ವಾಮದೇವ ವಿರಿಂಚಿ ತನಯ ಉ

ಮಾಮನೋಹರ ಉಗ್ರ ಧೂರ್ಜಟಿ

ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ

ಕಾಮಹರ ಕೈಲಾಸ ಮಂದಿರ

ಸೋಮಸೂರ್ಯಾನಳವಿಲೋಚನ

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ

ಜಗನ್ನಾಥದಾಸರು ಹರಿಕಥಾಮೃತ ಸಾರದ ನಾಂದಿ ಸಂಧಿಯಲ್ಲಿ ಶಿವನ ಹನ್ನೊಂದು
ಹೆಸರುಗಳನ್ನು ಚಮತ್ಕಾರಿಕವಾಗಿ ಹೆಣೆದು ಏಕಾದಶ ರುದ್ರರನ್ನೂ ನೆನಪಿಸಿ ಸದಾ
ಸುಮಂಗಳವನ್ನು ಕೊಡು ಎಂದು ಶಿವನನ್ನು ಪ್ರಾರ್ಥಿಸುವ ಪದ್ಯ ಇದು. ಮುಂದೆ ಓದಲು haridasa.in ನ ಈ ಪುಟ ನೋಡಬಹುದು...

 

(ಹರಿಪ್ರಸಾದ್, ಈ ಪುಟದಿಂದ ಸಂಪದ ಗುಂಪಿನ ಹರಿದಾಸ ಪುಟಕ್ಕೆ ಲಿಂಕ್ ಕೊಟ್ಟಿರುವದು ok ಎಂದುಕೊಂಡಿದ್ದೇನೆ. ಸರಿಯಲ್ಲ ಎನಿಸಿದರೆ ಇದನ್ನು ತೆಗೆದು ಹಾಕಬಹುದು - ಧನ್ಯವಾದ)