ಆದರೂ ಚಿಂತಿಲ್ಲ ಒಂದ್ವೇಳೆ ಕರ್ನಾಟಕದ ಕೇಸರೀಕರಣ
ತಡೆಯಿರಿ ನೋಡೋಣ ಆಗದಂತೆ ದೇಶದ ಇಟಲೀಕರಣ
ಅವರ ಇದಿರು ನಿಂತು ಯಾಕೆ ಯಾರೂ ಉಸಿರೆತ್ತುವುದಿಲ್ಲ
ನಮ್ಮವರ ಬೆನ್ನಿಗೇ ಇಲ್ಲಿ ಹಿಂದಿನಿಂದ ಚೂರಿ ಹಾಕುವರಲ್ಲಾ
ಆಶಾಢಭೂತಿತನದ ಪ್ರದರ್ಶನ ನಡೆದಿದೆ ಇಲ್ಲಿ ನಿರಂತರ
ಮತದಾರ ಮತ ನೀಡಿದರೂ ಆಳಲು ಬಿಡಲಾರ ಬರಹಗಾರ
ಸುಮ್ಮನಿರಬೇಡಿ ಕೋಮುವಾದಿಗಳೆಂಬ ಶಂಕೆ ನಿಮಗೆ ಇದ್ದೂ
ಹೂಡಿ ಕೋರ್ಟಲ್ಲಿ ದಾವೆ ಮಾಡಿ ಅವರೆಲ್ಲರ ಮಾನ್ಯತೆ ರದ್ದು
ಯಾರದೋ ಮನದ ಮಾತಿಗೆ ಮುಖವಾಣಿಯಾಗುವವರು
ನಾಲ್ಕು ಸಾಲು ಬರೆದು ತಮ್ಮ ತೀಟೆ ತೀರಿಸಿಕೊಳ್ಳುವವರು
*******************************
ಪ್ರತಿಕ್ರಿಯೆ (5)