ಬಾ ಬಾರೋ ಚಂದ್ರಮಾ!!!

ಇರುಳಲ್ಲಿ ಬೆಳಕು ಚೆಲ್ಲಿ
ನೀಲಿಯಾಗಸದಲ್ಲಿ ಬೆಳ್ಳಿ ತಳ್ಳಿ
ಶಾಂತತೆಯ ಹುಣ್ಣಿಮೆ ರಾತ್ರಿಯಲ್ಲಿ
ಬಾ ಬಾರೋ ಚಂದ್ರಮಾ ಬಾನಿನಲ್ಲಿ...........೧

ನೋಡುತಿರೆ ನಿನ್ನ, ನನ್ನದಾಗುವುದು ಚೇತನಾ
ನಲಿವಿನ ನಯನಾ, ಗೆಲುವಿನ ಗಮನಾ
ಸುಂದರ ಕವನಾ, ಸುಮಧುರ ಗಾಯನಾ
ಬಾ ಬಾರೋ ಚಂದ್ರಮಾ ಚಂದನಾ...........೨

ಬರಡೆಂಬ ಬಿಸಿಲಿಂದ ಬಳಲಿದ
ಬಾಳಿಗೆ ಬಾರದೇ?, ನೀ ಬಿಳಿಯಾದ
ಬೆಳಕಿನ ತಂಪಿನ ಮಹದಾನಂದ!
ಬಾ ಬಾರೋ ಚಂದ್ರಮಾ ಚಂದದಿಂದ.........೩

(ಭವಾನಿ ಅವರೆ, ಇಲ್ಲಿದೆ ನನ್ನ ಚಂದ್ರನ ಮೇಲಿನ ಕವನ (ಕೆಲವು ನುಡಿಗಳು). ಫಾಲ ಅವರೆ, ಸಾಧ್ಯವಾದರೆ ಒಂದು ಒಳ್ಳೇ ಚಂದಿರನ ಚಿತ್ರ ಹಾಕುತ್ತೀರಾ? ಯಾರಾದರೂ ಇದ್ದವರು ಹಾಕಬಹುದು)