ಆರಂಭದ ದಿನಗಳಲ್ಲಿ ಡಾಕ್ಟರ್ ಜೀ ಸ್ನೇಹಿತ ಶ್ರೀ ಅಣ್ಣಾಖೋತ್ ಅವರ ನಾಗಪೂರ್ ವ್ಯಾಯಾಮಶಾಲೆಯಲ್ಲಿ ಸಂಘದ ತರುಣರು ದಂಡ, ಬೈಠಕ್, ಮಲ್ಲಖಂಬ ಇತ್ಯಾದಿ ಶಾರೀರಿಕ ಶಿಕ್ಷಣ ಪಡೆಯುತ್ತಿದ್ದರು. ಅಲ್ಲಿ ಡಾಕ್ಟರ್ ಜೀ ಸ್ವತ: ಹಾಜರಿದ್ದು ಶಿಕ್ಷಣದ ಅವಲೋಕನ ಮಾಡುತ್ತಿದ್ದರು. ಅವರ ಪ್ರೋತ್ಸಾಹದಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳು, ಉದ್ಯೋದಸ್ಥ ತರುಣರುಮಾತ್ರವಲ್ಲದೆ, ಅದುವರೆಗೆ ಸರಕಾರದ ಭಯದಿಂದ ಹಿಂಜರಿಯುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಸಹ ವ್ಯಾಯಾಮದ ಶಿಕ್ಷಣ ಪಡೆಯಲಾರಂಭಿಸಿದರು. ಕೆಲವೇ ದಿನಗಳಲ್ಲಿ ಶಿಕ್ಷಕರಾದ ಶ್ರೀ ದತ್ತೋಪಂತ್ ಮಾರೋಳಕರ್ ಮತ್ತು ಶ್ರೀ ಅಣ್ಣಾ ಸೋಹನಿ ಅವರಿಬ್ಬರಿಗೆ ನಿಭಾಯಿಸಲು ಕಠಿಣವೆನಿಸುವಷ್ಟು ಸಂಖ್ಯೆ ಏರತೊಡಗಿತು
ತರುಣರಿಗೆ ವ್ಯಾಯಾಮವಲ್ಲದೆ ಇನ್ನೂ ಹೆಚ್ಚಿನ ವಿಷಯಗಳಲ್ಲಿ ಶಿಕ್ಷಣ ಅಗತ್ಯವೆಂದು ಡಾಕ್ಟರ್ ಜೀ ಅವರಿಗೆ ಅನಿಸಿತು. ಬೆಳೆಯುತ್ತಿರುವ ಸಂಖ್ಯೆ ಯಿಂದಾಗಿ ವ್ಯಾಯಾಮದ ಶಿಕ್ಷಣಕ್ಕಾಗಿ "ಮಹಾರಾಷ್ಟ್ರ ವ್ಯಾಯಾಮಶಾಲಾ "ಹಾಗೂ "ಪ್ರತಾಪ ಅಖಾಡಾ"ಗಳು ಸ್ವತಂತ್ರವಾಗಿ ಆರಂಭವಾದವು, ಎಲ್ಲಕ್ಕೂ ಡಾಕ್ಟರ್ ಜೀ ಅವರ ಪ್ರೋತ್ಸಾಹವೇ ಇದ್ದರೂ ಕ್ರಮೇಣ ಅವುಗಳಲ್ಲಿ ಪರಸ್ಪರ ಸ್ಪರ್ಧೆ ಬೆಳೆಯಲಾರಂಭಿಸಿತು. ಅದರಿಂದ ಸಂಘದ ಕೆಲಸಕ್ಕೆ ಧಕ್ಕೆಯಾಗಬಾರದೆಂದು ಡಾಕ್ಟರ್ ಜೀಅವರು ಸಂಘದ ಶಿಕ್ಷಣವನ್ನೇ ಪ್ರತ್ಯೇಕಗೊಳಿಸಲು ಯೋಚಿಸಿದರು. ಪರಿಣಾಮವಾಗಿ "ಇತವಾರ ದರವಾಜಾ" ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸಂಘದ ಕಾರ್ಯಕ್ರಮಗಳೇ ಆರಂಭವಾದವು. ಮೊದಲು ವ್ಯಾಯಾಮದ ಶಿಕ್ಷಣ, ಕೊನೆಯಲ್ಲಿ ಪ್ರಾರ್ಥ್ಯನೆ - ಈ ರೂಪದ ಕಾರ್ಯಕ್ರಮಗಳು ಕಾಣತೊಡಗಿದವು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!