ನನ್ನ ಪೋಷಕರ 25 ನೇ ಮದುವೆ ವಾರ್ಷಿಕೋತ್ಸವದ ಸಲುವಾಗಿ--------->

 

25 ವರ್ಷಗಳ ಹಿಂದೆ ನವಜೋಡಿ ಇವರಿಬ್ಬರು

ಬೆಳ್ಳಿ ಮಹೋತ್ಸವಕ್ಕೆ ಹರಸಿ ,ಹಾರೈಸಿ ಸರ್ವರು
 

ಮನೆ-ಹೊಲ ಕೆಲಸ ಒಬ್ಬಳೇ ನಿರ್ವಹಿಸಿ ಯಾರನ್ನು ದೂರದ ಸುಗುಣ ಅಮ್ಮನದು
ಎರಡೆಣ್ಮಕ್ಕಳೆoದು ಒಂದ್ಮಾತು ಅನ್ನದೇ ಪ್ರೀತಿ ತೋರುವ ಚಂದದ ಮನ ಅಪ್ಪನದು
ಎಲ್ಲ ಮಕ್ಕಳನ್ನು ಸಮನಾಗಿ ನೋಡಿ ಉತ್ತಮ ಮಟ್ಟಕ್ಕೇರಿಸಿದ ದೈವೀಗುಣ ಇವರದು ..

ಅಪ್ಪನ ಬುದ್ದಿ,ಕುಶಲತೆಗೆ ಅಮ್ಮನಲ್ಲಿ ಗೌರವ
ಅಮ್ಮನ ತಾಳ್ಮೆ ಹಾಗೂ ನಿಷ್ಠೆಗೆ ಅಪ್ಪನಲ್ಲಿ ಗೌರವ
ಚಿಕ್ಕಪುಟ್ಟ ತಪ್ಪುಗಳಿಗೆ  ಒಬ್ಬರಿಗೊಬ್ಬರು ತಾಳುವರು ಮೌನವ
ಬಿಟ್ಟುಕೊಡುವುದಿಲ್ಲ ಯಾರ ಮುಂದೆಯೂ ಇವರ ಸಣ್ಣ ಸರಸವ
ನಾ ಕಂಡಿಲ್ಲ ಜೋರು ಮಾತ್ನಾಡಿ ನೋಯಿಸಿದ್ದು ಯಾರ ಮನವ ......

ಮೇ 13 ಇವರ ನಡುವೆ ಭಾಂಧವ್ಯ ಬೆಸೆದ ಮದುವೆ ದಿನಾಂಕ
ಇಂತಹ ಜೋಡಿಗೆ ಕೊಡಲಾರೆ ನೂರಕ್ಕಿಂತ ಕಡಿಮೆ ಅಂಕ ....

                                                                          ಬೊ . ಕು .ವಿ