ಕವಿತೆಯ ಪದ ಬಂಡಿ

 

ಯುಗಾದಿಗೆ ನಮ್ಮ ಮೆಟ್ರೋ ಶುರುವಾಗತ್ತೋ ಗೊತ್ತಿಲ್ಲ
ಅದರೆ ಪದ್ಯದ ಪದಬಂಡಿ ಪುನಃ ಶುರುವಾಯ್ತು
ಈ ಸಾರಿ ಇದು ಜಪಾನಿನ ಸುನಾಮಿಯ ಬಗೆಗೆ
ಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕು

ಮೊದಲ ಸಾಲಿನ ಕೊನೆಯ   ಪದ ಅನುಕೃಮಣಿಸುತ್ತ ಪ್ರಾಸ ಬದ್ಧವಾಗಿ ಮುಂದುವರಿಯುತ್ತವೆ

ಮತ್ತು ನಾಲ್ಕನೆಯ ಸಾಲಿನ ಕೊನೆಯ  ಶಬ್ದ ಅದರ ಮುಂದಿನ ಸಾಲಿನ ಮೊದಲ ಶಬ್ದವಾಗಬೇಕು
ಅಂದರೆ ಈ ಹಾಡಿನ ಮುಂದಿನ ಶಬ್ದ "ನೆನಸಿನ" ಅಥವಾ "ನೆನಸು" ಎಂದು ಆರಂಭವಾಗಬೇಕು
ಸಿದ್ಧವಾಗಿದ್ದೀರಾ..?



ಮುಗಿಲಿನ ಕರಿಯೋ  ಬಾನಿನ ಮುನಿಸೋ
ಮುನಿಸೋ ಮದಕರಿ ಆಟದ ಸೆಣಸೋ
ಸೆಣಸೋ ಪರಿ ವಿಧಿಯಾಟದ ಹನಿಸೋ
ಹನಿಸೋ ಮುನ್ನುಡಿ ಪ್ರಳಯದ ನೆನಸೋ


 

ಧನ್ಯವಾದಗಳು, ಭಾಗವಹಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು
ಆರಂಭದ ಹುರುಪು ಉತ್ಸಾಹ ಚೆನ್ನಾಗಿದೆ. ನೆನಪಿರಲಿ,
ಇದರಲ್ಲಿ ಕೊನೆಯ ಶಬ್ದದ ಪ್ರಾಸದ ಶಬ್ದ  ಮೂರಕ್ಷರದ್ದೇ ಆಗಿರಬೇಕು
ಬಂದದ್ದರಲ್ಲಿಯೇ ಆರಿಸಿ ರಘು ಅವರ ಮೂರು ಪಂಕ್ತಿಯನ್ನು ತೆಗೆದು ಇವತ್ತಿನ ಚರಣ ಮಾಡಿದ್ದೇನೆ

 

 

ನೆನಸೋ ಭೂರಮೆಯೊಡಲಿನ ಬಿರುಸೋ
ಬಿರುಸೋ ಕಡಲಿನ ಅಬ್ಬರ ಗುಣಿಸೋ
ಗುಣಿಸೋ ತೆರೆಗಳ ಎತ್ತರವೆಣಿಸೋ
ಎಣಿಸೋ ಸುತ್ತಲು ದೃಷ್ಟಿಯ ಹರಿಸೋ

 

 

 ನಾಳೆಗೆ ಹೊಸ ಪಂಕ್ತಿ  "ಹರಿಸೋ" ಅಥವಾ "ಹರಿಸು" ಎಂಬಲ್ಲಿಂದ ಆರಂಭವಾಗುತ್ತದೆ.
ಪಂಕ್ತಿಯ ಕೊನೆಯ ಶಬ್ದ ಪ್ರಾಸ ಗಮನದಲ್ಲಿರಲಿ.

 

ಬಂದವುಗಳಲ್ಲಿ ಈ ಎರಡನ್ನು ಆರಿಸಿ ಮುಂದಿನ ಚರಣ ವಾಗಿಸಿದ್ದೇನೆ

 
ರಾಮಮೊಹನರು   ಮತ್ತು ಹೊಳೆನರಸಿಪುರ ಮಂಜು ಅವರಿಗೆ ನನ್ನ ಧನ್ಯವಾದಗಳು   
 
ಹರಿಸೋ ಸರಿಸೋ ದೋಣಿಯ ನಡೆಸೋ
ನಡೆಸೋ ಉಳಿಸೊ ನಡುಕವ ನಿಲಿಸೊ
ನಿಲಿಸೊ ನಿಲಿಸೊ ಅಣುವಿಕಿರಣ ನಿಲಿಸೊ
ನಿಲಿಸೊ ಕಲಿಸೊ ಬದುಕಲು ಉಳಿಸೊ

 



ಉಳಿಸು ದೇವ ಕರುಣದಿ ಭುವಿಯ ತಣಿಸು
ತಣಿಸು ಜೀವಗಳವೆಷ್ಟು ಅಗಲಿವೆ ಎಣಿಸು
ಎಣಿಸು ದೇವ ಮಾರಣಹೋಮವ ನಿಲಿಸು
ನಿಲಿಸು ನೊ೦ದಿದೆ ಜೀವ ಭಯವ ಹರಿಸು