ಕಣ್ಣೆದುರು ಕಾಣದಾಗಿದೆ ನಾ ನಡೆಯ ಬೇಕಾದ ದಾರಿ
ಕಣ್ಣಳತೆಗೆ ಸಿಗದಾಗಿಹರು ಕರಿ ಮುಖದ ಜನರಿಲ್ಲಿ
ಮೇಲೇರುವ ತವಕದಲಿ ತುಳಿದಿಹರು ನೈತಿಕತೆ
ನೀತಿ ಪಾಠವ ನುಡಿದರೆ ಅಂಟಿಕೊಳ್ಳುವುದು ಅಸ್ಪ್ರುಶ್ಯತೆ
ನಾ ಮುಂದು ತಾ ಮುಂದು ಎಂದೆಂಬ ಸ್ಪರ್ಧೆಯಲಿ
ತನ್ನವರು 'ಇವರು' ಎಂಬುದನು ಮರೆತಿಲ್ಲಿ
ಹುಚ್ಚು ಕುದರೆಯ ಹಾಗೆ ಓದುವದು ಕಂಡಾಗ
ನಾ ಕೇಳುವ ಪ್ರಶ್ನೆ - 'ಕೊನೆ ಇದಕೆ ಯಾವಾಗ ?'
ಹಣದ ಹೊಳೆ ಹರಿಸಿದರು ನೆಮ್ಮದಿಯ ನೆಲೆ ಸಿಗದು
ಜೀವನದ ಉದ್ದಕ್ಕೂ ಹಿಡಿಯ ಬೇಕಿದೆ ಕನ್ನಡಿಯ ಗಂಟು
ದಿನ ರಾತ್ರಿ ಯಾನ್ತ್ರಿಕತೆಯಲಿ ದುಡಿಯುವುದೇನು ಅಗತ್ಯ?
ನಾ ಸುಖವಾಗಿರುವೆ ಎಂಬುದು ಕೇವಲ 'ಅರ್ಧಸತ್ಯ
ಪ್ರತಿಕ್ರಿಯೆ (1)