ಈಗ ನಾ ಒಂದರ ನಂತರ ಒಂದು ಮೂರು ಚಿತ್ರಗಳ ಬಗ್ಗೆ ಬರೆವೆ...
ಮೂರು ಚಿತ್ರದ ಸಾಮ್ಯತೆಗಳು ಅದ್ಕೆ ಕಾರಣ.
ಆ ಸಾಮ್ಯತೆಗಳ ಬಗ್ಗೆ ಸಂಕ್ಷಿಪ್ತವಾಗಿ ಕೆಳಗೆ ಬರೆದಿರುವೆ.
ಈಗ ಮೊದಲಿಗೆ ಕಾಸ್ಟ್ ಅವೇ-2000 ಚಿತ್ರದ ಬಗ್ಗೆ...
ನಂತರ ಲೈಫ್ ಆಫ್ ಪೈ -2012
ಆಮೇಲೆ ತಲಾಶ್-2012
ಆ ಮೇಲಿನ ನಾ ಹೆಸರಿಸಿದ ಮೂರು ಚಿತ್ರಗಳ ಸಾಮಾನ್ಯ ಅಂಶ ಏನು ಗೊತ್ತೇ?
ಹುಡುಕಾಟ...
ಕಾಸ್ಟ್ ಅವೇ -2000
ಚಿತ್ರದಲ್ಲಿ ಕಾರ್ಗೋ ಕೊರಿಯರ್ ಕಂಪನಿಯ ಮುಖ್ಯಸ್ಥ ತನ್ನದೇ ಕಾರ್ಗೋ ವಿಮಾನದಲ್ಲಿ ಹೋಗುವಾಗ ಹವಾಮಾನ ವೈಪರಿತ್ಯದಿಂದ ವಿಮಾನ ಪಾತಾಳಕ್ಕೆ ಮುಟ್ಟಿ, ಸಮುದ್ರಕ್ಕೆ ಬಿದ್ದು ಲೈಫ್ ಸೇವಿಂಗ್ ಬೋಟ್ ಮೂಲಕ ಒಂದು ನಿರ್ಜನ ದ್ವೀಪ ಪ್ರದೇಶಕ್ಕೆ ಬಂದು ಬಿದ್ದು ಅಲ್ಲಿಂದ ಪ್ರಾಣ ಸಮೇತ ಪಾರಾಗಿ ಮರಳಿ ಮನೆಗೆ ಮರಳುವ ಯತ್ನ-ಹುಡುಕಾಟ..
ಲೈಫ್ ಆಫ್ ಪೈ -2012
ಚಿತ್ರದಲ್ಲಿ ಭಾರತದ ಪಾಂಡಿಚೆರ್ರಿಯಲ್ಲಿ ಖಾಸಗಿ ಜೂ ನಡೆಸುವ (ಖಾಸಗಿ ಜೂ ಹಾಗೆಲ್ಲ ಇಲ್ಲಿ ಸಾರ್ವಜನಿಕರು ನಡೆಸಬಹುದ? ನನಗೆ ಅಚ್ಚರಿ ಆದ ವಿಷ್ಯ)...ವ್ಯಕ್ತಿಯ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬನಾದ ಪೈ ಎಂಬ ಶಾರ್ಟ್ ಕಟ್ ನಾಮದೇಯದ ಹುಡುಗನ ಸಮುದ್ರ ಪ್ರಯಾಣದಲ್ಲಿ ಹವಾಮಾನ ವೈಪರಿತ್ಯದಿಂದ ಹಡಗು ಮುಳುಗಿ ಪ್ರಾಣಿಗಳ ಸಮೇತ ನೀರಿಗೆ ಬಿದ್ದು ಲೈಫ್ ಬೊಟ್ ನಲ್ಲಿ ಬೆಂಗಾಲ್ ಹುಲಿ-ಹಯ್ನ ಪ್ರಾಣಿ-ಮತ್ತು ಜೀಬ್ರ ಒಂದರ ಜೊತೆ ಸಹಬಾಳ್ವೆ ಜೀವನ ನಡೆಸುತ್ತ ಪ್ರಾಣಿಗಳ ಸಮೇತ ತಾನೂ ಜೀವಂತ ಉಳಿಯುವ-ಮರಳುವ ಯತ್ನದ ಹೋರಾಟ...ಜೀವನ್ಮರಣದ ನಡುವಿನ ಹೋರಾಟ...ಹುಡುಕಾಟ....
ತಲಾಶ್-2012
ಹಿಂದಿ ಚಿತ್ರ ಸುದ್ಧಿ ಮಾಡಿದ್ದು ಬಹಳ ದಿನಗಳ ನಂತರ ಪೋಲೀಸ್ ಪಾತ್ರದಲ್ಲಿ ಆಮೀರ್ ಖಾನ್ ನಟಿಸಿದ್ದು-ಥ್ರಿಲ್ಲರ್ ಕಥೆ ಹೊಂದಿರುವುದು, ಮಹಿಳಾ ನಿರ್ದೇಶಕಿಯ ಚಿತ್ರ-ಇತ್ಯಾದಿ ಕಾರಣಗಳಿಗಾಗಿ...
ಈ ಚಿತ್ರದಲ್ಲಿ ನಾಯಕ ನಟ ಕೊಲೆಯೊಂದರ ರಹಸ್ಯ ಕಂಡು ಹಿಡಿಯಲು ಹೋಗಿ -ಇದೇ ತರಹದ ಹಲವು ಕೊಲೆಗಳು ಮುಂಚೆಯೂ ಆಗಿದ್ದವು-ಅವುಗಳ ಕೇಸ್ ಕ್ಲೋಜ್ ಆಗಿದೆ ಎಂದು ತಿಳಿದು ಈ ರಹಸ್ಯವನ್ನು ಹೇಗಾದರೂ ಬೇಧಿಸಲೆ ಬೇಕು ಎಂದು ಚಲಧಂಕ ಮಲ್ಲ - ತ್ರಿವಿಕ್ರಮನ ತರಹ ಪ್ರಯ್ತತ್ನಿಸುತ ಸಾಕ್ಷಿಗಳ ಸಹಾಯಕ್ಕಾಗಿ ಹುಡುಕಾಟ....
ಮೊದಲಿಗೆ ನಾ ನೋಡಿದ್ದು ತಲಾಶ್ ಚಿತ್ರ, ಆಮೇಲೆ ಲೈಫ್ ಆಫ್ ಪೈ, ಆಮೇಲೆ ಈ ಲೈಫ್ ಆಫ್ ಪೈ ಚಿತ್ರದ ಕಥೆ ಹೋಲುವ ಚಿತ್ರ 2000ರಲ್ಲಿ ಬಂದಿತ್ತು ಎಂದು ತಿಳಿದು ಕಾಸ್ಟ್ ಅವೇ ನೋಡಿದೆ..
ಲೈಫ್ ಆಫ್ ಪೈ ಮತ್ತು ಕಾಸ್ಟ್ ಅವೇ ಬಗ್ಗೆ ಬರೆಯಬೇಕು ಅನ್ನಿಸಿದಾಗ ಈ ಮೂರು ಚಿತ್ರಗಳು ಹುಡುಕಾಟದ ಸುತ್ತ ಸುತ್ತುವುದು ಭಾವಕ್ಕೆ ಬಂದು 3 ಚಿತ್ರಗಳ ಬಗ್ಗೆ ಬರೆದೆ.....
3 ಚಿತ್ರಗಳ ಕಥೆಗಳ ಬಗ್ಗೆ ಸಂಕ್ಷಿಪ್ತವಾಗಿ ಮೇಲೆಯೇ ತಿಳಿಸಿರುವೆ..
3 ಚಿತ್ರಗಳು ಅತ್ಯುತ್ತಮವಾಗಿದ್ದು,ತುದಿಗಾಲ ಮೇಲೆ ಕುಳಿತು ನೋಡುವ ಹಾಗೆ ಮಾಡುವವು..
ಈಗ ಆ ಚಿತ್ರಗಳ ಬಗ್ಗೆ ಸಂಪೂರ್ಣ ವಿವರ ನೀಡದೆ ಅವುಗಳಲ್ಲಿನ ಕೆಲವು ಸನ್ನಿವೇಶಗಳ ಬಗ್ಗೆ ಹೇಳುವೆ...!!
ಕಾಸ್ಟ್ ಅವೇ- 2000
1.ಮೊದಲಿನ ಅರ್ಧ ಘಂಟೆಗಳು ಬೋರ್ ಅನ್ನಿಸುವುದು..!! ಆದ್ರೆ ಮುಂದೆ ಭಲೇ ಮಜಾ ಇದೆ...! ಸೋ ಇಲ್ಲಿ ರಿಮೋಟ್ ಗೆ ಕೆಲಸ...!
2.ನಾಯಕ ತನ್ನ ಕಾರ್ಗೋ ವಿಮಾನದಲ್ಲಿ ಪ್ರಯಾಣಿಸುವ ಮುಂಚೆ ಹೆಂಡತಿಗೆ ಕೆಲವೇ ಘಂಟೆಗಳಲ್ಲಿ ವಾಪಾಸು ಮನೆಗೆ ಬರುವೆ ಎಂದು ಹೇಳಿ ವಿಮಾನ ಹತ್ತುವನು, ಕೆಲವೇ ನಿಮಿಷಗಳಲ್ಲಿ ಪಾತಾಳ ಮುಟ್ಟಿದ ಸಮುದ್ರಕ್ಕೆ ಬಿದ್ದ ವಿಮಾನ...
3. ವಿಮಾನ ಹವಾಮಾನ ವೈಪರಿತ್ಯದಿಂದ ವಾಲಾಡುವಾಗ ಕೆಳಗೆ ಬಿದ್ದ ತನ್ನ ಹೆಂಡತಿಯ ಚಿತ್ರ ಇರುವ ಲಾಕೆಟ್ ಎತ್ತಿಕೊಳ್ಳಲು ಆ ಅಪಾಯಕಾರಿ ಪರಿಸ್ಥಿತಿಯಲ್ಲಿ ತನ್ನ ಸೀಟ್ ಬೆಲ್ಟ್ ಬಿಚ್ಚಿ ಲಾಕೆಟ್ ವಾಪಸ್ಸು ತೆಗೆದುಕೊಳ್ಳುವದು -ಇದನ್ನು ನೋಡಿ ಸಹ ಪೈಲಟ್ ಎಚ್ಚರಿಸಲು ಎದ್ದಾಗ ವಿಮಾನ ವಾಲಾಟ ಹೆಚ್ಚಾಗಿ ವಿಮಾನದ ಒಳಗಿನ ಗೋಡೆಗೆ ತಲೆ ಬಡಿದು ಮೂರ್ಚೆ ಹೋಗುವುದು
4.ಒಬ್ಬನೇ ಪೈಲಟ್ ವಿಮಾನ ನಿಯಂತ್ರಿಸಲು ಆಗದೆ ವಿಮಾನ ಎಲ್ಲಿ ಹೇಗೆ ಹೋಗುತ್ತಿದೆ? ಎಲ್ಲಿ ಬೀಳಲಿದೇ ಎಂದು ತಿಳಿಯುವ ಮೊದಲು ಮಸುಕಾಗಿ ಕಾಣುವ ನೀರು ಮಂಜು ಕಾಣಿಸಿ ಕ್ಷಣದಲ್ಲೇ ಸಮುದ್ರಕ್ಕೆ ಬೀಳುವ ವಿಮಾನ...
5.ತಾನೊಬ್ಬನೇ ಲೈಫ್ ಬೊಟ್ ಮೂಲಕ ಪಾರಾಗುವ್ದು -ವಿಪರೀತ ಮಳೆ-ಗಾಳಿ ಮಧ್ಯೆ ಹುಟ್ಟು ಹಾಕಲು ಆಗದೆ ಸುಮ್ನೇ ಬೀಳಲು -ಗಾಳಿಯೇ ಎಲ್ಲೆಲ್ಲಿಗೋ ಕರೆದೊಯ್ದು ಕೊನೆಗೆ ದಡ ಒಂದಕ್ಕೆ ಬೋಟ್ ಮುಟ್ಟಿ ಎಚ್ಚರವಾಗಿ ನೋಡಲು ನಿರ್ಜನ ದ್ವೀಪ ಪ್ರದೇಶ.
6. ಅಲ್ಲಿರಬಹುದಾದ ಮನುಜರು -ಆಹಾರಕ್ಕಾಗಿ ಹುಡುಕಾಟ -ಯಾರೂ ಸಿಗದೇ -ಹಸಿವು ಹೆಚ್ಚಾಗಿ ಅಲ್ಲಿದ್ದ ತೆಂಗಿನ ಮರಗಳ ಮೇಲಿಂದ ಕೆಲವು ಎಳ ನೀರು ಕಾಯಿಗಳು ಬೀಳುವದು ,ಅವುಗಳನ್ನು ಒಡೆದು ಕುಡಿಯಲು ಅವುಗಳನ್ನು ಬಂಡೆಗೆ ಎಸೆಯುವ -ಅವು ಓಪನ್ ಆಗದೆ ಕಲ್ಲನ್ನು ಎತ್ತಿ ಮೇಲೆ ಹಾಕಲು ಕಲ್ಲು ಒಡೆದು ಆಯುಧದಂತೆ ಆಗುವದು..ಅದರ ಮೂಲಕ ಕಾಯಿ ಸುಲಿದು ನೀರು ಕುಡಿವ ದೃಶ್ಯ...
7.ತನ್ನ ಜೊತೆ ನೀರಲ್ಲಿ ತೇಲಿ ಬಂದ ತನ ಕಾರ್ಗೋ ಕೊರಿಯರ್ ವಸ್ತುಗಳ ಪ್ಯಾಕೆಟ್ ನೋಡಲು ಕೆಲವು ಜನ ತಮ್ಮ ಬಂಧು ಬಳಗಕ್ಕೆ ಕಳಿಸಿದ ಹುಟ್ಟು ಹಬ್ಬದ ಶುಭಾಶಯ ಪತ್ರಗಳು -ಗಿಫ್ಟ್ ಆಗಿ ಐಸ್ ಮೇಲೆ ನಡೆವ ಬೂಟು-ಬಟ್ಟೆಗಳು -ಯಾರೋ ಕಳಿಸಿದ ಡೈವೋರ್ಸ್ ಪತ್ರ ..!! ಫುಟ್ ಬಾಲ್ (ಈ ಬಾಲ್ ಮುಂದೆ ಅವನಿಗೆ ಬದುಕಲು ಸ್ಪೂರ್ತಿ..) ಇತ್ಯಾದಿ ಸಿಗುವವು.
8. ಅಲ್ಲಿಂದ ಆ ಪುಟ್ಟ ಬೋಟ್ನಲ್ಲಿ ಪಾರಾಗುವುದು ದೂರದ ಮಾತು, ಯಾವ್ದಾರ ದೊಡ್ಡ ಬೊಟ್ ಅಲ್ಲಿ ಬಂದು ತನ್ನನ್ನು ಕರೆದೊಯ್ವದು ಎಂಬ ಭಾವ-ಆಶಾಭಾವ.!!
9.ಹೆಚ್ಚುತ್ತಿರುವ ಹಸಿವು ತಾಳದೆ ಹುಲ್ಲುಮರದ ಎಲೆ-ಕೊನೆಗೆ ಸಣ್ಣ ಹಸಿ ಮೀನುಗಳು -ಏಡಿ ...ಹಸಿಯಾಗಿಯೇ ತಿನ್ನಲು ಹೋಗಿ ಅಸಹ್ಯ ಅನ್ನಿಸಿ ಅದರೂ ಹಸಿವು ಹೆಚ್ಚಿ ಹಸಿ ಮೀನು-ಏಡಿ ತಿನ್ನುವ ದೃಶ್ಯಗಳು..!!
10. ಮಾರನೆ ದಿನ ಪೈಲಟ್ ಹೆಣ ದ್ವೀಪಕ್ಕೆ ತೇಲಿ ಬಂದು ಆ ಪೈಲಟ್ ನ ಬೂಟುಗಳನ್ನು ಬಿಚ್ಚಿಕೊಂಡು ನೋಡಿದರೆ ಅವು ತನ್ನ ಸೈಜ್ ಅಲ್ಲ..:(( ಅವನ ಜೇಬಿನಲ್ಲಿ ಪುಟ್ಟ ಟಾರ್ಚ್ ಸಿಕ್ಕುವುದು. ಅವನ ದೇಹ ಮಣ್ಣು ಮಾಡಿ ಭಾರವಾದ ಹೃದಯದಿಂದ ,ಹತಾಶೆಯಿಂದ ಕೋಪದಿಂದ ಇರುವ ದೃಶ್ಯ..
11. ಅಲ್ಲಿಂದ ಹೇಗಾದರೂ ಮಾಡಿ ಮೊದಲು ತಾನು ಬದುಕಬೇಕು-ಮರಳಿ ಮನೆಗೆ ಹೋಗಲು ಒಂದು ದೋಣಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿ ಮೊದಲು ಬದುಕಲು ಹೆಂಗಾರ ಬೆಂಕಿ ಹೊತ್ತಿಸಿ ಬೆಳಕು ಮೂಡಿಸಿ ಅದ್ರಲ್ಲೇ ಮೀನು ಏಡಿ ಬೇಯಿಸಿ ತಿನ್ನಬೇಕು ಎಂದು ತೀರ್ಮಾನಿಸಿ ಎರಡು ಕಟ್ಟಿಗೆ ತೆಗೆದುಕೊಂಡು ಅವುಗಳ ಮಧ್ಯೆ ಹುಲ್ಲು ಇಟ್ಟು ಅವುಗಳನ್ನು ಒಂದಕ್ಕೊಂದು ಘರ್ಶಿಸುವನು, ಆ ಪ್ರಯತ್ನದಲ್ಲಿ ಕೈಗೆ ಗಾಯವಾಗಿ ಆ ಫುಟ್ ಬಾಲ್ಗೆ ತನ್ನ ಕೈ ಒರೆಸಲು ಅಲ್ಲಿ ಕೈ ಹೆಜ್ಜೆ ಗುರುತು ಮೂಡಲು ಆ ಗುರುತು ಮೇಲೆ ಎರಡುಕಣ್ಣು- ಹುಬ್ಬು-ಬಾಯಿ ಮಾಡಿ ಅದಕ್ಕೆ ವಿಲ್ಸನ್ ಎಂದು ಹೆಸರು ಇಟ್ಟು ಸಂಬೋಧಿಸುವ ದೃಶ್ಯ...!
12. ಆಮೇಲೆ ಹೇಗೋ ಪ್ರಯತ್ನ ಮಾಡಿ ಬೆಂಕಿ ಹೊತ್ತಿಸಿ -ಐ ಡಿಡ್ ಇಟ್... ಎಂದು ವಿಲ್ಸನ್ ಯಾನೆ ಫುಟ್ಬಾಲ್ ನೋಡಿ ..ಹೇಳುವ ದೃಶ್ಯ. ಮೀನು-ಏಡಿ ಹಿಡಿಯುವ ಸುಡುವ ತಿನ್ನುವ ಕಲೆಯನ್ನು ಆದ ಮಾನವನಿಗಿಂತ ಆಗಿ ಕಲೆತು ಬದುಕುವ ದೃಶ್ಯ,.
13. ಐಸ್ ಬೂಟ್ ನ ಕೆಳಗಿನ ಹರಿತವಾದ ಬ್ಲೆಡ್ ನ್ನೇ ಕೊಡಲಿ ಮಾಡಿಕೊಂಡು ಮರದ ಕಟ್ಟಿಗೆ ಕಡಿದು -ಅದರ ತೊಗಟೆ ಸುಲಿದು ಮಾಡಿ ಒಂದು ದೋಣಿ ಮಾಡುವ -ತಾ ಅಲ್ಲಿಗೆ ಬಂದಾಗಿಂದ ಈಗಿನ ದಿನಾನ್ಕಸಮಯ-ತಿಂಗಳು ಬರೆದು ಸಮುದ್ರ ಉಬ್ಬರ -ಅಬ್ಬರ -ಗಾಳಿ ಬೀಸುವ ದಿಕ್ಕನ್ನು ಅಂದಾಜಿಸಿ ದೋಣಿ ತಯಾರು ಮಾಡಿ ಮಧ್ಯೆ ಮಧ್ಯೆ ವಿಲ್ಸನ್ ಜೊತೆ ಸಂಭಾಷಣೆ ನಡೆಸುವ ದೃಶ್ಯಗಳು..
14.ಆ ಸುದಿನವೂ ಬಂದು ದೋಣಿ ಅದರ ಮೇಲೆ ಹತ್ತಿ ಬೇಡದ ಒಲ್ಲದ ಮನಸಿಂದ ದ್ವೀಪಕ್ಕೆ ವಿದಾಯ ಹೇಳಿ ಹೋಗುವ ದೃಶ್ಯ.
15. ಮಾರ್ಗ ಮಧ್ಯೆ ಗಾಳಿ ಮಳೆ ಬಂದು -ಎತ್ತರೆತ್ತರದ ಅಲೆಗಳು ಬಂದು ಬೀಸಿ ನೀರಿಗೆ ಬೀಳುವ -ಮರಳಿ ದೋಣಿ ಹತ್ತುವ -ಹುಟ್ಟು ಹಾಕುತ ಮುನ್ನಡೆಸುವ ದೃಶ್ಯಗಳು.
16.ಹಾಟು ಹಲವು ಕಷ್ಟ ಕೋಟಲೆಗಳ ಮಧ್ಯೆ ಪ್ರೀತಿಯ ವಿಲ್ಸನ್ ನೀರಿಗೆ ಬಿದ್ದು ದೂರಾಗುವ -ಅದನ್ನು ಲೇಟ್ ಆಗಿ ನೋಡಿ ಒಂದು ಫುಟ್ಬಾಲ್ ಗಾಗಿ ದೋಣಿ ಬಿಟ್ಟು ಅಪಾಯಕಾರಿ ನೀರಿಗೆ ಇಳಿವ ಸಾರಿ ವಿಲ್ಸನ್ ಎಂದು ಅಳುವ ದೃಶ್ಯ.
17. ವಿಲ್ಸನ್ ಸಿಗದೇ ಗಾಳಿ ಮಳೆ ಅಬ್ಬರ ಹೆಚ್ಚಾಗಿ ಇನ್ನು ಬದುಕುವದು ಕಷ್ಟ ಸಾಧ್ಯ ಎಂದು ಅರಿವಾಗಿ ಸುಮ್ಮನೆ ಕಣ್ಣು ಮುಚ್ಚಿಕೊಂಡು ಮರದ ದೋಣಿ ಮೇಲೆ ಕಣ್ಣು ಮುಚ್ಚಿ ಮಲಗುವ ಕೆಲವು ಘಂಟೆಗಳಲ್ಲಿ ಕಾರ್ಗೋ ಹಡಗು ಒಂದು ಸಮೀಪದಲ್ಲೇ ಬರುವ-ಅದರತ್ತ ಸಹಾಯ ಹಸ್ತ ಚಾಚುವಂತೆ ಕೂಗುವ ಅಲಿಂದ ಪಾರಾಗಿ ಮನೆಗೆ ಮರಳಲು ಅಲ್ಲಿ ಆಗುವ ಆಘಾತ...!!
18.ಇವ ಮರಳಿ ಬಾರನು ಎಂದು ಹೆಂಡತಿ ಬೇರೆ ಒಬ್ಬನನ್ನು ಮದ್ವೆ ಆಗಿರುವಳು ..:(( ಅವಳಿಗೂ ಆಘಾತ...!
19.ವಿಮಾನ ಅವಘಡದಲ್ಲಿ ಮೃತ ಪಟ್ಟಿರುವನು ಎಂದು ಸರಕಾರೀ ದಾಖಲೆಗಳಲ್ಲಿ ನಮೂದಾದ ತಾ ಇನ್ನು ಬದುಕಿರುವೆ ಎಂದು ಸಾಧಿಸಿ ತೋರಿಸಬೇಕಾದ- ಹೆಂಡತಿಯನ್ನು ಮರಳಿ ಪಡೆವ ಯತ್ನದ ದೃಶ್ಯಗಳು.
20..ಸಿನೆಮಾದ ಅಂತ್ಯ ಕಣ್ಣಲಿ ನೀರು ಜಿನುಗುವಂತೆ ಮಾಡದೆ ಇರದು.
* 2000ರಲ್ಲಿ ಬಿಡುಗಡೆ ಆಗಿ ನಾ ಅದಾಗಲೇ ಬರೆದ ಗ್ಲಾಡಿಯೇಟರ್-2000 ಚಿತ್ರದ ಜೊತೆ ಸ್ಪರ್ಧಿಸಿ ಅದಕ್ಕೆ ಹಲವು ಪ್ರಶಸ್ತಿಗಳನ್ನು ಬಿಡಬೇಕಾಗಿ ಬಂದದ್ದು ಅಚ್ಚರಿಯ ಅಂಶ...
ನಿಜಕ್ಕೂ ಈ ಎರಡು ಚಿತ್ರಗಳ ಪ್ರಶಸ್ತಿ ಆಯ್ಕೆ -ಆಯ್ಕೆದಾರರಿಗೆ ಕಠಿಣ
ಸವಾಲೇ ಆಗಿರಬೇಕು.
* ನನಗನ್ನಿಸಿದ್ದು-
ಎರಡೂ ಉತ್ತಮ ಚಿತ್ರಗಳು ಒಂದು ವರ್ಷ ಆಚೆ ಈಚೆ ಬಂದಿದ್ದರೆ ಚೆನ್ನಿತ್ತೆನೋ ಅಂತ.
ಕಾರಣ ಎರಡು ಉತ್ತಮ ಚಿತ್ರಗಳು-ತಾರಾಗಣ -ನಟನೆ-ಛಾಯಾಗ್ರಹಣ ...
ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ತನ್ನ ಪಾತ್ರದಲ್ಲಿ ಎಷ್ಟು ಸಹಜವಾಗಿ ನಟಿಸಿರುವನು ಎಂದರೆ ಅದನ್ನು ತೆರೆ ಮೇಲೆ ನೋಡಿಯೇ ಅನುಭವಿಸೇಕು...!!
ಚಿತ್ರದ ಮೊದಲ ಟಾಮ್ ಹ್ಯಾಂಕ್ಸ್ ಮತ್ತು ವಿಮಾನ ಅವಘಡದ ನಂತರದ ಟಾಮ್ ಹ್ಯಾಂಕ್ಸ್ ಬದಲಾವಣೆ -ಮೇಕಪ್- ತಾದ್ಯಾತ್ಮ ನಟನೆ ಅಚ್ಚರಿ ತರುವ್ದೂ.
ಚಿತ್ರದಲ್ಲಿ ಒಂದು ಚುಂಬನ ದೃಶ್ಯ ಬಿಟ್ಟರೆ ಇನ್ಯಾವುದೇ ಮುಜುಗರದ ಸನ್ನಿವೇಶಗಳು ಇಲ್ಲ...!!
ಚಿತ್ರ ಮೂಲ:
http://static.tvtropes.org/pmwiki/pub/images/castaway.gif
http://www.faecdn.com/d/bex/i/tom-hanks-in-cast-away.jpg
http://thecia.com.au/reviews/c/images/cast-away-4.jpg
http://media.screened.com/uploads/0/2714/232778-castaway.gif
___LINK_OPEN_href="http://www.bigbongorecords.com/images/cast_away.jpg"___http://www.bigbongorecords.com/images/cast_away.jpg
___LINK_OPEN_href="http://img22.fansshare.com/celebrity/tomhanks/450_cast-away-original-castaway-1974879295.jpg"___http://img22.fansshare.com/celebrity/tomhanks/450_cast-away-original-castaway-1974879295.jpg
___LINK_OPEN_href="http://www.timefordvd.com/images/stills/CastAway_raft_small.jpg"___http://www.timefordvd.com/images/stills/CastAway_raft_small.jpg
___LINK_OPEN_href="http://scottbasgaard.com/files/2011/01/Tom_Hanks_i_Cast_Awa_96886a.jpg"___http://scottbasgaard.com/files/2011/01/Tom_Hanks_i_Cast_Awa_96886a.jpg
http://smhttp.14409.nexcesscdn.net/806D5E/wordpress-L/images/cast-away-raft.jpg
http://wwwc.mentalfloss.com/wp-content/uploads/2009/02/wilson.jpg
ಐ ಎಂ ಡಿ ಬಿ ಲಿ ನನ್ನ ಬರಹ:
http://www.imdb.com/title/tt0162222/reviews-1063
ಐ ಎಂ ಡಿ ಬಿ :
http://www.imdb.com/title/tt0162222/
ವೀಡಿಯೊ ಟ್ರೇಲರ್ :
http://www.youtube.com/watch?v=2TWYDogv4WQ
ವೀಕಿಪೀಡಿಯ :
___LINK_OPEN_href="http://en.wikipedia.org/wiki/Cast_Away"___http://en.wikipedia.org/wiki/Cast_Away
ಪ್ರತಿಕ್ರಿಯೆ (4)