಗೆ ?
ಕೊನೆಯಲ್ಲಿ ನರಕವಾಸಿಗಳೆಲ್ಲ ಮುಕ್ತರಾಗುವರು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!