ಹೊಸ ವರುಷ ಹೊಸ ದಿವಸ ಹೊಸತಾಗಿ ಬರಲಿ |
ಹೊಸ ಹರುಷ ನಸುನಗುತ ವರುಷವಿಡೀ ಇರಲಿ ||ಪ||
ಬೆಳಗುತ ನೇಸರ ಕಾಣಿಸುವಾಗಲೆ
ಚೈತನ್ಯವು ಪುಟಿದೆದ್ದಿರಲಿ |
ದೇಹಾಲಸ್ಯದ ಜಾಡ್ಯವ ಕಿತ್ತು
ಜೀವವು ವೈಭವ ಪಡುತಿರಲಿ |
ಜನತೆಯಲಿ ಘನತೆಯಲಿ
ಹೊಸ ಹುಮ್ಮಸ್ಸನು ಕೊಡುತಿರಲಿ ||೧||
ಕಳೆಯಲಿ ಕೊಳೆ ತೊಳೆಯುತ್ತಲೇ ಇರಲಿ
ಕಾಮ ವಿಕಾರದ ನಂಜುಗಳು |
ಅಡಗಲಿ ಹಂಕಾರದ ಜಂಬಗಳು
ಮೂಡಲಿ ಸಾತ್ವಿಕ ಚಿಗುರುಗಳು |
ದೇಹದಲೂ ದೇಶದಲೂ
ಆರೋಗ್ಯವು ನೆಲೆಗೊಳಲಿನ್ನು ||೨||
ಭಯ ಬೇಸರ ಆತಂಕಗಳಿಲ್ಲದ
ಸಂತಸ ತುಂಬಿದ ಹೊಸ ವರುಷ |
ಪಡೆಯಲಿ ನೆಮ್ಮದಿ ದುಡಿಯುವ ಮಂದಿ
ಗೆಲ್ಲಲಿ ಕಾಯಕ ಅನವರತ |
ಅನುದಿನವು ಹೃದಯದೊಳು
ಶಾಂತಿಯು ಇರಲೆನ್ನೊಡನೆ ಸದಾ ||3 ||
ಎಲ್ಲರಿಗೂ 2012ರ ಹೊಸ ವರ್ಷದ ಶುಭಾಷಯಗಳು
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭೂವಿಮಾನ ಯಾನ
ನಾವಿದ್ದೇವೆ
ಬೇಡಿಕೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)