ಅಗಲಿಕೆ

ಬೇರೆ ದಾರಿಯಿಲ್ಲದಿರುವಾಗ ಗೆಳತಿ 

ಬಾ ಮುತ್ತಿಟ್ಟು ಬೇರಾಗೋಣ 

ಇಲ್ಲ, ಇದಕಿಂತ ಹೆಚ್ಚಿನದೇನೂ ಸಿಗದು ನನ್ನಿಂದ 

ಆದರೆ ನಾನು ಸಂತೃಪ್ತ ಪೂರ್ಣ ಹೃದಯದಿಂದ 

ಹೀಗಾದಾಗ ನಾನು ಸ್ವತಂತ್ರ, ಶುಭ್ರ       

ಕೈಕುಲುಕು ಕೊನೆಯದಾಗಿ ಮರೆತುಬಿಡು ನಮ್ಮೆಲ್ಲ ವಾಗ್ದಾನಗಳ 

ಕಾಣದೆ ಇರಲಿ ಕಣ್ಣಲಿ ಹಳೆಯ ಪ್ರೀತಿಯ ಪ್ರತಿಬಿಂಬ.

ಈಗವನ ಪ್ರೀತಿಯು ಕೊನೆಯುಸಿರೆಳೆಯುವಾಗ 

ನಾಡಿ ಸೋಲುತಿರುವಾಗ, ಭಾವನೆಗಳು ಅವನಲ್ಲೇ ಹುದುಗಿರುವಾಗ 

ಪ್ರಾಂಜಲತೆ ಅವನ ಕಣ್ಣು ಮುಚ್ಚಿಸುವಾಗ ಗೆಳತಿ 

ನೀ ಮಾತ್ರ ಶಕ್ತಳು ಸಾವಿನಿಂದವನನು ಬದುಕಿಗೆಳೆತರಲು

ಎಲ್ಲರೂ ಅವನನು ಕೈ ಬಿಟ್ಟಿರುವಾಗ!

 

ಮೂಲ ಕವಿತೆ ಕೆಳಗಿದೆ:

A Parting

Since there’s no help, come let us kiss and part,

Nay I have done, you get no more of me;

And I am glad; glad with all my heart.

That thus so cleanly I myself can free;

Shake hands forever, cancel all our vows,

And when we meet at any time again,

Be it not seen in neither of our brow

That we one jot of former love retain.

Now at last gasp of love’s last breath,

When his pulse failing, passion speechless lies,

And innocence is closing up his eyes,

Now that if thou wouldst, when all have given him over,

From death to life thou mightst him yet recover!