ಹೋಗಲೇ ಬೇಕಿದೆ ದೂರ
ಸಂಗಾತಿ ಮರೆತು ನಾ ತೋರಿದೆಲ್ಲಾ
ಪ್ರೀತಿ ಅವರಿಗೂ ಬೇಕಿದೆ ನಿನ್ನದೇ
ಶೃತಿ , ಭಾರದ ಮನಸಿನಿಂದ ಒಮ್ಮೆ
ನಿನಗೆ ವಿದಾಯ

ಬಾಳತಿರುವಿನಲ್ಲೊಮ್ಮೆ ನಿನ್ನ
ಪರಿಚಯವಾಯ್ತು ,ನನಗಾಗಲೆ
ಮತ್ತೊಬ್ಬರೊಡನೆ ಬಂಧನವಾಗಿತ್ತು
ಆದರೂ ನಿನ್ನಾಕರ್ಷಣೆಗೆ ಮನ
ಮರುಳಾಯ್ತು, ಎರೆಡು ದೋಣಿಗಳ ಮೇಲೆ
ಕಾಲಿಟ್ಟಂತೆ ಒಮ್ಮೆ ನೀನು
ಮತ್ತೊಮ್ಮೆ ಅವರು
ಹೀಗೆ ಬಿಡಲಾರದೆ ಇಬ್ಬರನ್ನೂ
ನಾ ಕೊರಗಿದ ದಿನಗಳೇಷ್ಟೋ
ಅದರ ಅಳತೆಯೆಷ್ಟೋ

ಮನ ನುಡಿಯುತಿತ್ತು ನಾ
ಮೋಸ ಮಾಡಿದೆನೆಂದು ಎನ್ನ
ನಂಬಿ ನಿನ್ನ ಜೊತೆ ಮಾಡಿದವರಿಗೆ.
ಆದರೇನು ಮಾಡಲಿ
ನಿನ್ನಮಾಟವೂ ಆಟವೂ , ದೇಹವೋ
ಸೆಳೆದಷ್ಟುನನ್ನಾರು ಸೆಳೆಯಲಿಲ್ಲ
ಪ್ರೀತಿ, ಪ್ರೇಮಗಳ ನಡುವಲ್ಲಿ
ಮೋಸವೇನು ಸಾಚವೇನು?

ಎಲ್ಲೆ ಮೀರಿ ನಾ ನಿನ್ನಾವಲಂಭಿಸಿದೆ
ನೀನಿಲ್ಲದೆ ನಾನಿಲ್ಲ ಎಂದೆನಿಸಾದಾಗಲೆಲ್ಲಾ
ನಾ ನಿನ್ನ ಮೇಲೋ , ನೀನನ್ನ ಮೇಲೋ
ಅರಿವಾಗದಷ್ಟು ಮಂಪರು ಕಣ್ಣಿಗೆ

ನಾವಿಬ್ಬರೂ ಸುತ್ತಾಡದ ಜಾಗಗಳಿಲ್ಲ
ನಾ ಮಾತಾಡದ ಮಾತುಗಳಿಲ್ಲ
ಮತ್ತೊಬ್ಬರಿಗೆ ತಿಳಿಯಬಾರದೆಂದು
ಮಾಡದ ತಂತ್ರಗಳಿಲ್ಲ

ನೀ ಶಾಶ್ವತವೆಂದು ಭಾವಿಸಿದ್ದಾಗಲೆ
ನಿನ್ನ ಅಸಲಿ ಜೊತೆಗಾರ್ತಿಯ
ಕರೆ, ಅನಿಸಿದರೂ ಕರೆಕರೆ
ನಾ ನೀಡಲೇ ಬೇಕಿದೆ
ನೀ ಹೋಗಲೇ ಬೇಕಿದೆ

ಒಲ್ಲದ ಮನಸಿನ ಜೊತೆ
ಭಾರದಿಂದ ಕಳಿಸುತ್ತಿರುವೆ
ವಿದಾಯ ಸಂಗಾತಿ.
:)
:)