ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಛೇದದಲ್ಲಿ ಸೇರಿಸಬೇಕು ಅನ್ನುವ ತುಳುವರ ಹೋರಾಟಕ್ಕೆ ಈಗ ಆನೆ ಬಲ ಬಂದಂತಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ನಾರಾಯಣಗೌಡರು ಇದಕ್ಕೆ ಬೆಂಬಲ ಸೂಚಿಸಿ, ತುಳುವರ ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ಮಾತಾಡಿರುವ ಸುದ್ಧಿ ನಮ್ಮ ಮಂಗಳೂರಿನ ಈ ವೆಬ್ ಸೈಟನಲ್ಲಿ ನೋಡಿದೆ.
http://www.daijiworld.com/news/news_disp.asp?n_id=53254&n_tit=Mangalore%3A+KRV+to+Strive+for+Inclusion+of+Tulu+in+Eighth+Schedule
ನಿಜಕ್ಕೂ ಒಳ್ಳೆಯ ಕೆಲಸವೇ,
ತುಳು ಮತ್ತು ಕನ್ನಡಿಗರ ನಡುವಿನ ಸ್ನೇಹ ಸಂಬಂಧವನ್ನು ಯಾವಾಗಲೂ ಮುರಿಯಲು ಯತ್ನಿಸುವವರಿಗೆ ಇದು ಸರಿಯಾದ ಉತ್ತರ ಅಂತ ನನಗನ್ನಿಸುತ್ತೆ. ನೀವೆನ್ ಅಂತೀರಾ?
ಪ್ರತಿಕ್ರಿಯೆ (3)