೧) ಪ್ರೀತಿಸಿ ಮದುವೆಯಾದ ಪ್ರೇಮಿಗಳಿಬ್ಬರು ತಮ್ಮ ಹಳೆ ದಿನಗಳ ಮೆಲುಕು ಹಾಕುತ್ತಿದ್ದರು.. ಹಿಂದೊಮ್ಮೆ ಮುನಿಸಿಕೊಂಡಾಗ ಬೇಕಂತಲೇ ಇವನು ಬೇರೊಬ್ಬ ಹುಡುಗಿಯ ಜೊತೆಗೆ ಹಲ್ಕಿರಿದು ಮಾತನಾಡಿದ್ದನ್ನು ಇವತ್ತು ನೆನಪು ಮಾಡಿಕೊಂಡು ಮುಖ ಊದಿಸಿಕೊಂಡಳು..
೨) ಅಹಿಂಸಾವಾದಿ ಸುಬ್ಬಾ ಶಾಸ್ತ್ರಿಗಳು, ತಮಗೆ ತೊಂದರೆ ನೀಡುತ್ತಿದ್ದ ಸೊಳ್ಳೆಗಳನ್ನು ಒಂದೊಂದನ್ನೇ ಹಿಡಿದು, ಹಿಸುಕಿ, ಸಾಯಿಸಿ ಸಂಭ್ರಮಿಸಿದರು..
೩) ಊರಿನ ಸಹವಾಸವೇ ಬೇಡ ಎಂದು ಮನೆ ಬಿಟ್ಟು ಬಂದಿದ್ದ ರಮೇಶ ಬೆಳ್ಳಂಬೆಳಗ್ಗೆ ಬೆಂಗಳೂರು ಕಡೆಗೆ ಹೊರಟಿದ್ದ ಸೂಪರ್ deluxe ಬಸ್ಸನ್ನೇರಿ ಕುಳಿತಿದ್ದ..
ವೇಗವಾಗಿಯೇ ಹೊರಟ ಬಸ್ಸು, ಇವನ ಮನೆ ಮುಂದೆ ಬಂದ ಕೂಡಲೇ ಮುಂದೆ ಹೋಗಲೊಲ್ಲದೆ ಕೆಟ್ಟು ನಿಂತಿತ್ತು..
೪) ಮದುವೆಯ ಹಿಂದಿನ ದಿನವೇ "ನನಗೆ ಎರಡು ಮದುವೆ ಮಾಡಿಕೊಳ್ಳಬೇಕೆಂದು ಆಸೆ" ಎಂದು ಹೇಳಿದಾಗ ಅವಳ ಕಣ್ಣು ಕೆಂಪಾಗಿ.. ಕಣ್ಣಂಚಿನಲ್ಲಿ ನೀರು ಮೂಡಿತ್ತು.. "ಇವಾಗ ಒಂದು ಸಾರಿ, ಷಷ್ಠಿ ಪೂರ್ತಿಗೆ ಒಂದು ಸಾರಿ" ಅಂತ ಹೇಳಿದಾಗ.. ದುಖ ಕರಗಿ,, ಅವನ ಮೇಲೆ ಅವಳಿಗೆ ಮುನಿಸಾಯಿತು..
೫) ದಿನಂಪ್ರತಿ ೭ಕ್ಕೆ ಏಳುತ್ತಿದ್ದವನಿಗೆ ೫ಕ್ಕೆ ಎಚ್ಚರವಾಗುತ್ತಿದೆ.. ಕೊರೆಯುವ ಚಳಿ ಮೈ ತುಂಬಿಕೊಂಡಾಗ ಮಡದಿಯ ಬಿಸಿ ಅಪ್ಪುಗೆ ನೆನಪಾಗುತ್ತಿದೆ.. ಅಕ್ಕ ಬಂದ ೩ ದಿನಕ್ಕೆ ಕರೆದುಕೊಂಡು ಹೋಗಲು ಬಂದ ಭಾವನನ್ನು ನೋಡಿ ನಾದಿನಿಯರು ಮುಸಿ ಮುಸಿ ನಗುತ್ತಿದ್ದಾರೆ..
೬) ಇಡ್ಲಿ ಮತ್ತು ದೋಸೆ ಜಗಳವಾಡುತ್ತಿದ್ದರು... ಬಿಡಿಸಲು ನಡುವೆ ಬಂದ ತೆಂಗಿನಕಾಯಿ ಚಟ್ನಿಯಾಗಿದೆ.
೭) ಹುಡುಗ ಹುಡುಗಿಗೆ ಸ್ನೇಹವಾಯಿತು..
ಎಸ್ಸೆಮ್ಮೆಸ್ ಗಳ ಸಾಗರವೇ ಹರಿಯಿತು..
ಪ್ರೀತಿಸಿಕೊಂಡರು. ಇಬ್ಬರ ನಂಬರ್ ಬ್ಯುಸಿಯಾಯಿತು..
ಮದುವೆಯಾದರು.. ಇವಾಗ ಇಬ್ಬರ ಮೊಬೈಲ್ ನಲ್ಲಿ currency ಇಲ್ಲವಂತೆ..
೮) "ನೀ ಹೇಗಿದ್ದರೂ ನಂಗೆ ಇಷ್ಟ ಕಣೆ" ಅನ್ನುತ್ತಿದ್ದ ಗಂಡ.. ಇವಾಗ "ನಿಮ್ಮಮ್ಮ ಡುಮ್ಮಿ ಆಗಿಬಿಟ್ಟಿದಾಳೆ" ಅಂಥಾ ಮಗಳ ಎದುರು ಮೂದಲಿಸ್ತಾ ಇದಾನೆ...
-ಯಳವತ್ತಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪ್ರೇಯಸಿ ಎಂಬ ಗೆಳತಿಗೆ.. ಒಂದು ಪ್ರೇಮ ಪತ್ರ.
2014 ರ ಯಳವತ್ತಿ ಟ್ವೀಟುಗಳು
ಲೋಕಾಯುಕ್ತ ದಾಳಿಯ ನಂತರ ಮುಂದೇನು???
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)