ಬಂದಿದೆ ಮತ್ತೆ ಚುನಾವಣೆ

ಮುಂದಿರುವುದೆ ಬದಲಾವಣೆ !!

ಮತ್ತದೆ ಹಳೆಹಳೆ ರಾಗವ ಹಾಡುವ

ಚಿತ್ತದ ಕರಕರೆ ಬೇಕೇಕೆ ?

ಸಿಕ್ಕಿದೆ ಮತ್ತವಕಾಶವು ಬಿಡದೆ

ಚೊಕ್ಕ ಮಾಡಲಾಗದುದೇಕೆ ?

ಹುಡುಕುವುದಿರುವ ಭಂಟರ ಲಕ್ಷಣ

ನುಡಿಸುತ ನುಡಿ ನೆಡಿಗೆಯ ನೋಡಿ !

ಬೆದರಿಸುವಂತಹ ರೀತಿ ವಿಲಕ್ಷಣ

ಮದವಂತರನಾಚೆಗೆ ದೂಡಿ !!

ಮಾತಿಗು ಕೃತಿಗೂ ಸಾಮ್ಯತೆಯುಳ್ಳರ

ರೀತಿ ನೀತಿಗಳ ಸಂಮಾನಿಸಿರಿ !

ಖ್ಯಾತಿಗೆ ಸುಲಭೊಪಾಯವ ಬಲ್ಲರ

ಪ್ರೀತಿಯ ತುಸು ಅನುಮಾನಿಸಿರಿ !!

ಸಂದರ್ಭಕೆ ಜಾತಿಯ ಸೊಲ್ಲೆತ್ತುವ

ಮಂದಿಗಳಿಗೆ ಬಲು ಜಾಗ್ರತೆಯು !

ಮುಂದಿರಲೆಲ್ಲರ ನೀತಿಯ ಬಿತ್ತುವ

ಸುಂದರ ದಿನಗಳಿಗಾದ್ಯತೆಯು !!

ಮತದಾನವು ಹಕ್ಕಿನ ಗುರಿ ಕಾಯಕ

ಹಿತವಿದೆ ನಮ್ಮೂರಿನ ಜನಕೆ !

ಜತನವು ನೋಡುವರಿಲ್ಲ ಸಹಾಯಕ

ಮತ ಗುಪಿತದಲಿ ಸುಧಾರಣೆಗೆ !!

- ಸದಾನಂದ

. ( ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಾಳೆ ಇದೆ. )