ವ್ಯರ್ಥ ಪ್ರೀತಿ.
ಪ್ರತ್ಯೂಷದ ನೆರಳಲ್ಲಿ ಹಾಸಿದ ರಂಗೋಲಿ
ವ್ಯರ್ಥವಾಯಿತು ಗೆಳೆಯಾ ನಿನ್ಗದಾರಿ ಕಾದು
ಕಣ್ಣ ತೆರೆಯ ಕೊನೆಯಲ್ಲಿ ಬಾಗಿದ ಕಾಡಿಗೆ
ಬಿಕ್ಕಳಿಸಿತು ಗೆಳೆಯಾ ವ್ಯರ್ಥನಗುವಾಗಿ.
ಪರೀಕ್ಷೆಗಳ ಬರೆದು ಬರೆದು ನಪಾಸಾದ ಹುಡುಗನಂತೆ
ಪರಿವಳಿಸಿದ ಪುಷ್ಪನೆಲಕಚ್ಚಿತು ಕರಕಲಾಗಿ
ಬಾಡದ ಹೂಗಳ ತೋರಣ ಬಾಡಿ ಬಸವಳಿಯಿತು
ನಲ್ಲನ ನಿರೀಕ್ಷೆಯಝಳದಲ್ಲಿ.
ಬಂಗಾರದ ತೋಳಬಂದಿ ಎದೆಯ ಇರಿಯಿತು.
ನಿರಾಕರಣೆಯ ಕುರುಹಾಗಿ
ಕೃಷ್ಣನಕೊಳಲು ರಾಧೆಗಾಗಿಯಲ್ಲ!
ಸತ್ಯಭಾಮೆಗಲ್ಲ! ಗೋಪಿಕೆಯರಿಗೆ ಮೀಸಲು!
ಎಂಥ ಬಯಲುಬೆಂಗಾಡಾಯಿತು
ಈ ವಸುಂಧರೆಯ ಒಡಲು!!
ಕೈಗೆ ಹಚ್ಚಿದೆ ಮದರಂಗಿ, ಹಣೆಯಲ್ಲಿಟ್ಟಸಿಂಧೂರ,
ಮುಡಿದೆ ಮಲ್ಲಿಗೆ ನಿನ್ನ ಉಸಿರಾಗಿ
ಬರಲಿಲ್ಲ ನೀ ಬದಲಾಗಿ
ನನ್ನಒಲವಾಗಿ.
ಪ್ರತ್ಯೂಷದಿ ನಿತ್ಯ ನಿರೀಕ್ಷೆಯ
ಬಣ್ಣ ಬಣ್ಣದ ರಂಗೋಲಿ
ವ್ಯರ್ಥವಾಯಿತುಗೆಳೆಯಾ
ನಿನ್ನ ನೆನಪಾಗಿ.
ಪ್ರತಿಕ್ರಿಯೆ (1)