ಹುಡುಗಿ ಪ್ರೀತಿಸುತ್ತಾಳೆ.....

ಶ್ರೀಮಂತನ ಸೊಕ್ಕಿನಿಂದ ಉಬ್ಬಿ ನಿಂತ ಪರ್ಸ್ ಅನ್ನು
ನಮ್ಮೂರ ಕರಿಯನ ಬತ್ತಲೆದೆಯಲ್ಲಿ ಅವನ ಮಕ್ಕಳು
ಸುರಿಸಿದ ಕಣ್ಣೀರು ರಕ್ತವಾಗಿ ಹೆಪ್ಪುಗಟ್ಟಿದುದರ
ಅರಿವಿಲ್ಲ ಅವಳಿಗೆ.....

ಹುಡುಗಿ ಪ್ರೀತಿಸುತ್ತಾಳೆ.....

ಹೊಂಡಾ ಸುಜುಕಿಗಳ ಸರದಾರರನ್ನು ,ತಮ್ಮದೇ
ಲೋಕದಲ್ಲಿ ವಿಹರಿಸುವ ಸಾಫ್ಟವೇರ್ ಎಡಿಕ್ಟ್ ರನ್ನು
ಚಪ್ಪಲಿಯಿಲ್ಲದೇ ಕಾಲೆಳೆಯುತ್ತ ಸಾಗಿದವ ಕಾಣುವುದಿಲ್ಲ
ಅವಳಿಗೆ.....

ಹುಡುಗಿ ಪ್ರೀತಿಸುತ್ತಾಳೆ.....

ಟಿವಿ, ಫ್ರಿಜ್,ಮೊಬೈಲ್ ಗಳ ಕ್ರುತಕತೆ ಯನ್ನು
ಆಭರಣಗಳ ಆಡಂಬರವನ್ನು..
ಈ ಮಣ್ಣ ಕಣಕಣವೂ ಬಡವನ ಎದೆಯಲ್ಲಿ
ಪ್ರೀತಿಯಾಗಿ ಹಸಿರಾದುದರ ಅರಿವಿಲ್ಲ
ಅವಳಿಗೆ....

ಹುಡುಗಿ ಪ್ರೀತಿಸುತ್ತಾಳೆ....

ಡೋನೆಶನ್ ಪೋಶಿತ ಡಾಕ್ಟರ್, ಇಂಜಿನೀಯರ್
ಲಂಚವಂತ ಪಿ ಎಸ್ ಐ ಗಳನ್ನು.... ಕೊಡಲು
ಫೀಸಿಲ್ಲದೆ ಮುಸುರೆ ತೊಳೆಯುವವ ಪಾಪ
ಕಾಣುವುದಿಲ್ಲ ಅವಳಿಗೆ....

ಹುಡುಗಿ ಪ್ರೀತಿಸುತ್ತಾಳೆ......
ಈಗಿನ ಹುಡುಗಿಯರು ಪ್ರೀತಿಸುವುದೇ ಹೀಗೆ......!