ಎವೆ ಮುಚ್ಚಿದಾಗ

ಕನಸು ಚಿಗುರೊಡೆದಾಗ

ಕಣ್ಣ ಕತ್ತಲ ತೆರೆಯಮೇಲೆ

ಮೂಡುವುದು ನವಿರಾಗಿ

ತಂಗಾಳಿಗೆ ಬೀಸಿದಂತೆ

ಸರಿದಾಡುವ ನಿನ್ನ

ಮುಂಗುರುಳ ರಾಸಿ

ಚೆಲುವಾದ ಮೊಗದಲ್ಲಿ

ಹೂವಂತೆ ತುಂಬಿದ

ತುಟಿಯಮೇಲಿನ

ಮುಗುಳು ನಗೆಹೂ

ನೆನೆದಾಗಲೆಲ್ಲ ಇಣುಕಿ

ನನ್ನ ನೆನಪಿನ

ಕಡಲನ್ನೇ ಕದಡುತ

ನನ್ನ ಸೆರೆಯಾಗಿಸುವ

ನಿನ ಚಂಚಲಿತ ಕಣ್ಣು

ಕಚಕುಳಿಯನಿಡುತ 

ಹರಿದಾಡುವ

ನಿನ ಕಳ್ಳ ಓರೆನೋಟ

ಕಾಮನ ಬಿಲ್ಲಂತೆ

ಬಾಗಿದ ಹಣೆ ಉಬ್ಬು

ಬಾಡದ ಸವಿ ತುಟಿ

ಕಾಡಿತ್ತು ಕನವರಿಕೆಯಲಿ

ಮೂಡುತ ಕಾವ್ಯವಾಗಿ

ಮರೆತು ಮರೆವಾದರು

ಮರಳಿ ಎನ್ನ ಪಲುಕಿನಲಿ

ಇಣುಕುತಲಿರುವ

ಕಿರುಗೆಜ್ಜೆಯ ನಾದಕೆ

ಲಜ್ಜೆಯ ಹೆಜ್ಜೆಯನಿಡುತ 

ಬಳ್ಳಿಯಂತೆ ಬಳುಕಾಡುವ

ಮರುಳ ವೈಯ್ಯಾರದ ನಡೆ

ತೋಲಾಡುವ ಕಿವಿಯೋಲೆ

ಕುಣಿಯುವ ತೆಳುವಾದ

ಬಳುಕುವ ನಡುವು

ನಿನ್ನ ಬೆಡಗಿನ ನಡೆಗೆ

ಅಲೆದಾಡುವ ಕುಚಕುಂಬ

ಕುಣಿಸುತಿದೆನ್ನ ಪಲುಕನು

ಮಯ್ಯಮರೆಸುವ ನಿನ

ಹೊಳೆಯುವ ಮೂಗಿನ

ಮುತ್ತಿನ ಮೂಗುತಿ

ಬಾ ಎಂದು ಕರೆದಂತಿಹ

ನಿನ್ನ ಕಿಲ ಕಿಲ ನಗು

ಚೆಲುವಿಗೆ ಚೆಲುವು

ನಿನ್ನ ನವಿರಾದ ಕೆನ್ನೆ

ಪಕಳೆಗೆನ್ನೆಯ ಮೇಲೆ

ಸುಳಿಯುವ ನಗೆಗುಳಿ

ಚೆಲುವೆ ನಿನ ಚೆಲುವು

ಸುಳಿದರೆ ಸುಕನಿದ್ದೆಯಲಿ

ಕನಸಾಗಿ ನನ್ನೊಳಗೆ

ಇರೂಳಾಯಿತು ಹಿತ

ಹರೆಯದ ಮಂಪರೊಳಗೆ

ಹೊರೆಯಾಗಿ ನಿದಿರೆಗೆ