"ಸಖೀ,

ನಿನ್ನ ಪ್ರಶ್ನೆ ಏನಂತೆ?"

"ಶ್ರೀಕೃಷ್ಣ ದೇವರಂತೆ,

ಹೌದೇ?"

"ಉಹೂಂ...

ಶ್ರೀಕೃಷ್ಣ ದೇವರಲ್ಲವಂತೆ"

"ಅರೇ...

ಶ್ರೀಕೃಷ್ಣ ದೇವರಲ್ಲವೇ?

ಹಾಗಾದರೆ,

ಶ್ರೀಕೃಷ್ಣ ಏನಂತೆ?"

"ನೀನೇ ಹೇಳು...

ಶ್ರೀಕೃಷ್ಣ ಏನಲ್ಲವಂತೆ;

ಶ್ರೀಕೃಷ್ಣ ಏನೆಲ್ಲ ಅಲ್ಲವಂತೆ?

ನಿಜವಾಗಿಯೂ,

ಶ್ರೀಕೃಷ್ಣ ಎಲ್ಲವೂ ಅಂತೆ,

ಎಲ್ಲವುಗಳೊಳಗೂ

ಇಲ್ಲಿ ಎಲ್ಲರ ಒಳಗೂ,

ಶ್ರೀಕೃಷ್ಣನೇ ಇರುವನಂತೆ;

ಶ್ರೀಕೃಷ್ಣ ನಿನ್ನಂತೆ,

ಶ್ರೀಕೃಷ್ಣ ನನ್ನಂತೆ;

ಶ್ರೀಕೃಷ್ಣ ನೀನಂತೆ,

ಶ್ರೀಕೃಷ್ಣ ನಾನಂತೆ,

ಹೀಗಿರಲು ಶ್ರೀಕೃಷ್ಣ

ಹೇಗೆ ದೇವರಂತೆ?"

"ಹೂಂ...

ನಿಜ...

ಶ್ರೀಕೃಷ್ಣ ದೇವರಲ್ಲವಂತೆ!"

#ಶ್ರೀಕೃಷ್ಣ

🌹 #ಆಸುಮನ 🌹