ಇನ್ನೊಮ್ಮೆ ನಕ್ಕು ಬಿಡಿ! ಯಾಕೆಂದರೆ ....

- - - - - -

ಗುಂಪಿನಲ್ಲಿ ಒಬ್ಬ- ನಾನು ಈಗ ಹೇಳಲಿರುವ ನಗೆಹನಿಯನ್ನು ಸಜ್ಜನರಾದ ನೀವು ಯಾರಾದರೂ ಈಗಾಗಲೇ ಕೇಳಿದ್ದರೆ ನನ್ನನ್ನು ತಡೆಯಿರಿ .

ಯಾರೋ ಒಬ್ಬರು ಬಾಯಿ ಹಾಕಿದರು - ನೀವು ಮುಂದುವರೆಸಿ ; ಸಜ್ಜನರಾರೂ ಯಾವುದೇ ನಗೆಹನಿಯನ್ನ ಅದಕ್ಕೂ ಮೊದಲು ಕೇಳಿರುವುದಿಲ್ಲ!

- - - -

- ಕೋಳಿಗಳು ತತ್ತಿ ಇಡುವುದು ಏಕೆ ?

-ಎಸೆದರೆ ಒಡೆದು ಹೋಗುವವಲ್ಲ , ಅದಕ್ಕೆ !

- - - - -

ನ್ಯಾಯಾಧೀಶ - ನೀವು ಗಂಡನಿಗೆ ಕುರ್ಚಿಯಿಂದ ಹೊಡೆದದ್ದೇಕೆ ?

ಮಹಿಳೆ - ಯಾಕೆಂದರೆ ಟೇಬಲ್ ತುಂಬಾ ಭಾರವಾಗಿತ್ತು.

- - - - -

(ನಿಜಕ್ಕೂ ನಡೆದ ಸಂಭಾಷಣೆ )

- ಕಚೇರಿಯ ಕಕ್ಕಸು ಕಟ್ಟಿಕೊಂಡಿದೆ, ತುಂಬಾ ಗಲೀಜಾಗಿದೆ

- ಹೋಗಲಿ ಬಿಡೋ , ಅದನ್ನೆಲ್ಲ ತಲೆಗೆ ಹಚ್ಚಿಕೋಬೇಡ

- ನೀನೊಬ್ಬ! 'ಅದನ್ನು' ಯಾರು ತಲೆಗೆ ಹಚ್ಚಿಕೋತಾರಯ್ಯ ?