ಏನು ಕಾಲ ಬಂತೋ ತಮ್ಮಾ - 2
ಏನು ಕಾಲ ಬಂತೋ ತಮ್ಮಾ ಊರೊಳಗ |
ನೂರಾರ್ ಊರೊಳಗ ||
ನೂರಾರ್ ಊರು ಸೇರಿ ನಮ್ಮ ದೇಶದೊಳಗ
ಭಾರತ ದೇಶದೊಳಗ ||
ಕೋಟಿ ಕೋಟಿ ಲೆಕ್ಕ ಇಲ್ಲ ತಮ್ಮೊಳಗ |
ತಂ ತಮ್ಮೊಳಗ ||
ಲೂಟಿ ಮಾಡ್ತಾ ಇದ್ದಾರಲ್ಲೋ ದೇಶದೊಳಗ |
ನಂ ದೇಶದೊಳಗ ||
ಆಳುವೋರ್ಗೆ ಹೇಳೋರಿಲ್ಲ ನಾಡೊಳಗ |
ನಂ ನಾಡೊಳಗ ||
ಗಾಂಧೀ ಮುತ್ಯಾ ಇಲ್ಲಾವಲ್ಲೋ ಕೇಳುದಕ |
ಇವರ್ನ ಕೇಳುದಕ ||
ಪಕ್ಷ ಬೇರೆ ಆದ್ರೆ ಬುದ್ಧಿ ಮಾತ್ರ ಒಂದೇನೆ |
ಎಲ್ರ ಬುದ್ಧಿ ಒಂದೇನೆ ||
ಲಕ್ಷ ಕೊಟ್ಟು ಕೋಟಿ ಮಾಡೋದ್ ಎಲ್ರ ದಂದೇನೆ |
ಎಲ್ರ ದಂದೆ ಒಂದೇನೆ ||
ನೀತಿ ನಿಯಮ ಹೇಳಿದೋರ ಮಾತಿಗಷ್ಟೇನೆ |
ನೀತಿ ಮಾತಿಗಷ್ಟೇನೆ ||
ಪ್ರೀತಿ ಮಾತ್ರ ತಾನು ತಂದು ಎಂಬುದಕ್ಕೇನೆ |
ಪ್ರೀತಿ ತನ್ನದಕ್ಕೇನೆ ||
ದೇಶವೆಲ್ಲ ತನ್ನ ಸ್ವಂತ ಆಸ್ತಿ ಅಂದ್ಕೊಂಡು |
ತನ್ನ ಆಸ್ತಿ ಅಂದ್ಕೊಂಡು ||
ಮಕ್ಳು ಮರಿಗೆ ಹಂಚ್ತಾರಲ್ಲ ನಾಚ್ಕೆ ಬಿಟ್ಕೊಂಡು |
ಪೂರ್ತಿ ನಾಚ್ಕೆ ಬಿಟ್ಕೊಂಡು ||
ಏನು ಮಾಡೋದ್ ನಾವು ಇದ್ನ ನೋಡ್ತಾ ಕೂರ್ಬೆಕು |
ನೋಡ್ತಾ ಸುಮ್ನೆ ಕೂರ್ಬೆಕು ||
ಇಲ್ಲಾ ಅಂದ್ರೆ ಮೈಯ ಪರಚಿಕೊಂಡು ಅಳಬೇಕು |
ಮೈಯ ಪರಚಿ ಅಳಬೇಕು ||
- ಸದಾನಂದ
ಪ್ರತಿಕ್ರಿಯೆ (4)