ತೊದಲು ಮಾತುಗಳ ಆಟ

ಮುಗ್ಗರಿಸಿ ಬಿದ್ದೇಳುವ ಆಟ;

ಶಾಲೆ ಅಕ್ಷರ ಪಾಠ ಆಟ ಓಡಾಟ

ವಿದ್ಯೆ ಪದವಿ ಕೆಲಸಕ್ಕೆ ಅಲೆದಾಟ;

ಮದುವೆ, ಆಸ್ತಿಗಳಿಗೆ ಓಡಾಟ

ಮಕ್ಕಳು ಜವಾಬ್ದಾರಿ ಪರದಾಟ;

ಅನಾರೋಗ್ಯ ಆಸ್ಪತ್ರೆ ಜಂಜಾಟ

ಕಾಲುಗಳು ಸೋತು ಕುಂಟಾಟ;

ವ್ಯಸ್ತರ ನಡುವಲ್ಲಿ ಒಂಟಿ ನೋಟ;

ಕಾಲ ಕರೆದಾಗ ಎಲ್ಲರಿಗೂ ಟಾಟಾ;

ಬಾಳಿನರ್ಥಕ್ಕಾಗೆಲ್ಲೆಡೆ ಹುಡುಕಾಟ

ಅರ್ಥವಾಗದೆಂದೂ ಜೀವನದಾಟ!

🌹 #ಆಸುಮನ 🌹