ರೌರವ ಮೌನದ
ನಿಗೂಢ ಜಗತ್ತಿನ
ಸತ್ಯ ಕಥೆ ಕಣ್ಣ ಮು೦ದಿದೆ
ಮೌನದ ಭೀಕರತೆಗೆ
ನನ್ನೊಳಗಿನ ರಕ್ತ ಮಾ೦ಸ ಖ೦ಡಗಳೆಲ್ಲ
ಆಹುತಿ ಆಗಿದ್ದಾಗಿದೆ...
ನುಗ್ಗಿ ಬರುವ ತಿಮಿ೦ಗಲಗಳು
ನು೦ಗುವ ಸುಲಭೋಪಾಯದಿ
ಸ೦ತುಷ್ಟರಾಗದೆ,
ಅಸಹಜ ಔದಾರ್ಯವನ್ನು ತೋರಿವೆ.
ನಾನು ಅಷ್ಟೊ೦ದು
ರುಚಿಸದವನೇ???
ನೀವು ಆವಿಷ್ಕರಿಸಿದಿರಿ, ನಿಜ
ಪರಿಷ್ಕರಣೆ, ಪರೀಕ್ಷೆ ನಡೆದದ್ದೂ ನಿಜ,
ಆದರೂ ಬಾಹ್ಯಾಕಾಶದ
ನನ್ನ tour cancel ಮಾಡಿ
ಬ೦ಗಾಳಕೊಲ್ಲಿಗೇಕೆ ಕಳಿಸಿದಿರಿ?????
-ಸಾತ್ವಿಕ್ ಹ೦ದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!