ಕಿತಾಗಾಕಿ ಗುರುವನ್ನು ಭೆಟ್ಟಿಯಾಗಲು ಬಂದ . ಆಗ ಅವನು ಕ್ಯೋಟೊ ಪ್ರಾಂತದ ರಾಜ್ಯಪಾಲನಾಗಿದ್ದ . ತನ್ನ ಗುರುತಿನ ಚೀಟಿಯನ್ನು ಗುರುವಿನ ಸಹಾಯಕನ ಮೂಲಕ ಕೊಟ್ಟು ಕಳಿಸಿದ . ಆ ಚೀಟಿಯಲ್ಲಿ ಹೀಗೆ ಬರೆದಿತ್ತು - " ಕಿತಾಗಾಕಿ , ಕ್ಯೋಟೊದ ಗವರ್ನರ್ ". ಗುರು ಅದನ್ನು ನೋಡಿ ಹೇಳಿದ - " ಗವರ್ನರ್ ಜತೆಗೆ ನನಗೆ ಏನು ಕೆಲಸ ? ಅವನಿಗೆ ಹೋಗಲು ಹೇಳಿ " . ಸಹಾಯಕ ವಿಷಾದ ಸೂಚಿಸುತ್ತ ಆ ಚೀಟಿಯನ್ನು ಹೊರಗೆ ಕಾದು ನಿಂತಿದ್ದ ಕಿತಾಗಾಕಿಗೆ ಮರಳಿಸಿದ . "ನನ್ನದೇ ತಪ್ಪು " ಎಂದ ರಾಜ್ಯಪಾಲ ಚೀಟಿಯಲ್ಲಿದ್ದ " ಕ್ಯೋಟೊದ ಗವರ್ನರ್ " ಎಂಬ ಬರಹವನ್ನು ಗೀಚಿ ಮರೆ ಮಾಡಿ ' ನಿಮ್ಮ ಗುರುಗಳನ್ನು ಇನ್ನೊಮ್ಮೆ ವಿನಂತಿಸುತ್ತೀರಾ ? ' ಎಂದು ಕೇಳಿದ . ಗುರು ಆ ಚೀಟಿಯನ್ನು ನೋಡಿದವನೇ " ಓ! ಇದು ನಮ್ಮ ಕಿತಾಗಾಕಿಯಲ್ಲವೇ ? ನಾನು ಈ ಮನುಷ್ಯನನ್ನು ನೋಡಬೇಕಲ್ಲ ? " ಎಂದ .
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಒ೦ದು ಜ಼ೆನ್ ಕಥೆ
ಝೆನ್ ಕಥೆಗಳು
ಆತುರ --ಒ೦ದು ಜ಼ೆನ್ ಕಥೆ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!