ಅಂಗಡೀಗೆ ಹೋದಾಗ ಪ್ರತೀಸಲ ಈ ಪ್ರಶ್ನೆಗೆ ಪೇಪರ್ ಅಂತ ಹೇಳಿ ಏನೋ ಘನಾಂದಾರಿ ಕೆಲಸ ಮಾಡ್ತೀನಿ ಅಂದ್ಕೋತಿದ್ದೆ. ಎಷ್ಟೇ ಅಂದ್ರೂ ಪ್ಲಾಸ್ಟಿಕ್ ಗಿಂತ ಪೇಪರ್ ವಾಸಿ ಅಂತ.

ಆದ್ರೆ ಈಗನ್ನಿಸ್ತಿದೆ - ನಾವು ಚಿಕ್ಕೋರಾಗಿದ್ದಾಗ ಬಳಸ್ತಿದ್ದ ಹಾಗೆ ಮರುಬಳಕೆ ಮಾಡೋಕಾಗೋ ಅಂತಹ ಬಟ್ಟೆಯ ಚೀಲವನ್ನೋ ಅಥವಾ  ಪ್ಲಾಸ್ಟಿಕ್ ಬುಟ್ಟಿಯನ್ನೋ ಉಪಯೋಗಿಸ್ಬೇಕು ಅಂತ. ನೋಡ್ಬೇಕು ಎಷ್ಟು ಪಾಲಿಸಕ್ಕಾಗುತ್ತೋ ಅಂತ.

ಒಂದು ಸಲ ಈ ಬರಹ ಓದಿ - ___LINK_OPEN_href="http://www.greenfeet.net/newsletter/debate.shtml" target="_blank" title="ಪೇಪರ್ ಚೀಲ"___ಪೇಪರ್ ಚೀಲಗಳ ಅನಾಹುತ ತಿಳಿಯೋಕೆ.

ಸಾಧ್ಯವಾದರೆ ಮರುಬಳಕೆ ಮಾಡೋಕಾಗೋ ಚೀಲಗಳನ್ ಬಳಸೋದಕ್ಕೆ ಶುರು ಮಾಡೋಣ್ವಾ? ಹನಿ ಹನಿಗೂಡಿದ್ರೆ ಹಳ್ಳ ಆದ್ರಿಂದ, ಎಲ್ರೂ ಅವರವರಿಗಾಗೋ ಅಷ್ಟು ಮಾಡಿದರೆ ಎಷ್ಟೋ ಒಳ್ಳೇದು.

-ಹಂಸಾನಂದಿ