ಇದರ ಮೂಲ ಬರಹ ನನ್ನ ಬ್ಲಾಗ್ ನಲ್ಲಿದೆ.. ಇಲ್ಲಿ ಕೆಲವನ್ನಷ್ಟೇ ನೀಡುತ್ತಿದ್ದೇನೆ.. ಯಾಕೆಂದರೆ, ಸಂಪದದಲ್ಲಿ  ಫೋಟೋ ಅಪ್ ಲೋಡು ಮಾಡುವುದು ಕಷ್ಟವಾಗುತ್ತಿದೆ.
ವಿಳಾ:-ಸ http://shivagadag.blogspot.com
1) ಮುಗಿಯದಂತಹ ನಾಟಕವನ್ನು ಶುರು ಮಾಡಿ, "ಜೀವನ" ಅಂತಾ ಹೆಸರಿಟ್ಟು, ಕೈತೊಳೆದುಕೊಂಡ ಮಹಾ ಸೂತ್ರದಾರನ ಹೆಸರು "ಭಗವಂತ"

2) ನನ್ನ ಮನೆವರೆಗೂ ಬರ್ತೀಯಾ? ಅಂದನು... ಕೈಕೊಟ್ಟರೆ ಖಂಡಿತಾ ಎನ್ನುವುದು ಅವಳ ಉತ್ತರವಾಗಿತ್ತು.

3) ಅವಳ ಗೆಳತಿಯರನ್ನು ತುಂಬಾ ದ್ವೇಷಿಸುತ್ತಿದ್ದ... ಅವಳ ಜೊತೆ ಕಾಲೇಜಿಗೆ ಹೋಗುವಾಗ ಅಷ್ಟೊಂದು ಹೆಜ್ಜೆ ಗುರುತುಗಳಲ್ಲಿ ಅವಳದನ್ನು ಹುಡುಕುವುದು ಕಷ್ಟ!! ಎಂಬ ಕಾರಣ ಕೇಳಿ ಅವಳು ನಕ್ಕು ಬಿಟ್ಟಿದ್ದಳು.


4) ನನ್ನವಳ ನೋಡೋ ತವಕದಲ್ಲಿ ಆ ಸೂರ್ಯನನ್ನೇ ಮರೆ ಮಾಡಿಬಿಟ್ಟೆ.. ಮುಗ್ಧ ಜನ "ಸೂರ್ಯ ಗ್ರಹಣ" ಅಂದರು.

5) ಸದಾ ಕಂಪ್ಯೂಟರ್ ಮುಂದೆ ಬಿಜಿಯಾಗಿರುತ್ತಿದ್ದ ತಂದೆಗೆ ಪುಟ್ಟ ಮಗನ ಮುದ್ದು ಮಾತುಗಳು ಅರ್ಥವಾಗಿರಲಿಲ್ಲ. ಮೇಲಿಂದ ನೋಡುತ್ತಿದ್ದ ಭಗವಂತ ಕೂಡಲೇ ಕರೆಂಟ್ ತೆಗೆದಿದ್ದ.

6) ನೂರಕ್ಕೆ ನೂರು ಅಂಕ ತೆಗೆಯುತ್ತೇನೆಂದು ಚಾಲೆಂಜ್ ಮಾಡಿದವ ರಿಜಿಸ್ಟರ್ ನಂಬರ್ ತಪ್ಪಾಗಿ ಬರೆದು ಬಂದಿದ್ದ..

7) ಹೋಂ ವರ್ಕ್ ಮಾಡಿದ್ದರೂ ಸಹ ಅವನು ಅವಳ ಜೊತೆ ಒದೆ ತಿಂದ.


8) ಅವನಿಗೆ ತಾನು ಪ್ರಸಿದ್ಧಿಯಾಗೋದು ಬೇಕಿರಲಿಲ್ಲ.. ಅದು ಅವಳಿಗೆ ಗೊತ್ತಾದರೆ ಸಾಕಿತ್ತು..


9) ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವ ತನ್ನ ಜೊತೆಯಲ್ಲಿ ಮೊಬೈಲನ್ನೂ ಒಯ್ದಿದ್ದ.. ಅವಳ ಕರೆಯ ನಿರೀಕ್ಷೆಯಲ್ಲಿ..

ಇಂತಿ ನಿಮ್ಮ ಪ್ರೀತಿಯ,

ಯಳವತ್ತಿ