Equinox-ಅಂದರೆ ಮಧ್ಯಕಾಲ

ಸೂರ್ಯನ ಕಿರಣಗಳು ನೇರವಾಗಿ ಭೂಮಧ್ಯೆ ರೇಖೆಯ ಮೇಲೆ ಬೀಳುವ ದಿನಗಳು ಮಾರ್ಚ್ 21-22 ರ ಅವಧಿಯಲ್ಲಿ ಮಾತ್ರ. ಆಗ ಹಗಲು ಮತ್ತು ಇರುಳಿನ ಅವಧಿಯು 12ಗಂಟೆಗಳ ಸಮ ದಿನಗಳು. ಇದು ವಸಂತ ವಿಷುವತ್ equinox- ಮಧ್ಯಕಾಲ.<br>ಅಂದರೆ ಸೂರ್ಯನ ಕಿರಣಗಳು ನೇರವಾಗಿ ಭೂಮಧ್ಯೆ ರೇಖೆಯ ಮೇಲೆ ಬೀಳುತ್ತವೆ.<br>ಆನಂತರ ಸೂರ್ಯ ಉದಯಿಸುವ ದಿಕ್ಕು ಉತ್ತರಮುಖಿಯಾಗುತ್ತಾ ಹೋಗಿ, ಜೂನ್ 21-22ಕ್ಕೆ ಅವನ ಉದಯ ಉತ್ತರದ ಕೊನೆಯ ಬಿಂದುವಾಗಿರುತ್ತದೆ. ಇದು- summer solstice. ಆಗ ಭೂಗೋಳದ ಉತ್ತರ ಭಾಗದಲ್ಲಿ ಅತ್ಯಂತ ದೀರ್ಘಾವಧಿಯ ಹಗಲು ಮತ್ತು ಕಡಿಮೆ ಅವಧಿಯ ರಾತ್ರಿ ಇರುತ್ತದೆ. ದಕ್ಷಿಣ ಭಾಗದಲ್ಲಿ ಇದರ ತದ್ವಿರುದ್ಧ.

ಹಾಗೆಯೇ ಅಲ್ಲಿಂದ ಸೂರ್ಯನ ಪಯಣ ದಕ್ಷಿಣ ಮುಖಿಯಾಗುತ್ತದೆ. ಮತ್ತೆ ಸೆಪ್ಟೆಂಬರ್ 21-22ಕ್ಕೆ ಮಾರ್ಚ್ ನ ಹಾಗೆ ಹಗಲು ಮತ್ತು ರಾತ್ರಿಯ ವೇಳೆ ಸಮ. ಇದು ಶರದ್ ವಿಷುವತ್. ಇಲ್ಲಿಯೂ ಕೂಡ ಸೂರ್ಯನ ಕಿರಣಗಳು ನೇರವಾಗಿ ಭೂಮಧ್ಯೆ ರೇಖೆಯ ಮೇಲೆ ಬೀಳುತ್ತವೆ. ಮುಂದುವರೆದು ಡಿಸೆಂಬರ್ 21-22ಕ್ಕೆ ಸೂರ್ಯನ ಉದಯ ದಕ್ಷಿಣ ದಿಕ್ಕಿನ ಕೊನೆಯ ಬಿಂದುವಾಗಿರುತ್ತದೆ. ಆಗ ಭೂಗೋಳದ ಉತ್ತರ ಭಾಗದಲ್ಲಿ ಅತ್ಯಂತ ದೀರ್ಘಾವಧಿಯ ರಾತ್ರಿ ಇದ್ದರೆ, ದಕ್ಷಿಣ ಗೋಳದಲ್ಲಿ ದೀರ್ಘಾವಧಿಯ ಹಗಲು ಇರುತ್ತದೆ. ಇದು-Winter Solstice.

ಸಾಯನ ಪದ್ಧತಿ ಪ್ರಕಾರ ಇಲ್ಲಿಂದಲೇ ಉತ್ತರಾಯಣ ಆರಂಭ. ಆದರೆ ನಾವೆಲ್ಲ ಚಂದ್ರಮಾನದ ಪ್ರಕಾರ ಉತ್ತರಾಯಣ ಪುಣ್ಯಕಾಲವನ್ನ ಜನೆವರಿ 15ಕ್ಕೆ ಆಚರಿಸುತ್ತೇವೆ. ಕೆಲ ದಶಕಗಳ ಮುಂಚೆ ಅದು 14ಕ್ಕೆ ಬರುತ್ತಿತ್ತು. ಭೂ ಚಲನೆಯಲ್ಲಿನ ವ್ಯತ್ಯಾಸದಿಂದಾಗಿ ಮುಂದಿನ ದಶಕಗಳಲ್ಲಿ ಅದು ಜನೆವರಿ16,17,18 ಈ ರೀತಿ ಮುಂದಕ್ಕೆ ಹೋಗಬಹುದು.

ಹೀಗಾಗಿ ಸೂರ್ಯನ ಕಿರಣಗಳು ನೇರವಾಗಿ ಭೂಮಧ್ಯೆ ರೇಖೆಯ ಮೇಲೆ ಬೀಳುವ ದಿನಗಳು ಮಾರ್ಚ್ ಮತ್ತು ಸೆಪ್ಟೆಂಬರ್ 21-22ರಂದು ಮಾತ್ರ. ಮೇ ನಲ್ಲಿ ಅಲ್ಲ.

ಅಂದಹಾಗೆ ಭೂಮಿಯು ಸೂರ್ಯನ ಸುತ್ತ ತಿರುಗಲು ತೆಗೆದುಕೊಳ್ಳುವ ಅವಧಿ 365.242199 ದಿನಗಳು. ಇದು ಸಾಯನ ಸಂವತ್ಸರ Tropical year.

ಇನ್ನೊಂದು ಅಚ್ಚರಿಯ ವಿಷಯವೆಂದರೆ- ಉತ್ತರಾಯಣ ಅವಧಿಯ ಕೊನೆಯಲ್ಲಿ ಅಂದರೆ, ಜೂನ್ 21-22ಕ್ಕೆ ಮುಂಚೆ ಮತ್ತು ನಂತರದ ಏಳು ವಾರಗಳ ಕಾಲ ನಾರ್ವೆ ದೇಶದಲ್ಲಿ ಸೂರ್ಯ ಮುಳುಗುವದೇ ಇಲ್ಲ. ಭೂಮಿಯ ಉತ್ತರ ತುದಿಯಲ್ಲಿ ತಿರುಗುತ್ತಾ ಇರುತ್ತಾನೆ. ಹೀಗಾಗಿ ಅಲ್ಲಿ ಸೂರ್ಯಾಸ್ತ ಅಷ್ಟು ದಿನಗಳ ಕಾಲ ಆಗುವುದೇ ಇಲ್ಲ.

  • ಇಷ್ಟಕ್ಕೂ ನಾನೇನೂ ಸೈನ್ಸ್ ಪದವಿ ಪಡೆದವನಲ್ಲ. ವಾಣಿಜ್ಯ ವಿಷಯ ಓದಿಕೊಂಡವ. ಆದರೂ ಖಗೋಳ ವಿಜ್ಞಾನದ ಆಸಕ್ತಿ ಇರುವ ಕಾರಣದಿಂದ ನಾನು ಓದಿ, ತಿಳಿದು, ಅರ್ಥೈಸಿಕೊಂಡ ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. ತಪ್ಪಿದಲ್ಲಿ ಮನ್ನಿಸಿ.🌏🌍🌎🌞⛅🌤️
  • ವೆಂಕಟೇಶ್ ಟಿ.ಬಿದರಿ. ಮಸ್ಕಿ