ಮನಸಿನಲಿ ಬರುವ ಬಯಕೆಗಳಿಗೆ ಮಿತಿ ಎಂಬುವುದಿಲ್ಲ
ಪಡೆಯಲಿಚ್ಛಿಸುವುದು ಮನಸು ತಾ ಬಯಸಿದುದನೆಲ್ಲ
ಆಸೆ ಎಂಬುದು ಮದಿರೆಯೊಳು ತುಂಬಿಹ ನಶೆಯಂತೆ
ದಾಸನಾದರೆ ಇದಕೆ ಬಾಳಿನಲಿ ತಪ್ಪದು ನಿನಗೆ ಚಿಂತೆ
ಬಯಸಿದುದನೆಲ್ಲ ಪಡೆಯಲೇ ಬೇಕೆನುವ ಛಲವೇಕೆ
ಸಿಗದಿರಲು ಮನಸು ನಿರಾಸೆಯ ಹೊಂದುವುದೇತಕೆ
ಮಗುವಿಗೇನು ಬೇಕೆಂಬುದ ತಾಯಿ ತಿಳಿದಿರುವಂತೆ
ನರಹರಿಯೆ ಈಡೇರಿಸುವ ನಮ್ಮ ಬಯಕೆಗಳನಂತೆ
ಬಯಸಿದುದು ಸಿಗಲಿ,ಸಿಗದಿರಲಿ ಸಮಚಿತ್ತದಲವನು ಸ್ವೀಕರಿಸು
ನಿನಗೆ ಬೇಕಿಹುದೇನೆಂದರಿತಿಹ ಶ್ರೀನರಸಿಂಹನಲಿ ಮನಸನಿರಿಸು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕಂಡು ಕಾಣದಂತಿಹನು (ಶ್ರೀ ನರಸಿಂಹ 83)
ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)
ಕಷ್ಟ - ಸುಖದಿ ಮನಸು (ಶ್ರೀ ನರಸಿಂಹ 82)
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)