ನೀರಿರುವ ಸ್ಥಳವನ್ನು ಕಪ್ಪೆಗಳೋ, ಜಲಚರಗಳೋ ಆಶ್ರಯಕ್ಕಾಗಿ ಹುಡುಕಿಕೊಂಡು ಬರುವುದು ಸಹಜ. ದೊಡ್ಡ ಮರವೊಂದಿದ್ದರೆ ಹಕ್ಕಿಗಳಿಗೆ ಆಶ್ರಯವಾಗುವುದು. ಮರಳುಗಾಡಿನಲ್ಲಿ ನೀರು ಎಲ್ಲೆಡೆ ಸಿಗದು. ಇರುವಲ್ಲಿಗೆ ಅರಸಿಕೊಂಡು ಹೋಗಬೇಕು. ಸಸಿಗಳು ಬೆಳವಣಿಗೆ ಆದಂತೆ ನೆರಳಿದ್ದರೆ ಸೂರ್ಯನ ಬಿಸಿಲಿನತ್ತ ಬಾಗುವುದನ್ನು ನೋಡುತ್ತೇವೆ. ಅದೇ ರೀತಿ ಜ್ಞಾನಿಯಾದವನನ್ನು, ಉದ್ಯೋಗಶೀಲನಾದವನನ್ನು, ಸಹೃದಯ ಹೊಂದಿದವನನ್ನು, ಸದಾ ಹಸನ್ಮುಖಿಯಾದವನನ್ನು, ಕೈನೀಡಿ ದಾನಧರ್ಮ ಮಾಡುವನನ್ನು, ಕಷ್ಟ- ಸುಖಕ್ಕೆ ಸ್ಪಂದಿಸುವನನ್ನು ಹುಡುಕಿಕೊಂಡು ಬರುತ್ತಾರೆ. ಮನುಷ್ಯ ಸ್ವಭಾವವೇ ಹಾಗೆ. ನೂರೆಂಟು ವೈದ್ಯರಿದ್ದರೂ ಯಾರ ಕೈಗುಣ ಚೆನ್ನಾಗಿದೆಯೋ ಅಲ್ಲಿಗೆ ಬರುತ್ತಾರೆ, ಇತರರಿಗೂ ಹೇಳುವರು. ದೇವರ ಹೆಸರು ನೂರಾರು ಇರಬಹುದು, ಧ್ಯಾನ, ಪೂಜೆ, ಆರಾಧನೆ, ನೈವೇದ್ಯ ಸಲ್ಲಿಸಬಹುದು. ಎಲ್ಲರ ನಾಮದಲ್ಲೂ ಪ್ರಾರ್ಥನೆಯೊಂದೇ, ದೇವನೊಬ್ಬನೇ ನಾಮ ಹಲವು.ಅದೇ ರೀತಿ ಶಾಲೆ, ಆಸ್ಪತ್ರೆ ಎಲ್ಲವನ್ನೂ ಅಳೆದು ತೂಗಿ ಅವಲೋಕಿಸುವುದು ಮಾನವ ಸಹಜ ಗುಣ. ಆಯ್ಕೆ ಅವರವರ ಇಷ್ಟ, ಮನೋಧರ್ಮ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!