ಇತ್ತೀಚಿಗೆ ನಾನು ಅತ್ತೇಯಿಲ್ಲ

ಏನಿರಬಹುದು ಕಾರಣ?

ಕಂಬನಿ ಒರೆಸುವಕೈಗಳಿಲ್ಲ

ಎಂದು ಹಿಂಜರಿಯಿತೇನೋ ಮನ!


ದುಃಖವಾದರೆ ಅತ್ತುಬಿಡಬೇಕು

ಅದಕೇಕೆ ಯಾರದೋಹಂಗು?

ಮನಸ್ಸೇ ಹೀಗೆ ಮಾತೇ ಕೇಳುವುದಿಲ್ಲ

ಸದಾ ಇಲ್ಲದರದ್ದೇ ಗುಂಗು.


ಕಣ್ಣೀರಿಗೂಗೊತ್ತಾಗಿರಬೇಕು

ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು,

ಸಮಯ ಸಾಧಿಸಿತುಳುಕಿಬಿಡುತ್ತದೆ

ಕೆಲವೊಮ್ಮೆ ಎಲ್ಲರ ಮುಂದೂ.


ಇವರಿಬ್ಬರ ನಡುವಿನಕಿತ್ತಾಟದಲ್ಲಿ

ಭಾವನೆಗಳಿಗೆ ನಿರಂತರ ಪೆಟ್ಟು,

ಇದಾವುದರ ಗೊಡವೆ ಬೇಡವೆಂದು

ಓಡಿಹೋಗಿದೆ ಬುದ್ಧಿ ಕೈಕೊಟ್ಟು.


ಹೇಗಾದರು ಮಾಡಬೇಕಿದೆ ಬೇಗ

ಇವರ ನಡುವೆಸಂಧಾನ,

ಒಂದಷ್ಟು ಹೊಂದಾಣಿಕೆಗಳಾದ ಮೇಲೆ

ಆಗಬಹುದೇನೋ ಸಮಸ್ಯೆ ಶಮನ.