ನಾವಿರುವುದೇ ಹೀಗೆ ಹುಡುಗರಾ
ನಮ್ಮಂತರಾಳವನು ತುಸು ಕಾಣಿರಾ?
ಬಾಲ್ಯದ ನೆನಪಿನ ಬುತ್ತಿ ಮನದಲ್ಲಿ
ಹರೆಯದ ಕನಸು ಕಣ್ಣಲ್ಲಿ
ಹೊತ್ತುಕೊಂಡೆ ಇಳಿಯುತೇವೆ ಈ ಹುಚ್ಚು ಹೊಳೆಯಲ್ಲಿ
ನಿಮ್ಮ ಮಾತು ತರುವುದಾದರೂ ಕುಶಿ
ತೋರುತ್ತೇವೆ ಮುನಿಸು ಅದು ಬರೀ ಹುಸಿ
ನಿಮ್ಮ ನೋಟ ಆಗುವುದಾದರೂ ಇಷ್ಟ
ಆಡುತ್ತೇವೆ ಆದಂತೆ ಕಷ್ಟ
ನೀವೆದುರು ಬಂದಾಗ ಬಗ್ಗಿಸಿ ತಲೆ
ನಡೆಯುತ್ತಿದ್ದರೂ ಕಿವಿ ನಿಮ್ಮ ನುಡಿಯುತ್ತಲೆ
ಮನಕಾನಂದ ನೀವು ಹೊಗಳಿದಾಗಲೆ
(ಇನ್ನೂ ಮುಂದೆ ಇದೆ)
ಪ್ರತಿಕ್ರಿಯೆ (9)