ಇನ್ನು ಕೆಲವೇ ವರುಶರಳಲ್ಲಿ ಈಗ ಇರುವ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು, ಮೂಲೆ ಸೇರಲಿವೆ, ಇಲ್ಲವೇ ಬದಲಾಗಲಿವೆ. ಮುಂದಿನ ದಿನಗಳಲ್ಲಿ ಜ಼ೀರೋ ಪೊಲ್ಲುಶನ್ ಮೋಟಾರುಗಳು ರೋಡುಗಳಿಗೆ ಇಳಿಯಲಿವೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರ್ ಒಂದು ಒಳ್ಳೆಯ ಜತನವಾಗಿದೆ, ಆದರೆ ಅದನ್ನು ತುಂಬಾ ಹೊತ್ತು ಚಾರ್ಜ ಮಾಡಬೇಕಿರುವದರಿಂದ ಅದರದೇ ಆದ ಲಿಮಿಟೇಶನ್ಗಳನ್ನು ಹೊಂದಿದ್ದು, ಜನರಿಗೆ ಹಿಡಿಸಲಿಲ್ಲ ಅಂತಲೇ ಹೇಳಬಹುದು. ಈ ಲಿಮಿಟೇಶನ್ಗಳನ್ನು ತೆಗೆದು ಹಾಕಿಕೊಂಡು ಮುಂದಿನ ದಿನಗಳಲ್ಲಿ ಬಯೋ ಫ಼್ರೆಂಡ್ಲಿ ಕಾರುಗಳು ಮುನ್ನುಗ್ಗಲಿವೆ.
ಬಯೋ ಕಾರ್ಗಳ ಬಗೆಗಳು
ಹೈಬ್ರಿಡ್ ಕಾರು: ಎರಡು ಇಲ್ಲವೇ ಹೆಚ್ಚಿನ ಬಗೆಯ ಇಂಧನವನ್ನು ಬಳಸಿಕೊಂಡು ಓಡುವ ಕಾರುಗಳನ್ನು ಹೈಬ್ರಿಡ್ ಕಾರು ಅನ್ನುತ್ತಾರೆ. ಎಲೆಕ್ಟಿಕ್-ಪೆಟ್ರೋಲಿಯಮ್ ಕಾರುಗಳು, ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಕಾರುಗಳನ್ನು ಕೂಡಿಸಿ ಸೇರಿಸಿ ಮಾಡಿದಂತದು, ಇದು ಪೆಟ್ರೋಲ್ ಬಳಕೆಯನ್ನು ಕಡಿಮೆಗೊಳಿಸುವದಲ್ಲದೇ ಅದರಿಂದ ಉಂಟಾಗುವ ಪೊಲುಶನ್ ತಡೆಯುತ್ತದೆ.
ಹೈಡ್ರೋಜೆನ್ ಕಾರು: ಹೈಡ್ರೊಜನ್ ಕಾರು ನೀರನ್ನು ಬಳಸಿಕೊಂಡು ಓಡುತ್ತದೆ!, ಹೌದು. ನೀರು, ಎರಡು H ಮತ್ತು ಒಂದು O ನ ಕಣಗಳಿಂದ ಆಗಿದೆ. ನೀರಿನಿಂದ ಎಚ್ ಮತ್ತು ಓಗಳನ್ನು ಬೇರೆಗೊಳಿಸಲು ಎಲೆಕ್ಟ್ರಿಕ್ನ್ನು ಬಳಸಲಾಗುತ್ತದೆ. ಕಾರಿನಲ್ಲಿ hydrogen fuel cell ಅಳವಡಿಸಲಾಗಿರುತ್ತದೆ, ಇದು ಹೈಡ್ರೊಜೆನ್ನ್ನು ಬಳಸಿಕೊಂಡು ಕರೆಂಟ್ನ್ನು ಹುಟ್ಟು ಹಾಕುತ್ತದೆ. ಈ ಕರೆಂಟನ್ನು ಬಳಸಿ ಕಾರು ಓಡುತ್ತದೆ. ಬಿ.ಎಮ್.ಡಬ್ಲು, ಫ಼ೋರ್ಡ್ ಮುಂತಾದ ಕಂಪನಿಗಳು ಈಗಾಗಲೇ ಹೈಡ್ರೋಜೆನ್ ಕಾರುಗಳನ್ನು ಹುಟ್ಟಾಕಿವೆ.

ಹೈಡ್ರೊಜೆನ್ ಕಾರುಗಳನ್ನು ತಯಾರು ಮಾಡುವದು ತುಸು ದುಬಾರಿ ಆದುದರಿಂದ ಇವುಗಳ ತಯಾರಿಕೆಯನ್ನು ಸೋಯಿ ಮಾಡಲು ಹಲವು ಕಂಪನಿಗಳು ಜತನಗೈಯ್ಯುತ್ತಿವೆ.
ಈ ಪಾಪೆಯಲ್ಲಿ ನೀವು ನೋಡುತ್ತಿರುವದು, ಬಿಎಮ್ಡಬ್ಲು ಕಾರಿಗೆ ಅಳವಡಿಸಲಾಗಿರುವ ಹೈಡ್ರೋಜೆನ್ ತುಂಬಿಸಲು ವಾಲ್ವ್.
ಕಾಂಪ್ರೆಸ್ ಮಾಡಿದ ಗಾಳಿ ಕಾರು: ಇಂಡಿಯಾದಲ್ಲೇ ಕೆಲವೇ ದಿನಗಳಿಗೆ ___LINK_OPEN_href="http://en.wikipedia.org/wiki/Air_vehicle" target="_blank"___TATA/MDI OneCat ಅನ್ನುವ ಕಾರು ಓಡಾಡಲಿದೆ. ಇದು ಗಾಳಿಯ ಮೇಲೆ ಓಡುತ್ತದೆ!! ಗಾಳಿಯನ್ನು ಒತ್ತಡಕ್ಕೊಳಪಡಿಸಿ fuel ಆಗಿ ಬಳಸಿಕೊಳ್ಳಲಾಗುತ್ತದೆ. ಟಾಟಾದವರು, ಎಮ್.ಡಿ.ಐ ಒಂದಿಗೆ ಒಪ್ಪಂದ ಮಾಡಿಕೊಂಡು ಟಾಟಾ ಈ ಕಾರನ್ನು ತಯಾರು ಮಾಡುತ್ತಿದೆ. ಈ ಕಾಂಪ್ರೆಸ್ಡ್ ಏರ್ನು ಕೂಡ ಪೆಟ್ರೋಲ್/ಡೀಸೆಲ್ ಗಳಂತೆ ಪಂಪ್ಗಳಲ್ಲಿ ತುಂಬಲಾಗುತ್ತದೆ,, ಆದರೆ ಇದು ಅವುಗಳಿಗಿಂತ ತುಂಬಾ ಚೀಪ್!. ಈ ಕಾರನ್ನು ಮಂದಿ ಮೆಚ್ಚಿಕೊಂಡರೆ ಮುಂದಿನ ಕಾರು ಉದ್ದೆಮ ಬೇರೆನೇ ಆಗುವದು.
ಸೋಲಾರ್ ಕಾರು: ಕೆಲ ವರುಶದ ಹಿಂದೆ ಕೆಲ ಐ.ಐ.ಟಿ ಓದುಗರು ಸೋಲಾರ್ ಕಾರ್ ಒಂದನ್ನು ಹುಟ್ಟು ಹಾಕಿದ್ದರು. ___LINK_OPEN_href="http://en.wikipedia.org/wiki/Solar_car" target="_blank"___ಸೋಲಾರ್ ಕಾರ್ಗಳು ಈಗಿನ ಮಟ್ಟಿಗೆ ಎಕ್ಸೆರಿಮೆಂಟ್ ಲೆವೆಲ್ಲಿನಲ್ಲೇ ಇದ್ದರೂ ಮುಂಬರುವ ದಿವಸಗಳಲ್ಲಿ ಇವು ಸಾದ್ದೆತೆಗಳಾಗುವದಲ್ಲಿ ಅನುಮಾನವಿಲ್ಲ.

ಸೋಲಾರ್ ಕಾರುಗಳಿಗೆ ಬಾನುವಿನ ಕದಿರೇ fuel. ಹಾಗಾಗಿ ಇವುಗಳನ್ನು ನಡೆಸುವದು ಎಲ್ಲಕ್ಕಿಂತ ಚೀಪ್. ಆದರೆ ಇವನ್ನು ತಯಾರು ಮಾಡುವದು ಈಗಿನ ಮಟ್ಟಿಗೆ ತುಟ್ಟಿ, ___LINK_OPEN_href="http://en.wikipedia.org/wiki/Tesla_Motors" target="_blank"___ಟೆಸ್ಲಾ ಮೋಟಾರ್ಸ್ ಅನ್ನುವ ಕಂಪನಿ ತಯಾರು ಮಾಡಿದ Tesla Roadster ಅನ್ನುವ ಎಲೆಕ್ಟ್ರಿಕ್ ಸ್ಪೋರ್ಸ್ ಕಾರಿಗೆ ತುಂಬಾ ಬೇಡಿಕೆ ಇದೆ ಅಂತೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!