ಈ ನಾಡು ಕನ್ನಡ
ಈ ಬೀಡು ಕನ್ನಡ
ಈ ಹಾಡು ಕನ್ನಡ
ನೀ ನೋಡು ಕನ್ನಡ
ಕನ್ನಡ.....ಕನ್ನಡ......
"ನಾಡೆಂಬುದು ಜನಾಂಗದ ಪ್ರಾಕೃತಿಕ ಸ್ವರೂಪ ಮಾತ್ರ, ನುಡಿಯೇ ಅದರ ಜೀವಾತ್ಮ, ಅಂತರಾತ್ಮ. ನುಡಿಯಿಲ್ಲದ ನಾಡು ನಾಡಲ್ಲ, ಅದೊಂದು ಕಾಡು. ಎಲ್ಲಿ ನುಡಿ ಚಂದವೋ ಅಲ್ಲಿ ನಾಡಿಗೂ ಹೆಸರಿದೆ. ನುಡಿಯನಾಡಲು, ಬರೆಯಲು ಮರೆಯದಿರಿ. ಮರೆತರೆ ಅದು ತಾಯ್ನುಡಿಗೆ ಅಪಚಾರವಾದಂತೆ, ದ್ರೋಹವೆಸಗಿದಂತೆ."ಕರ್ನಾಟಕದ ಗಂಡುಗಲಿ, ಕೀರ್ತಿವಂತ ಸಾಹಿತಿವರೇಣ್ಯರಾದ ಮುದವೀಡು ಕೃಷ್ಣರಾಯರ ದಿಟ್ಟ ಮಾತುಗಳು. ಹೌದಲ್ವಾ? ಕನ್ನಡದ ಕೈಂಕರ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಲೇ ಬೇಕು. ಇಂದಿನ ಕಾಲಘಟ್ಟಕ್ಕೆ ಆಂಗ್ಲ ಭಾಷೆಯ ಅಗತ್ಯವಿದೆ, ಕನ್ನಡ, ಕನ್ನಡ ಹೇಳಿದರಾಗದೆಂಬ ತಾತ್ಸಾರ ಬೇಡ. ವ್ಯವಹಾರಕ್ಕೆ ಆಂಗ್ಲ ಭಾಷೆ ಕಲಿಯಿರಿ. ಎಲ್ಲಾ ಭಾಷೆಗಳು ನಮಗೆ ಬೇಕು. ಬೇಡವೆನ್ನುವವರಾರಿಲ್ಲ. ಒಂದಷ್ಟು ಸಂವಹನ, ಬಾಲ್ಯದ ಚಿತ್ತ, ಭಾಷಾ ಚಟುವಟಿಕೆಗಳಿಗೂ ಗಮನ ಹರಿಸಬೇಕು. ಹಿರಿಯರೇ ಕಡೆಗಣಿಸಿದರೆ ಹೇಗೆ? ಮನೆಮಾತು ಮನೆಯಲ್ಲಿ ಬೇಕಲ್ಲವೇ? ಮುದ್ದು ಮಕ್ಕಳೊಂದಿಗೆ ನಮ್ಮ ಮನೆಯ ಮಾತನ್ನು ಮಾತನಾಡಿದರೆ ಅವರೂ ಮಾತು, ಭಾಷೆ ಎರಡೂ ಕಲಿಯಬಹುದು. ಶಾಲಾ ಹಂತದಲ್ಲಿ ಕರ್ನಾಟಕದ ನೆಲ-ಜಲ-ಗಾಳಿ-ಆಹಾರ ಸೇವಿಸುವ ನಾವು, ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಬಹುದಲ್ಲವೇ? 'ಕನ್ನಡದಲ್ಲಿ ಪಾಸಾದರೆ ಸಾಕು' ಧೋರಣೆ ಬೇಡ. ಮನಸ್ಸಿದ್ದರೆ ಮಾರ್ಗವಿದೆ, ಮನಸ್ಸು ಬೇಕಷ್ಟೆ. ನಮ್ಮ ತಾಯಿಭಾಷೆ, ನಾಡಭಾಷೆ ಎಂದು ಅಪ್ಪುವ, ಒಪ್ಪುವ ಹೃದಯಬೇಕು. ಸಮಯ ಸಂದರ್ಭ ಸಿಕ್ಕಾಗ ಕನ್ನಡ ಪುಸ್ತಕಗಳ ಕೊಂಡು ಮನೆಗೆ ತರೋಣ, ಓದೋಣ, ತಾಯ್ನುಡಿಯ ಮರೆಯದಿರೋಣ. ಅ ಆ ಇ ಈ ಕಲಿಯೋಣ-ಕಲಿಸೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!