ಅಸಭ್ಯ ಪ್ರತಿಕ್ರಿಯೆಗಳನ್ನು ಬರೆದದ್ದು ಕಂಡುಬಂದಲ್ಲಿ ಆಯಾ ಸದಸ್ಯರ ಪ್ರೊಫೈಲ್ ಬ್ಲಾಕ್ ಮಾಡಲಾಗುವುದು.


ಮೊದಲನೆಯ ಹಂತವಾಗಿ ಸದಸ್ಯರಾದ maheshaರವರ ಅಕೌಂಟನ್ನು ಸಂಪದದಲ್ಲಿ ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದೆ. ಮತ್ತಷ್ಟು ಸದಸ್ಯರ ಪ್ರೊಫೈಲುಗಳನ್ನು flag ಮಾಡಿ ಎಚ್ಚರಿಕೆ ನೀಡಲಾಗಿದೆ - ಇವರುಗಳು ಸೇರಿಸಿದ ಪ್ರತಿಕ್ರಿಯೆಗಳೂ ಇನ್ನು ಮುಂದೆ ಸಭ್ಯತೆಯ ಚೌಕಟ್ಟಿನಿಂದ ಆಚೆಯಿರುವುದು ಕಂಡುಬಂದಲ್ಲಿ ಆಯಾ ಪ್ರೊಫೈಲು ಬ್ಲಾಕ್ ಆಗುವುದು.


ಬರುವ ದಿನಗಳಲ್ಲಿ ಯಾವುದೇ ಸದಸ್ಯರಿಂದ ವೈಯಕ್ತಿಕ ಟೀಕೆಗಳನ್ನೊಳಗೊಂಡ ಅಸಭ್ಯ ಪ್ರತಿಕ್ರಿಯೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಯಾವುದೇ ಮುನ್ಸೂಚನೆಯಿಲ್ಲದೆ, ಎಚ್ಚರಿಕೆ ನೀಡದೆ ಬ್ಲಾಕ್ ಮಾಡಲಾಗುವುದು. ಪ್ರತಿಕ್ರಿಯೆಗಳನ್ನು ಸೇರಿಸುವಾಗ ಈ ವಿಚಾರ ಸದಸ್ಯರ ಗಮನದಲ್ಲಿರಲಿ.