"ಇನ್ನೂ ಮಲಗಿಲ್ವ?" - ಕೆಳಗಿಳಿದು ಬಂದ ಅಮ್ಮನ ಪ್ರಶ್ನೆ.

"ಇಲ್ಲ, ಕ್ಲೈಂಟ್ ಆನ್ಲೈನ್ ಇದಾನೆ" ಅಂತ ಏನೋ ಹೇಳಿ ಮತ್ತೆ ಲ್ಯಾಪ್ ಟಾಪ್ ಹಿಡಿದು ಕುಳಿತದ್ದು. ಮನೆ ಎದುರಿಗೆ ಮೊನ್ನೆಯಷ್ಟೇ ಹಾಳಾಗಿ ಸುಖ ನಿದ್ರೆ ತರುತ್ತಿದ್ದ ಸೋಡಿಯಂ ವೇಪರ್ ಲ್ಯಾಂಪನ್ನು ನೀವು ಮತ್ತೆ ಹಾಕಿಸಿದ್ದರಿಂದ ನಿದ್ರೆ ಬರಲಿಲ್ಲ ಎಂದು ಹೇಳಿದ್ದರೆ "ನಿನಗೆ ನಿದ್ರೆ ಬರಲಿಲ್ಲ ಅಂತ ಸಬೂಬು ಹೇಳುತ್ತಿದ್ದೀಯ ಅಷ್ಟೇ" ಎಂದಾರು ಅಮ್ಮ.

ಅದೂ ಇದೂ ಓದುತ್ತ, ನಾಳೆಯಿಂದಾದರೂ ಒಂದೆರಡು ಕಿ.ಮೀ. ಓಡಾಡಿ ಸುಸ್ತಾಗಬೇಕು ಎಂದು ಮತ್ತೊಮ್ಮೆ ಅಂದುಕೊಳ್ಳುತ್ತ, ಈಗಷ್ಟೇ ಬರಹವೊಂದು ನೆನಪಿಸಿದ "ಬೋಂಡಾ ಜಾಮೂನು!!!" ತಿಂದಾದರೂ ದಪ್ಪಗಾಗಬೇಕು ಎಂದುಕೊಳ್ಳುತ್ತ ಬರೆಯುತ್ತಿರುವೆ ಇದನ್ನು - ದೀಪ ಆರದು ಇನ್ನೂ laptopನ ಬ್ಯಾಟರಿ ಮುಗಿಯುವ ತನಕ!