ನಗು ಬೇಕು

ನಗು ಬೇಕು ನಗಬೇಕು

ನಗುತಲಿ ಹಗುರಾಗಿರಬೇಕು

ಹಗುರಾಗಲು ನಗುತಿರಬೇಕು !!

ಬಿಡಬೇಕು ಅಳು ಬಿಡಬೇಕು

ಕಡು ಹರುಷದಿ ನಗುತಿರಬೇಕು

ಹಿಡಿದಿಹ ಕೆಲಸವ ಮಾಡಿರಬೇಕು

ನಡೆ ನುಡಿಯಲಿ ಸಮವಿರಬೇಕು !!1!!

ಛಲ ಬೇಕು ಗೆಲುವಿರಬೇಕು

ಅಳುಕದೆ ನಡೆಯುತಲಿರಬೇಕು

ಗೆಲುವಿನ ಹಾದಿಯ ಕಾಣಲು ಬೇಕು

ನಲಿ ಕಲಿವಲಿ ನಗುತಿರಬೇಕು !!2!!

ಗುರು ಬೇಕು ಗುರುತಿರಬೇಕು

ಅರಿವನು ಬೆಳಗಿಸುತಿರಬೇಕು

ಪರಿಸರ ಬಲುತರ ತಿಳಿದಿರಬೇಕು

ಪರಿಚಯ ತಾ ತನಗಿರಬೇಕು !!3!!

ಗುಣಬೇಕು ಸದ್ಗುಣ ಬೇಕು

ತನು ಮನದಲಿ ನಂಬುಗೆ ಬೇಕು

ಕನಸನು ಕಾಣುತ ಬದುಕಿರಬೇಕು

ದಿನದೊಳು ಸಂತಸ ತರಬೇಕು !!4!!

ನಗು ಬೇಕು ನಗಬೇಕು

ನಗುತಲಿ ಹಾಯಾಗಿರಬೇಕು

ಹಗುರಾಗಲು ನಗುತಿರಬೇಕು !!

. - ಸದಾನಂದ