ನಮ್ಮ ಬೀದಿಯ ನಾಯಿಗಳು ನೀಡುತ್ತಿವೆ ನನಗೆ ಹೊಸ ಲುಕ್ಕು
ಅವುಗಳ ತಲೆಗೇರಿದಂತಿದೆ ನಿನ್ನೆಯಿಂದ ಎನೋ ಒಂಥರಾ ಕಿಕ್ಕು
ಕವಿತೆ ಪ್ರಕಟವಾದ ಬ್ರೇಕಿಂಗ್ ನಿವ್ಸ್ ಅವುಗಳಿಗೂ ತಲುಪಿದಂತಿದೆ
ಅವುಗಳಿಗೆ ನನ್ನ ಮೇಲೀಗ ಕೆಂಡದಂತಹಾ ಕೋಪ ಬಂದಿರುವಂತಿದೆ
ಯಾರು ಯಾರೋ ಬೀದಿ ಬೀದಿಗಳಲ್ಲಿ ನಾಳೆ ಆಡಿದರೆ ಜಗಳ
ಆದೀತೆಂದಿದ್ದೆ ನಾನು ಖಂಡಿತಕ್ಕೂ ಅದು ಬರೀ ನಾಯಿ ಜಗಳ
ತಪ್ಪಾಗಿದೆ ಅವುಗಳ ಕೋಮಿನ ಹೆಸರು ತೆಗೆದು ನಾನು ಹೋಲಿಸಿದ್ದು
ಮಾನನಷ್ಟ ಮೊಕದ್ದಮೆ ಹೂಡಿ ಮಾಡಿಸಬಹುದು ನನ್ನೀ ಬ್ಲಾಗು ರದ್ದು
ನಾವು ತುಂಬಾ ಯೋಚಿಸಬೇಕು ಏನಾದರೂ ಬರೆಯುವ ಮೊದಲು
ಇಲ್ಲಾಂದ್ರೆ ರದ್ದಾಗಬಹುದು ನಮ್ಮ ಬ್ಲಾಗು ಪ್ರಕಟವಾಗುವ ಮೊದಲು
***********************************
(http://sampada.net/blog/asuhegde/12/02/2009/16762)
ಪ್ರತಿಕ್ರಿಯೆ (2)