ಇವು 2007 ರ ಜನವರಿಯಿಂದ ಜುಲೈ ವರೆಗೆ ಬರೆದಿರುವ ಅಂಕಣ ಲೇಖನಗಳು. ಇವುಗಳೊಂದಿಗೆ ನಾನು ಇಲ್ಲಿಯವರೆಗೆ ಅಂಕಣಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನೂ ಅಂತರ್ಜಾಲಕ್ಕೆ ಸೇರಿಸಿದಂತಾಯಿತು. ಇದೇ ಸಮಯದಲ್ಲಿ ಅಂಕಣಕ್ಕಲ್ಲದೆ ಪತ್ರಿಕೆಗೆ ಬರೆದ ಇತರ ಇನ್ನೂ ಒಂದೆರಡು ಲೇಖನಗಳಿವೆ. ನಿಧಾನಕ್ಕೆ ಸೇರಿಸಬೇಕು.

  • ಕಲಿಯುಗದಿಂದ ಕೃತಯುಗಕ್ಕೆ
  • ___LINK_OPEN_href="http://amerikadimdaravi.blogspot.com/2007/01/blog-post_12.html" title="ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!!"___ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!!
  • ___LINK_OPEN_href="http://amerikadimdaravi.blogspot.com/2007/01/blog-post_27.html" title="ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!!"___ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!!
  • ___LINK_OPEN_href="http://amerikadimdaravi.blogspot.com/2007/01/blog-post_1780.html" title="-- ಹಾಯ್ -- ಲವ್ ಯು -- ಬೈ --"___...<-->ಹಾಯ್ -> ಲವ್ ಯು -> ಬೈ--><---...
  • ಕಂಪ್ಯೂಟರ್‌ನಲ್ಲಿ ಕನ್ನಡ - ಯಾಹೂ!!!
  • ___LINK_OPEN_href="http://amerikadimdaravi.blogspot.com/2007/02/blog-post_10.html" title="ನೌಕರರನ್ನು ಲಾಭಕ್ಕೆ ಮಾರಿಕೊಳ್ಳುತ್ತಿರುವ ಇನ್ಫೋಸಿಸ್, ವಿಪ್ರೊ!!"___ನೌಕರರನ್ನು ಲಾಭಕ್ಕೆ ಮಾರಿಕೊಳ್ಳುತ್ತಿರುವ ಇನ್ಫೋಸಿಸ್, ವಿಪ್ರೊ!!
  • ___LINK_OPEN_href="http://amerikadimdaravi.blogspot.com/2007/02/blog-post_17.html" title="ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು"___ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು
  • ___LINK_OPEN_href="http://amerikadimdaravi.blogspot.com/2007/02/blog-post_25.html" title="ಸಲಿಂಗ ಕಾಮ ಮತ್ತು ಇತಿಹಾಸ"___ಸಲಿಂಗ ಕಾಮ ಮತ್ತು ಇತಿಹಾಸ
  • ಗಿಡಿಯೆನ್ನನ ಕಹಳೆ
  • ___LINK_OPEN_href="http://amerikadimdaravi.blogspot.com/2007/03/blog-post_10.html" title="ಮಟಮಟ ಮಧ್ಯಾಹ್ನದಲ್ಲಿ ಏಕಾಂಗಿ"___ಮಟಮಟ ಮಧ್ಯಾಹ್ನದಲ್ಲಿ ಏಕಾಂಗಿ
  • ___LINK_OPEN_href="http://amerikadimdaravi.blogspot.com/2007/03/blog-post_22.html" title="ಅಲ್ಲಿ ಪ್ರತಿಭಾ ಶೋಧ, ಇಲ್ಲಿ ಪ್ರತಿಭಾ ಸಮಾಧಿ???"___ಅಲ್ಲಿ ಪ್ರತಿಭಾ ಶೋಧ, ಇಲ್ಲಿ ಪ್ರತಿಭಾ ಸಮಾಧಿ???
  • ___LINK_OPEN_href="http://amerikadimdaravi.blogspot.com/2007/04/blog-post_01.html" title="ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ..."___ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ...
  • ಜೀವಂತ ರೋಲ್ ಮಾಡೆಲ್ ಇನ್ನಿಲ್ಲ...
  • ___LINK_OPEN_href="http://amerikadimdaravi.blogspot.com/2007/04/blog-post_15.html" title="ಮಂಗಳೂರಿನ ಸಜ್ಜನರೊಡನೆ..."___ಮಂಗಳೂರಿನ ಸಜ್ಜನರೊಡನೆ...
  • ___LINK_OPEN_href="http://amerikadimdaravi.blogspot.com/2007/04/blog-post_22.html" title="ಈ ಅಂಧಕಾರ ನಮ್ಮನ್ನು ದೀನರನ್ನಾಗಿ ಮಾಡಿದೆ..."___ಈ ಅಂಧಕಾರ ನಮ್ಮನ್ನು ದೀನರನ್ನಾಗಿ ಮಾಡಿದೆ...
  • ___LINK_OPEN_href="http://amerikadimdaravi.blogspot.com/2007/04/blog-post_28.html" title="ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ..."___ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ...
  • ದೇವರೆ, ಸ್ನೇಹಿತರಿಂದ ನನ್ನನ್ನು ಕಾಪಾಡು!
  • ___LINK_OPEN_href="http://amerikadimdaravi.blogspot.com/2007/05/blog-post_11.html" title="ಮಹಿಮಾ "ಗಾಂಧಿ", ಕ್ರಿಯಾಶೀಲ ಕೃಷ್ಣ..."___ಮಹಿಮಾ "ಗಾಂಧಿ", ಕ್ರಿಯಾಶೀಲ ಕೃಷ್ಣ...
  • ___LINK_OPEN_href="http://amerikadimdaravi.blogspot.com/2007/05/blog-post_20.html" title="ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ."___ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ.
  • ___LINK_OPEN_href="http://amerikadimdaravi.blogspot.com/2007/05/blog-post_26.html" title="ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?"___ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?
  • ಆಂಧ್ರದ ಜಯಪ್ರಕಾಶ್ ನಾರಾಯಣ್, ಬೆಂಗಳೂರಿನ ರಮೇಶ್
  • ___LINK_OPEN_href="http://amerikadimdaravi.blogspot.com/2007/06/blog-post_10.html" title="ಹತ್ತು ಸಾವಿರ ಜನರಲ್ಲಿ ಒಬ್ಬರೂ ಕೈಎತ್ತಿಲ್ಲ!!!"___ಹತ್ತು ಸಾವಿರ ಜನರಲ್ಲಿ ಒಬ್ಬರೂ ಕೈಎತ್ತಿಲ್ಲ!!!
  • ___LINK_OPEN_href="http://amerikadimdaravi.blogspot.com/2007/06/blog-post_16.html" title="ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು"___ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು
  • ___LINK_OPEN_href="http://amerikadimdaravi.blogspot.com/2007/06/blog-post_24.html" title="ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು..."___ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು...
  • ___LINK_OPEN_href="http://amerikadimdaravi.blogspot.com/2007/07/blog-post_01.html" title="ತಿಮ್ಮಕ್ಕನಿಂದ ಕಲಿತಿದ್ದೇನು?"___ತಿಮ್ಮಕ್ಕನಿಂದ ಕಲಿತಿದ್ದೇನು?
  • ___LINK_OPEN_href="http://amerikadimdaravi.blogspot.com/2007/07/blog-post_08.html" title="ಸ್ಟೀರಿಯೋಟೈಪ್‌ಗಳನ್ನು ನಂಬಿದರೆ ಜೀವನಪ್ರೀತಿ ಸಾಧ್ಯವೆ?"___ಸ್ಟೀರಿಯೋಟೈಪ್‌ಗಳನ್ನು ನಂಬಿದರೆ ಜೀವನಪ್ರೀತಿ ಸಾಧ್ಯವೆ?

ಈಗ ಈ ಲೇಖನಗಳನ್ನು ಮತ್ತೆ ನೋಡುತ್ತಿದ್ದಾಗ ತೇಜಸ್ವಿ ಮತ್ತು ಭೈರಪ್ಪನವರು ಒಂದಲ್ಲ ಒಂದು ಸಂದರ್ಭದಲ್ಲಿ ಈ ಅವಧಿಯಲ್ಲಿ (ಅಂದರೆ 2007 ರ ಪೂರ್ವಾರ್ಧದಲ್ಲಿ) ನನಗೆ ಪ್ರಸ್ತುತರಾಗಿದ್ದು ಕಾಣಿಸುತ್ತದೆ. ತೇಜಸ್ವಿಯವರು ಸಾಯುವ ನಾಲ್ಕೈದು ದಿನಗಳ ಹಿಂದೆ ಬರೆದಿದ್ದ "___LINK_OPEN_href="http://amerikadimdaravi.blogspot.com/2007/04/blog-post_01.html" title="ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ..."___ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ..." ಲೇಖನದಲ್ಲೂ ಅವರಿದ್ದಾರೆ. ಅವರು ತೀರಿಕೊಂಡ ಸಂದರ್ಭದಲ್ಲಿ ಬರೆದದ್ದು "ಜೀವಂತ ರೋಲ್ ಮಾಡೆಲ್ ಇನ್ನಿಲ್ಲ...". ಹಾಗೆಯೆ, ರಾಮದಾಸರು ತೀರಿಕೊಂಡ ಸಂದರ್ಭದಲ್ಲಿ ಬರೆದ "___LINK_OPEN_href="http://amerikadimdaravi.blogspot.com/2007/06/blog-post_24.html" title="ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು..."___ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು..." ಲೇಖನದಲ್ಲೂ ನೆನಪಾಗಿದ್ದಾರೆ.

ಇನ್ನು ಭೈರಪ್ಪನವರೂ ಮೂರ್ನಾಲ್ಕು ಕಡೆ ಕಾಣಿಸಿಕೊಂಡಿರುವುದನ್ನು ಕಂಡಾಗ ನನಗೇನಾದರೂ ಭೈರಪ್ಪ-ಫೋಬಿಯ ಇತ್ತೆ ಎನ್ನುವ ಸಂದೇಹ ಬರುತ್ತದೆ. ಆದರೆ ಅದು ನನ್ನೊಬ್ಬನದೆ ಕತೆಯಲ್ಲ, ಹಾಗೂ ಆ ಸಮಯದಲ್ಲಿ ವರ್ತಮಾನಕ್ಕೆ ಪ್ರತಿಕ್ರಿಯಿಸುತ್ತಿದ್ದ ಕನ್ನಡ ಬರಹಗಾರರು ಈ ವಿಚಾರದಲ್ಲಿ ಪದೆಪದೆ ಭೈರಪ್ಪನವರನ್ನು (ಪರ-ವಿರೋಧ) ಚರ್ಚಿಸಿದ್ದಾರೆ ಎನ್ನಿಸುತ್ತದೆ. ಯಾಕೆಂದರೆ, ಅದು ಆವರಣದ ಮಾಯೆ ಆವರಿಸಿಕೊಂಡಿದ್ದ ಕಾಲ. ಭೈರಪ್ಪನವರನ್ನು ಪ್ರತ್ಯಕ್ಷ-ಪರೋಕ್ಷವಾಗಿ ನೆನಪಿಸಿಕೊಂಡಿರುವ ಲೇಖನಗಳು:

  • ___LINK_OPEN_href="http://amerikadimdaravi.blogspot.com/2007/02/blog-post_17.html" title="ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು"___ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು
  • ___LINK_OPEN_href="http://amerikadimdaravi.blogspot.com/2007/05/blog-post_26.html" title="ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?"___ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?
  • ___LINK_OPEN_href="http://amerikadimdaravi.blogspot.com/2007/06/blog-post_16.html" title="ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು"___ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು
  • ___LINK_OPEN_href="http://amerikadimdaravi.blogspot.com/2007/06/blog-post_24.html" title="ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು..."___ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು...

ಇನ್ನು, ಸಂಪದದ ಬಗ್ಗೆ:

"ಹಾಗೆಯೆ, ಸಂಪದ.ನೆಟ್ ಎಂಬ ಇನ್ನೊಂದು ವೆಬ್‌ಸೈಟ್ ಮತ್ತು ತಂಡದ ಬಗ್ಗೆಯೂ ಹೇಳಬೇಕು. ಇನ್ನೂ 25-30 ದಾಟದ ಚುರುಕು ಕನ್ನಡ ಹುಡುಗರ ಈ ಗುಂಪಿನಲ್ಲಿ ಅನೇಕ ಮೌಲ್ಯಯುತ ಬರಹಗಳು, ಚರ್ಚೆಗಳು, ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ದಿಸೆಯಲ್ಲಿನ ಕೆಲಸಗಳು ನಡೆಯುತ್ತಿವೆ. ಕನ್ನಡ ಪಂಡಿತರಲ್ಲದ, ಮಡಿಮೈಲಿಗೆ ಇಲ್ಲದ, ಹೊಸವಿಚಾರಗಳಿಗೆ, ಪ್ರಯೋಗಗಳಿಗೆ ಮೈಯೊಡ್ಡಿಕೊಳ್ಳುವ ಇಂತಹ ಒಂದು ಸಕ್ರಿಯ ಗುಂಪು ಇದೆ ಎನ್ನುವುದೆ ಹೆಮ್ಮೆಯ ವಿಚಾರ. ... "

ಇದು "ಕಂಪ್ಯೂಟರ್‌ನಲ್ಲಿ ಕನ್ನಡ - ಯಾಹೂ!!!" ಲೇಖನದಲ್ಲಿ ಪ್ರಸ್ತಾಪವಾಗಿದೆ.

ಇತ್ತೀಚೆಗೆ ಗೆಳೆಯ ನರೇಂದ್ರ ಪೈ ಕತೆಗಾರ ವಿವೇಕ್ ಶಾನುಭೋಗರ ಆಡಿಯೊ ಸಂದರ್ಶನ ಮಾಡಿದ್ದ ಪಾಡ್‍ಕ್ಯಾಸ್ಟ್ ನೀವೆಲ್ಲ ಕೇಳಿರಬಹುದು. ಸಂಪದ ತಂಡದ ಇಂತಹ ಪ್ರಯತ್ನಗಳ ಬಗ್ಗೆ ಹೆಮ್ಮೆ ಪಟ್ಟುಕೊಂಡು

"http://www.sampada.net/podcasts ವೆಬ್‌ಸೈಟಿನಲ್ಲಿ ತೇಜಸ್ವಿ, ಕಂಬಾರ, ಅನಂತಮೂರ್ತಿ, ಜಿಎಸ್ಸೆಸ್, ನಿಸಾರ್ ಅಹ್ಮದ್ ಮತ್ತಿತರ ಕನ್ನಡ ಸಾಹಿತಿಗಳ ಬಿಚ್ಚುಮಾತಿನ ಸಂದರ್ಶನಗಳ ಧ್ವನಿಮುದ್ರಣಗಳೂ ಇವೆ. ಓ.ಎಲ್.ಎನ್. ಸ್ವಾಮಿ, ಉದಯವಾಣಿಯ ಇಸ್ಮಾಯಿಲ್ ಮುಂತಾದವರು ಮಾಡಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಇದನ್ನೆಲ್ಲ ಇವರು ಮಾಡಿರುವುದು ತಮ್ಮ ಬಿಡುವಿನ ವೇಳೆಯಲ್ಲಿ. ಇಂಟರ್‌ನೆಟ್‌ನಲ್ಲಿ ಸುಮ್ಮನೆ ಬಡಬಡಿಸುವ, ಸ್ವರತಿಯಲ್ಲಿ ಮುಳುಗಿರುವ ಅನೇಕ ಕನ್ನಡಿಗರು ಮಾತಿಗಿಂತ ಕೃತಿಯಲ್ಲಿ ತೊಡಗಿಕೊಳ್ಳಲು ಇವೆಲ್ಲ ಪ್ರೇರಣೆಯಾಗಬೇಕಿದೆ. ಅಲ್ಲವೆ?"

ಎಂದು ಬರೆದದ್ದು "___LINK_OPEN_href="http://amerikadimdaravi.blogspot.com/2007/05/blog-post_20.html" title="ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ."___ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ." ಲೇಖನದಲ್ಲಿ.

ಎಂದಿನಂತೆ, ಪ್ರತಿಕ್ರಿಯೆಗಳಿಗೆ ಮತ್ತು ವಿಮರ್ಶೆಗಳಿಗೆ ಮುಕ್ತ ಸ್ವಾಗತವಿದೆ.

ನಮಸ್ಕಾರ,
ರವಿ...