ಕಾಸ್ಟ್ ಕಟ್ಟಿಂಗ್ ಮಾಡಲು ನನ್ನಲ್ಲಿ ನನ್ನ ಗೆಳತಿಗೊಸ್ಕರ ಆಗಬೇಕಾದ ಬದಲಾವಣೆಗಳು.

1 ರಾತ್ರಿ ೪- ೫ ತಾಸು ಮಾತಡುವದನ್ನು ೧ ತಾಸಿಗೆ ಇಳಿಸಬೇಕು.( ನಿದ್ದೆಗೆ ಕಟ್ಟಿಂಗ್ ಬೀಳಬಾರದು ಅಂತ)
2 ಮೊದಲು ಗೆಳತಿಗೆ ಫೋನ್ ಮಾಡಿದಗಲ್ಲೆಲ್ಲಾ ನೂರೆಂಟು ಬಾರಿ ಹೇಳುತಿದ್ದಾ ಐ ಲವ್ ಯು, ಈಗ ಬರಿ ಒಂದೇ ಸಲ ಹೇಳುವದು.
3 ಅವಳ ಪ್ರತಿಯೊಂದು ಮಾತಿಗೆ ಕೋತೀ ಎನ್ನುವದನ್ನು ಬಿಡುವುದು. ( ಕೋತೀ ಅನ್ನುವದ ಬಿಟ್ಟರಾದರು ಕಪಿಚೆಸ್ಟೆ ಬಿಡುವಳು ಅನ್ನೋ
ಆಕಾಂಕ್ಷೆಯೊಂದಿಗೆ)
4 ಅವಳ ಅಮ್ಮ ಅಪ್ಪನಿಗೆ ಬಯ್ಯಬಾರದು.( ಅವಳು ಕೋಪಿಸಿಕೊಂಡು ಮೌನಕ್ಕೆ ಮರೆ ಹೋಗುವದನ್ನು ತಡೆಯಲು)
5 ಅವಳು ಹೇಳುವ ಯಾವ ಮಾತಿಗೂ (ಕೆಲಸಕ್ಕೆ ಬಾರದ) ಅಡ್ಡ ಮಾತಾಡಬಾರದು.
6 ಹುಚ್ಚು ಪ್ರಶ್ನೆಗಳನ್ನ ಕೇಳುವುದನ್ನ ಬಿಡುವದು. (ನನ್ನ ಎಷ್ಟು ಪ್ರೀತಿಸುತ್ತೀಯ? ಚೆನ್ನಾಗಿದ್ದೀಯ?ಊಟ ಆಯ್ತಾ? ಒಂದು ಹಾಡು
ಹೇಳೇ?.......... ನಿದ್ದೆ ಹಾಳಾಗದಿರಲಿ ಅಂತ.)

ಶಶಿ ಬಿರ್ಗೆ